Viral Video: ಉಡುಪಿ; ಬಾವಿಯಲ್ಲಿ ಬಿದ್ದ ನವಿಲನ್ನು ರಕ್ಷಿಸಿದ ಅಪ್ಪ ಮಗ

Wildlife : ರಾಷ್ಟ್ರಪಕ್ಷಿಯನ್ನು ರಕ್ಷಿಸಿದ್ದೀರಿ ಎಂದು ಒಂದಿಷ್ಟು ಜನ. ನವಿಲನ್ನು ರಕ್ಷಿಸಲು ಹೋಗಿ ಅದರ ಜಾಗದಲ್ಲಿ ನಿಮ್ಮ ಮಗ ಇದ್ದಿದ್ದರೆ? ಎಂದು ಮತ್ತೊಂದಿಷ್ಟು ಜನ. ಆದರೆ ವನ್ಯಜೀವಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಿಸುವುದು ಒಳಿತು.

Viral Video: ಉಡುಪಿ; ಬಾವಿಯಲ್ಲಿ ಬಿದ್ದ ನವಿಲನ್ನು ರಕ್ಷಿಸಿದ ಅಪ್ಪ ಮಗ
ಬಾವಿಯಲ್ಲಿ ಬಿದ್ದ ನವಿಲನ್ನು ರಕ್ಷಿಸುತ್ತಿರುವ ಅಪ್ಪ ಮಗ
Follow us
ಶ್ರೀದೇವಿ ಕಳಸದ
|

Updated on:Jul 19, 2023 | 6:11 PM

Udupi : ಉಡುಪಿಯ ಉದ್ಯಾವರದ ಕಲಾಯಿಬೈಲ್​ ಎಂಬ ಗ್ರಾಮದಲ್ಲಿ ನವಿಲೊಂದು (Peacock) ಅಕಸ್ಮಾತ್​ ಆಗಿ ಬಾವಿಗೆ ಬಿದ್ದಿದೆ. ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಆ ಪಕ್ಷಿಯು ಗ್ರಾಮಸ್ಥರಾದ ವಿಜಯಕುಮಾರ್​ ಮತ್ತು ಅವರ ಮಗ ವಿಶಾಲ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಅದನ್ನು ರಕ್ಷಿಸುವ ಉಪಾಯಕ್ಕೆ ಅವರಿಬ್ಬರೂ ಮುಂದಾಗಿದ್ದಾರೆ. ವಿಶಾಲ ತನ್ನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದಾರೆ. ನಂತರ ತಮ್ಮ ಕಾಲುಗಳೊಳಗೆ ಆ ನವಿಲನ್ನು ಹಿಡಿದು ಬಾವಿನೀರಿನಿಂದ ಮೇಲೆಕ್ಕೆತ್ತಿದ್ದಾರೆ.

ತಂದೆ ಮಗ ಸೇರಿ ನವಿಲಿನ ಜೀವ ಉಳಿಸಿದ್ದಕ್ಕಾಗಿ ಹಲವಾರು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಇನ್ನೂ ಕೆಲವರು ಈ ಸಾಹಸಕ್ಕಿಳಿದ ಮಗನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಉಳಿದವರು ತಮಾಷೆಯನ್ನೂ ಮಾಡಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಟ್ವೀಟ್ ಮಾಡಿದ ಈ ವಿಡಿಯೋ ಅನ್ನು ಈಗಾಗಲೇ 13,300 ಜನರು ನೋಡಿದ್ದಾರೆ. 75 ಜನ ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ನೀಲಿಕಂಗಳ ಹುಡುಗನ ‘ಕೆಫೆ ಚಾಯ್​ವಾಲಾ ಅರ್ಷದ್​ ಖಾನ್​’ ಇದೀಗ ಲಂಡನ್​ನಲ್ಲಿ

ನೀವಿಬ್ಬರೂ ರಾಷ್ಟ್ರಪಕ್ಷಿಯ ಜೀವ ಉಳಿಸಿದ್ದೀರಿ, ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ ಸಾಕಷ್ಟು ಜನರು. ಯಾಕೆ ಇಂಥ ಹುಚ್ಚು ಸಾಹಸಕ್ಕೆ ಇಳಿದಿರಿ? ನವಿಲಿನ ಜಾಗದಲ್ಲಿ ಅಕಸ್ಮಾತ್​ ನಿಮ್ಮ ಮಗ ಬಿದ್ದಿದ್ದರೆ ಎಂದಿದ್ದಾರೆ ಕೆಲವರು. ಇಂಥ ಕೆಲಸವನ್ನು ಮಕ್ಕಳಿಂದ ಮಾಡಿಸುವ ಬದಲು ಅರಣ್ಯ ಇಲಾಖೆಗೆ ತಿಳಿಸಿ ಎಂದು ಸಲಹೆ ನೀಡಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಒಂದೇ ತಟ್ಟೆಯಲ್ಲಿ ಸಿಂಹದೊಂದಿಗೆ ಊಟ ಮಾಡುತ್ತಿರುವ ಯುವತಿ

ವನ್ಯಮೃಗಗಳು ಪಕ್ಷಿಗಳು ಹೀಗೆ ಅಪಾಯದಲ್ಲಿದ್ದಾಗ ಅಥವಾ ನೀವಿದ್ದ ಜಾಗದಲ್ಲಿ ಬಂದಾಗ ತಕ್ಷಣವೇ ಅರಣ್ಯ ಇಲಾಖೆ ಅಥವಾ Wildlife SOS  ತಿಳಿಸುವುದು ಉತ್ತಮ. ವಿನಾಕಾರಣ ಅಪಾಯಕ್ಕೆ ಒಡ್ಡಿಕೊಳ್ಳುವುದು ಸಲ್ಲದು.

ಈ ವಿಡಿಯೋ ನೋಡಿದ ನಿಮ್ಮಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 6:09 pm, Wed, 19 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ