Viral Video: ಸುಶಿಯಿಂದಲೂ ಐಸ್ ಕ್ರೀಮ್ ರೋಲ್ ತಯಾರಿಸಬಹುದು? ಇಲ್ಲಿದೆ ವೀಡಿಯೊ
ಜಪಾನೀಸ್ ಖಾದ್ಯವಾದ ಸುಶಿಯನ್ನು ಪ್ರಪಂಚದಾದ್ಯಂತ ಅನೇಕ ಜನರು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಈ ಸುಶಿಯಿಂದ ಐಸ್ಕ್ರೀಮ್ ರೋಲ್ ತಯಾರಿಸಿದರೆ ಹೇಗಿರುತ್ತದೆ ಎಂದು ತಿಳಿಯಬೇಕೇ ಹಾಗಿದ್ದರೆ ಈ ವೈರಲ್ ವಿಡಿಯೋವನ್ನೊಮ್ಮೆ ನೋಡಿ.

ಐಸ್ಕ್ರೀಮ್ ರೋಲ್ ಪ್ರಸ್ತುತ ಟ್ರೆಂಡಿಂಗ್ನಲ್ಲಿರುವ ಐಸ್ಕ್ರೀಮ್ನ ಒಂದು ಬಗೆಯಾಗಿದೆ. ಇದರ ವಿಶೇಷವೇನೆಂದರೆ ನಮಗೆ ಬೇಕಾದ ಫ್ಲೇವರ್ನ ಐಸ್ ಕ್ರೀಮ್ನ್ನು ಲೈವ್ನಲ್ಲಿ ತಯಾರಿಸಿಕೊಡುತ್ತಾರೆ. ಇನ್ನೂ ಅನೇಕ ವಿಲಕ್ಷಣ ಐಸ್ ಕ್ರೀಮ್ ರೋಲ್ಗಳನ್ನು ತಯಾರಿಸುವ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ನಾವೆಲ್ಲರಲೂ ನೋಡಿರುತ್ತೇವೆ. ಹಸಿಮೆಣಸಿನಕಾಯಿ, ಸಮೋಸಾ, ಮ್ಯಾಗಿ ಇತ್ಯಾದಿಗಳಿಂದ ಐಸ್ಕ್ರೀಮ್ ರೋಲ್ಗಳನ್ನು ತಯಾರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿರುತ್ತವೆ. ಈಗ ಈ ವಿಲಕ್ಷಣ ಐಸ್ಕ್ರೀಮ್ ರೋಲ್ ಗುಂಪಿಗೆ ಇನ್ನೊಂದು ಫ್ಲೇವರ್ ಐಸ್ಕ್ರೀಮ್ ಸೇರ್ಪಡೆಯಾಗಿದೆ. ಅದುವೇ ಸುಶಿ ಐಸ್ಕ್ರೀಮ್ ರೋಲ್. ಜಪಾನೀಸ್ ಖಾದ್ಯವಾದ ಸುಶಿಯನ್ನು ಪ್ರಪಂಚದಾದ್ಯಂತ ಅನೇಕ ಜನರು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಈ ಸುಶಿಯಿಂದ ಐಸ್ ಕ್ರೀಮ್ ರೋಲ್ ತಯಾರಿಸಿದರೆ ಹೇಗಿರುತ್ತದೆ ಎಂದು ತಿಳಿಯಬೇಕೇ ಹಾಗಿದ್ದರೆ ಈ ವೈರಲ್ ವಿಡಿಯೋವನ್ನೊಮ್ಮೆ ನೋಡಿ.
ದೀ ಗ್ರೇಟ್ ಇಂಡಿಯನ್ ಫುಡಿ(thegreatindianfoodie) ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಸುಶಿ ಐಸ್ ಕ್ರೀಮ್ ರೋಲ್ ತಯಾರಿಸುವ ವೀಡಿಯೊವನ್ನು ಹರಿಬಿಡಲಾಗಿದೆ. ಐಸ್ ಕ್ರೀಮ್ ರೋಲ್ ತಯಾರಿಸುವ ವ್ಯಕ್ತಿ ಒಂದು ಬಾಕ್ಸ್ನಿಂದ ಕೆಲವು ತುಂಡು ಸುಶಿಯನ್ನು ತೆಗೆದು ರೋಲ್ ತಯಾರಿಸುವ ಪ್ಲೇಟ್ ಮೇಲೆ ಹಾಕಿ ಅದರ ಮೇಲೆ ಕ್ರೀಮ್ ಸುರಿದು, ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ನಯವಾಗಿ ತಟ್ಟಿ ಐಸ್ ಐಸ್ಕ್ರೀಮ್ ತಯಾರಿಸುವುದನ್ನು ಈ ವೀಡಿಯೋದಲ್ಲಿ ಕಾಣಬಹುದಾಗಿದೆ.
View this post on Instagram
ಇದನ್ನೂ ಓದಿ:Viral Post: ಏರ್ ಇಂಡಿಯಾದ ನಿರ್ಲಕ್ಷ್ಯದಿಂದ ವಿಮಾನ ನಿಲ್ದಾಣದಲ್ಲಿ ಬೆಕ್ಕಿನ ಮರಿಯನ್ನು ಕಳೆದುಕೊಂಡ ಪ್ರಯಾಣಿಕ
ಈ ವೀಡಿಯೋ 102 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಲಕ್ಷಣ ಐಸ್ಕ್ರೀಮ್ ರೋಲ್ಗೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರರು ಇದನ್ನು ನೋಡಿದ ನಂತರ ನನ್ನ ಕಣ್ಣುಗನ್ನು ಚೆನ್ನಾಗಿ ತೊಳೆಯಬೇಕು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾದರು ಓ ದೇವರೆ ಏನಿದು ವಿಚಿತ್ರ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:39 pm, Fri, 28 April 23




