Viral Video: ‘ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ, ಒಮ್ಮೆ ಮಿಸುಕಾಡು ಪ್ಲೀಸ್​’

Dog Love : ನಾಯಿಯೆಂದರೆ ಬರೀ ಪ್ರಾಣಿಯೇ, ಅದಿರುವುದು ಮನೆ ಕಾಯಲು, ಬೊಗಳಲು ಮಾತ್ರವೆ? ಈ ವಿಡಿಯೋ ನೋಡಿದ ಮೇಲೆ ನೀವೇಷ್ಟು ಕಠಿಣಹೃದಯಿಯಾದರೂ ನಿಮ್ಮ ಬಾಯಿಯಿಂದ 'ಹೌದು' ಎಂಬ ಶಬ್ದ ಹೊಮ್ಮಲು ಸಾಧ್ಯವೇ ಇಲ್ಲ!

Viral Video: 'ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ, ಒಮ್ಮೆ ಮಿಸುಕಾಡು ಪ್ಲೀಸ್​'
'ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ?'
Follow us
ಶ್ರೀದೇವಿ ಕಳಸದ
|

Updated on: Jul 20, 2023 | 11:03 AM

Kindness : ಆಹಾ! ಅದೃಷ್ಟ ಎಂದರೆ ಇದು, ನಾನಿದ್ದಲ್ಲಿಯೇ ಬಂದು ಬಿದ್ದಿತಲ್ಲ ಈ ಕೇಸರಿಮೀನು (Fish) ಎಂದು ಆ ನಾಯಿ ಗುಳುಮ್ಮಿಸಿದ್ದರೆ ಅದು ಆಸೆ ಮತ್ತು ಸ್ವಾರ್ಥ. ಅಯ್ಯೋ ಈ ಮೀನು ನೀರಿನಲ್ಲಿರುವುದು ಬಿಟ್ಟು ಇಲ್ಲಿಗೇಕೆ ಬಂದಿದೆ? ಎಂದು ಅದನ್ನು ನೀರಿನಲ್ಲಿ ಬಿಟ್ಟು ಹೋಗುವುದು ಕರ್ತವ್ಯ. ಬಾಯಿಯಿಂದ ಹಿಡಿದು ಎತ್ತಿ ನೀರಿಗೆ ಹಾಕಿದ ಮೇಲೂ ಮೀನು ಯಾಕೆ ಈಜುತ್ತಿಲ್ಲ? ಎಂದು ಚಡಪಡಿಸುವುದು, ಅದು ಮಿಸುಕಾಡಲಿ ಎಂದು  ಪ್ರಯತ್ನಿಸುವುದು ಇದೆಯಲ್ಲ ಅದು ಸಹಾನುಭೂತಿ, ಪ್ರೀತಿ ಮತ್ತು ಅಂತಃಕರಣ. 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Śh Iv à (@natureferver)

ಒಮ್ಮೆ ಈ ಮೀನಿನ ಎದೆಗೂಡಿನಿಂದ ಒಮ್ಮೆ ಉಸಿರು ಹೊಮ್ಮಿ ಅದು ಪಟಪಟಿಸಿದರೆ ಈ ನಾಯಿಗೆ ಅದೆಷ್ಟೋ ಸಮಾಧಾನವೆನ್ನಿಸುತ್ತಿತ್ತು. ಆದರೆ ಹಾಗಾಗಲಿಲ್ಲ. ದುರಾದೃಷ್ಟ, ಅದರ ಉಸಿರು ನಿಂತು ಹೋಗಿತ್ತು. ಮನುಷ್ಯರಿಗಿಂತ ಸೂಕ್ಷ್ಮಗ್ರಾಹಿಯೂ, ತಿಳಿವಳಿಕೆ ಮತ್ತು ಅಂತಃಕರಣವುಳ್ಳ ಈ ಪ್ರಾಣಿಯನ್ನು ನಾಯಿ ಎಂದು ಕರೆಯಲು ಕೂಡ ಮನಸ್ಸು ಬಾರದು. ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಲಾದ ಈ ವಿಡಿಯೋ ಅನ್ನು ಈ ತನಕ ಆರೂವರೆ ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಅನೇಕರ ಹೃದಯಗಳು ಈ ದೃಶ್ಯಕ್ಕೆ ಮರುಗಿವೆ.

ಇದನ್ನೂ ಓದಿ : Viral Video: ಬಲೆಗೆ ಬಿದ್ದಾಗ ನೀ ಅರಿವೆ ಈ ಸಂಚು! ಜೋಕೆ ನೀವು ಪಾಪದ ಇಲಿಗಳೇ? 

ಆ ಮೀನು ಅದರ ತಮ್ಮನಿದ್ದಂತೆ, ತಮ್ಮನನ್ನು ಅಣ್ಣ ತಿನ್ನುವುದಿಲ್ಲ. ಯಾಕೆ ಈ ನಾಯಿಗಳಿಗೆ ಮನುಷ್ಯರಿಗಿಂತ ಮಿಗಿಲಾದ ಹೃದಯ ಇದೆಯೋ. ಈ ಮೀನು  ಮರಳಿ ಈಜುತ್ತದೆಯೆಂದು ನಿರೀಕ್ಷಿಸುತ್ತಿದ್ದೆ. ನಾನು ಮನುಷ್ಯರಿಗಿಂಥ ನಾಯಿಯನ್ನು ಹೆಚ್ಚು ಪ್ರೀತಿಸುತ್ತೇನೆ, ಅವುಗಳಿಗೆ ನನ್ನ ಹೃದಯದಲ್ಲಿ ಜಾಗ ಕೊಡುತ್ತೇನೆ… ಹೀಗೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ ನೆಟ್ಟಿಗರು.

ನೀವು ನಾಯಿಪ್ರೇಮಿಗಳಾಗಿದ್ದಲ್ಲಿ ಖಂಡಿತ ಈ ದೃಶ್ಯ ನಿಮ್ಮ ಕಣ್ಣಂಚನ್ನು ಈಗಾಗಲೇ ಒದ್ದೆ ಮಾಡಿರುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್