AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 550ಕ್ಕೂ ಹೆಚ್ಚು ಜನರಿಗೆ ವೀರ್ಯದಾನ ಮಾಡಿದ ವ್ಯಕ್ತಿಗೆ ಡಚ್ ಕೋರ್ಟ್ ನಿರ್ಬಂಧ

550 ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದ ಡಚ್ ಮೂಲದ ವೀರ್ಯದಾನಿ ಇನ್ನು ಮುಂದೆ ಆತ ವೀರ್ಯದಾನ ಮಾಡಬಾರದು ಎಂದು ಡಚ್​ನ ನ್ಯಾಯಾಲಯ ಆದೇಶ ಹೊರಡಿಸಿದೆ.

Viral News: 550ಕ್ಕೂ ಹೆಚ್ಚು ಜನರಿಗೆ ವೀರ್ಯದಾನ ಮಾಡಿದ ವ್ಯಕ್ತಿಗೆ ಡಚ್ ಕೋರ್ಟ್ ನಿರ್ಬಂಧ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: Digi Tech Desk|

Updated on:Apr 29, 2023 | 5:52 PM

Share

ನೆದರ್ ಲ್ಯಾಂಡ್​​​ನ್ನು ಬೆಚ್ಚಿಬೀಳಿಸಿರುವ ಇತ್ತೀಚಿನ ಫಲವತ್ತತೆಯ ಹಗರಣಕ್ಕೆ ಸಂಬಂಧಿಸಿದಂತೆ ವೀರ್ಯಾಣುದಾನದ ಮೂಲಕ 550ಕ್ಕೂ ಹೆಚ್ಚು ಮಕ್ಕಳಿಗೆ ತಂದೆ ಎಂದು ಶಂಕಿಸಲಾದ ವೀರ್ಯದಾನಿಯೊಬ್ಬರಿಗೆ ಇನ್ನು ಮುಂದೆ ವೀರ್ಯದಾನ ಮಾಡದಂತೆ ನ್ಯಾಯಾಲಯವು ನಿರ್ಬಂಧಿಸಿದೆ. ಶುಕ್ರವಾರ ನೆದರ್​​ಲ್ಯಾಂಡ್​​​ನ ನ್ಯಾಯಾಲಯವು ವೀರ್ಯದಾನಿಯು ಯಾವುದೇ ವೀರ್ಯವನ್ನು ದಾನ ಮಾಡದಂತೆ ಕಟ್ಟುನಿಟ್ಟಾಗಿ ಆದೇಶಿಸಿದೆ. ವೀರ್ಯದಿಂದ ಮಗುವನ್ನು ಪಡೆದ ತಾಯಿಯೊಬ್ಬರು ‘ಈತ ಈ ಹಿಂದೆ ವೀರ್ಯದಾನ ಮಾಡಿದ ಸಂಖ್ಯೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾನೆ’ ಎಂದು ಸಲ್ಲಿಸಿದ ಅರ್ಜಿಯ ಮೆರೆಗೆ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ವೀರ್ಯದಾನಿ 41 ವರ್ಷ ವಯಸ್ಸಿನ ಜೋನಾಥನ್ ಜಾಕೋಬ್ ಮೈಜರ್ ಎಂದು ಗುರುತಿಸಲಾಗಿದೆ.

ವೀರ್ಯದಾನಕ್ಕೆ ಸಂಬಂಧಿಸಿದ ಡಚ್ ಕಾನೂನಿನ ಪ್ರಕಾರ ಯಾವುದೇ ವೀರ್ಯದಾನಿಗಳು 12ಕ್ಕಿಂತ ಹೆಚ್ಚು ಮಹಿಳೆಯರಿಗೆ ವೀರ್ಯವನ್ನು ದಾನಮಾಡಬಾರದು ಹಾಗೂ 25ಕ್ಕಿಂತ ಹೆಚ್ಚು ಮಕ್ಕಳಿಗೆ ತಂದೆಯಾಗಬಾರದು ಎಂದು ಹೇಳುತ್ತದೆ. ಆದರೆ, ಜಾಕೋಬ್ ಈವರೆಗೆ ತನ್ನ ವೀರ್ಯವನ್ನು ಕನಿಷ್ಠ 13 ಕ್ಲಿನಿಕ್​​​ಗಳಿಗೆ ದಾನ ಮಾಡಿದ್ದಾನೆ ಮತ್ತು 2007 ರಲ್ಲಿ ವೀರ್ಯದಾನ ಮಾಡಲು ಆರಂಭಿಸಿದನು. ಪ್ರಸ್ತುತ ಈತ 550 ರಿಂದ 600 ಮಕ್ಕಳಿಗೆ ತಂದೆಯಾಗಿದ್ದಾನೆ ಎಂದು ವರದಿಯಾಗಿದೆ.

2017ರ ವರದಿಯ ಪ್ರಕಾರ ಜಾಕೋಬ್ 2007 ರಿಂದ 2017 ರ ನಡುವೆ ಡಚ್ ಚಿಕಿತ್ಸಾಲಯಗಳ ಮೂಲಕ 102 ಮಕ್ಕಳಿಗೆ ತಂದೆಯಾಗಿದ್ದಾರೆ. 2015 ಮತ್ತು 2017ರ ನಡುವೆ ಈ ವ್ಯಕ್ತಿ ಡೆನ್ಮಾರ್ಕ್ ನ ಫಲವತ್ತತೆಯ ಕ್ಲಿನಿಕ್ ಗೆ ವೀರ್ಯವನ್ನು ದಾನ ಮಾಡಿದನು. ಜೊತೆಗೆ ವಿದೇಶಗಳಲ್ಲಿ ಮತ್ತು ಆನ್ಲೈನ್ ನಲ್ಲಿಯೂ ವೀರ್ಯವನ್ನು ದಾನ ಮಾಡಿದ್ದಾನೆ.

ಈತನ ಈ ತಪ್ಪಿನಿಂದ ನೂರಾರು ಕುಟುಂಬಗಳಲ್ಲಿ ಮಕ್ಕಳು ತಮಗೆ ಗೊತ್ತಿರದಂತೆ ಸಹೋದರತ್ವದ ಸಂಬಂಧದ ಜಾಲಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಭವಿಷ್ಯದಲ್ಲಿ ಆ ಮಕ್ಕಳು ತಮಗೆ ಗೊತ್ತಿಲ್ಲ ತಮ್ಮ ಸಹೋದರತ್ವದಲ್ಲಿಯೇ ಮದುವೆಯಾದರೆ, ಅದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಹಿತದೃಷ್ಟಿಯಿಂದ ಇನ್ನು ಮುಂದೆ ಈ ವ್ಯಕ್ತಿ ವೀರ್ಯ ದಾನ ಮಾಡಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಜಾಕೋಬ್ ವೀರ್ಯಾಣು ದಾನ ಮಾಡಿದ ಎಲ್ಲಾ ಚಿಕಿತ್ಸಾಲಯಗಳ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯವು ಕೇಳಿದೆ ಮತ್ತು ಆತ ಸಂಗ್ರಹಿಸಿದ ವೀರ್ಯವನ್ನು ನಾಶ ಮಾಡಲು ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿ:Viral Video: ಸುಶಿಯಿಂದಲೂ ಐಸ್ ಕ್ರೀಮ್ ರೋಲ್ ತಯಾರಿಸಬಹುದು? ಇಲ್ಲಿದೆ ವೀಡಿಯೊ

ನ್ಯಾಯಾಲಯವು ಜಾಕೋಬ್ ತನ್ನ ವೀರ್ಯವನ್ನು ಭವಿಷ್ಯದ ಹೊಸ ಪೋಷಕರಿಗೆ ದಾನ ಮಾಡುವುದನ್ನು ನಿಷೇಧಿಸಿದೆ ಮತ್ತು ಅವರು ಯಾವುದೇ ನಿರೀಕ್ಷಿತ ಪೋಷಕರನ್ನು ಸಂಪರ್ಕಿಸಬಾರದು ಎಂದು ಆದೇಶಿಸಿದೆ. ಜಾಕೋಬ್ ವೀರ್ಯದಾನ ಮಾಡುವುದನ್ನು ಮುಂದುವರೆಸಿದರೆ, 100,000 ಯುರೋಗಳಷ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:44 pm, Sat, 29 April 23