Viral Post: ಏರ್ ಇಂಡಿಯಾದ ನಿರ್ಲಕ್ಷ್ಯದಿಂದ ವಿಮಾನ ನಿಲ್ದಾಣದಲ್ಲಿ ಬೆಕ್ಕಿನ ಮರಿಯನ್ನು ಕಳೆದುಕೊಂಡ ಪ್ರಯಾಣಿಕ
ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದ ನಿರ್ಲಕ್ಷ್ಯದ ಕಾರಣದಿಂದ ಪ್ರಯಾಣಿಕರೊಬ್ಬರು ತಮ್ಮ ಮುದ್ದಿನ ಬೆಕ್ಕಿನ ಮರಿಯನ್ನು ಕಳೆದುಕೊಂಡಿದ್ದಾರೆ. ಮತ್ತು ಅಸಮರ್ಪಕ ಕಾರ್ಯನಿರ್ವಹಣೆಗಾಗಿ ಏರ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಕು ಪ್ರಾಣಿಗಳನ್ನು ಕಳೆದುಕೊಳ್ಳುವುದೇ ಅತೀ ದುಃಖದ ವಿಚಾರ. ಏಕೆಂದರೆ ಆ ಸಾಕು ಪ್ರಾಣಿಗಳ ಯಜಮಾನ ಅವುಗಳನ್ನು ತನ್ನ ಮಕ್ಕಳಂತೆ ಸಾಕಿರುತ್ತಾರೆ. ಏರ್ ಇಂಡಿಯಾದ ಸಿಬ್ಬಂದಿಗಳ ಬೇಜವಾಬ್ದಾರಿಯ ಕಾರಣದಿಂದಾಗಿ ಪ್ರಯಾಣಿಕರೊಬ್ಬರು ತಮ್ಮ ಬೆಕ್ಕಿನ ಮರಿಯನ್ನು ಕಳೆದುಕೊಂಡಿದ್ದಾರೆ. ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಿಬ್ಬಂದಿಗಳು ತಮ್ಮ ಕಾರ್ಯದಲ್ಲಿ ನಿರ್ಲಕ್ಷ್ಯವನ್ನು ತೋರಿದ್ದಾರೆ. ಇದರಿಂದಲೇ ನನ್ನ ಬೆಕ್ಕಿನ ಮರಿ ಕಾಣೆಯಾಗಿದ್ದು ಎಂದು ಅವರು ಆರೋಪಿಸಿದ್ದಾರೆ. ಮತ್ತು ಏರ್ ಇಂಡಿಯಾದ ಸಿಬ್ಬಂದಿಗಳ ನಿರ್ಲಕ್ಷ್ಯವನ್ನು ಟ್ವಿಟರ್ನಲ್ಲಿ ಟ್ವೀಟ್ ಮಾಡುವ ಮೂಲಕ ಖಂಡಿಸಲಾಗಿದೆ.
ಸೋನಿ. ಎಸ್ ಸೋಬರ್ ಏರ್ ಇಂಡಿಯಾದ ಸಿಬ್ಬಂದಿಗಳ ನಿರ್ಲಕ್ಷ್ಯದ ವಿರುದ್ಧ ಮಹಿಳೆಯೊಬ್ಬರು ಟ್ವಿಟರ್ನಲ್ಲಿ ಗುಡುಗಿದ್ದು, ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನನ್ನ ಸ್ನೇಹಿತನ ಬೆಕ್ಕಿನ ಮರಿ ಕಾಣೆಯಾಗಿದೆ. ಇದು ಹೃದಯ ವಿದ್ರಾವಕ ದುರಂತ. ಸಿಬ್ಬಂದಿಗಳ ನಿರ್ಲಕ್ಷ್ಯವು ಅಕ್ಷಮ್ಯ ಅಪರಾಧವಾಗಿದೆ. ಈ ಘಟನೆಗೆ ನೀವೇ ಜವಾಬ್ದಾರರು, ತಕ್ಷಣವೇ ನೀವು ಇದಕ್ಕೆ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
My friend’s pet is missing due to negligence by @airindiain staff. This is a heart-wrenching tragedy and your negligence is inexcusable. You must take responsibility for your actions and make things right immediately. @RNTata2000 A few screenshots explaining what happened. pic.twitter.com/8b4lGenjRR
— Sony S. Somar (@sonyssomar) April 25, 2023
ಟ್ವಿಟರ್ನಲ್ಲಿ ಸೋನಿ ಎಸ್ ಸೋಬರ್ ಅವರು ನೀಡಿರುವ ದೂರಿನಂತೆ ಅವರ ಸ್ನೇಹಿತ ಜಂಗ್ನೀಚಾಂಗ್ ಕರೋಂಗ್ ತಾನು ಬೆಕ್ಕಿನ ಮರಿಗಳೊಂದಿಗೆ ದೆಹಲಿಯಿಂದ ಇಂಫಾಲ್ಗೆ ವಿಮಾನಯಾನದ ಮೂಲಕ ಪ್ರಯಾಣಿಸುವ ಸಲುವಾಗಿ ಏರ್ ಪೋರ್ಟ್ಗೆ ಬಂದಿದ್ದರು. ನಂತರ ಚೆಕ್-ಇನ್ ಕೌಂಟರ್ನಲ್ಲಿ ಬೆಕ್ಕಿನ ಮರಿಗಳು ತನ್ನ ಜೊತೆಗೆ ಪ್ರಯಾಣಿಸಲು ಸಾಧ್ಯವಾಗುವಂತೆ ತನ್ನ ಟಿಕೆಟ್ನ್ನು ಬಿಸ್ನೆಸ್ ಕ್ಲಾಸ್ ಫೈಟ್ಗೆ ಅಪ್ ಗ್ರೇಡ್ ಮಾಡುವಂತೆ ಕರೋಂಗ್ ಕೇಳಿಕೊಂಡಿದ್ದಾರೆ. ಆದರೆ ಈ ಆಯ್ಕೆ ಲಭ್ಯವಿರಲಿಲ್ಲ. ನಂತರ ಕರೋಂಗ್ ಬೆಕ್ಕಿನ ಮರಿಗಳನ್ನು ಕಾರ್ಗೋದ ಮೂಲಕ ಸಾಗಿಸಲು ಒಪ್ಪಿಕೊಂಡಿದ್ದ ಕಾರಣ ಬೆಕ್ಕಿನ ಮರಿಗಳನ್ನು ಏರ್ ಇಂಡಿಯಾ ಸಿಬ್ಬಂದಿಗೆ ನೀಡುತ್ತಾರೆ.
ಇದನ್ನೂ ಓದಿ:Viral Video: ನೀವು ಎಂದಾದರೂ ಆಮೆ – ನಾಯಿ ಫುಟ್ಬಾಲ್ ಆಡುವುದನ್ನು ನೋಡಿದ್ದೀರಾ?
ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 3ರಲ್ಲಿ ಬೋರ್ಡಿಂಗ್ ಮಾಡುವ ಮೊದಲು, ಫೀನಿಕ್ಸ್ ಎಂಬ ಹೆಸರಿನ ಬೆಕ್ಕಿನ ಮರಿಯನ್ನು ಹಾಕಿದ ಬಾಕ್ಸ್ನಿಂದ ತಪ್ಪಿಸಿಕೊಂಡಿದೆ ಎಂದು ಸಿಬ್ಬಂದಿ ಬಂದು ಕರೋಂಗ್ ಬಳಿ ಹೇಳುತ್ತಾರೆ. ಇದರಿಂದ ಬೇಸರಗೊಂಡ ಕರೋಂಗ್, ಬೆಕ್ಕಿನ ಮರಿಗಳಿರುವ ಬಾಕ್ಸ್ನ ಜಾಗೃತೆಯ ಬಗ್ಗೆ ಸಿಬ್ಬಂದಿಗಳು ಅಸಡ್ಡೆ ತೋರಿದ ಕಾರಣದಿಂದಲೇ ಬೆಕ್ಕು ಬಾಕ್ಸ್ನಿಂದ ತಪ್ಪಿಸಿಕೊಂಡಿದೆ ಎಂದು ಹೇಳಿದ್ದಾರೆ. ನನ್ನ ಬೆಕ್ಕಿನ ಮರಿ ಕಾಣೆಯಾಗಿರುವುದಕ್ಕೆ ವಿಮಾನ ನಿಲ್ದಾಣದ ಆನ್ ಗ್ರೌಂಡ್ ಸಿಬ್ಬಂದಿಗಳೇ ನೇರ ಹೊಣೆ. ಮತ್ತು ಆ ಘಟನೆಯ ಸಿಸಿ ಟಿವಿ ಫೂಟೇಜ್ ತೋರಿಸುವಂತೆ ನಾನು ಮಾನವಿ ಮಾಡಿದರೂ, ಅದಕ್ಕೆ ಸಿಬ್ಬಂದಿಗಳು ಸರಿಯಾಗಿ ಉತ್ತರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಟ್ವಿಟರ್ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾ ಕರೆ ಮಾಡಿ ನನ್ನ ಬಳಿ ಕ್ಷಮೆಯಾಚಿಸಿದೆ. ಆದರೆ ನನಗೆ ಈಗ ಕ್ಷಮೆಯಾಚಿಸುವ ಅಗತ್ಯವಿಲ್ಲ. ನನ್ನ ಬೆಕ್ಕಿನ ಮರಿ ತನ್ನ ಬಳಿ ಬಂದು ಸೇರಿದರೆ ಸಾಕು ಎಂದು ಜಂಗ್ನೀಚಾಂಗ್ ಕರೋಂಗ್ ಹೇಳಿದ್ದಾರೆ.
ಈ ಟ್ವೀಟ್ಗೆ ಹಲವಾರು ಕಮೆಂಟ್ಗಳು ಹರಿದು ಬಂದಿವೆ. ಒಬ್ಬ ಬಳಕೆದಾರರು ಇದು ತುಂಬಾ ಬೇಸರದ ಸಂಗತಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಏರ್ ಇಂಡಿಯಾವನ್ನು ಟ್ಯಾಗ್ ಮಾಡಿ ಅವರಿಗೆ ಬೆಕ್ಕಿನ ಮರಿಯನ್ನು ಹುಡುಕಿ ಕೊಡುವ ಮೂಲಕ ನಿಮ್ಮ ತಪ್ಪನ್ನು ಸರಿ ಪಡಿಸಿಕೊಳ್ಳಿ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:31 pm, Fri, 28 April 23