Viral Video: ಒಂದೇ ತಟ್ಟೆಯಲ್ಲಿ ಸಿಂಹದೊಂದಿಗೆ ಊಟ ಮಾಡುತ್ತಿರುವ ಯುವತಿ
Dubai : ಅದು ನಾಯಿಮರಿಯಲ್ಲ ಎಂದು ಕೆಲವರು. ಮಾಂಸ ಮುಗಿದ ಮೇಲೆ ಇದು ಆಕೆಯನ್ನು ತಿನ್ನಬಹುದೇನೋ ಎಂದು ಹಲವರು. ಆದರೂ ಇದು ಅತ್ಯಂತ ಅಪಾಯಕಾರಿ ಎನ್ನುತ್ತಿದ್ದಾರೆ ನೆಟ್ಟಿಗರೆಲ್ಲ. ನೀವು?

Lion : ನಾಲ್ಕು ಮಿಲಿಯನ್ಗಿಂತಲೂ ಹೆಚ್ಚು ಜನರು ನೋಡಿರುವ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇಂಥ ವಿಡಿಯೋ ಅನ್ನು ನಾನು ಜೀವಮಾನದಲ್ಲಿಯೇ ನೋಡಿರಲಿಲ್ಲ, ಇದು ಎಷ್ಟೊಂದು ಅಪಾಯಕಾರಿಯಾಗಿದೆ ಎಂದು ನೆಟ್ಟಿಗರು ಬೆವರುತ್ತಿದ್ದಾರೆ. ಆದರೆ ಈ ವಿಡಿಯೋದಲ್ಲಿರುವ ಈ ಯುವತಿ (Woman) ಸಿಂಹದೊಂದಿಗೆ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದಾಳೆ. ವನ್ಯಮೃಗಗಳೊಂದಿಗೆ ಒಡನಾಡಿದ ಅದೆಷ್ಟೋ ವಿಡಿಯೋಗಳನ್ನು ನೋಡಿದ್ದೀರಿ. ಆದರೆ ಇಂಥ ವಿಡಿಯೋ ಈತನಕ ನೀವೂ ನೋಡಿಲ್ಲವೇನೋ.
ದುಬೈನ ರಾಕ್ ಝೂನಲ್ಲಿ (Rak Zoo) ಈ ವಿಡಿಯೋ ಚಿತ್ರೀಕರಿಸಲಾಗಿದೆ. ಈ ವಿಡಿಯೋ ಅನ್ನು ಪ್ರಸ್ತುತ ಪ್ರಾಣಿಸಂಗ್ರಹಾಲಯದ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಎಷ್ಟೋ ದಿನಗಳ ಸ್ನೇಹಿತರೋ ಸಂಬಂಧಿಕರೋ ಎನ್ನುವಂತೆ ಈಕೆ ಸಿಂಹದ ಪಕ್ಕ ಕುಳಿತು, ಅದರ ತಟ್ಟೆಯಲ್ಲಿರುವ ಬೇಯಿಸಿದ ಮಾಂಸವನ್ನು ತಿನ್ನುತ್ತಿದ್ದಾಳೆ. ಸಿಂಹವು ಹಸೀಮಾಂಸವನ್ನು ತಿನ್ನುತ್ತಿದೆ. ಈಕೆಯ ಮುಖದ ಮೇಲೆ ಒಂದಿನಿತು ಭಯ, ಗಾಬರಿ ಏನೊಂದರ ಲಕ್ಷಣವೂ ಇಲ್ಲ!
ಇದನ್ನೂ ಓದಿ : Viral: 14 ಜನರಲ್ಲಿ ಯಾರನ್ನು ಮದುವೆಯಾಗಲಿ?; ನೆಟ್ಟಿಗರ ಸಹಾಯ ಕೋರಿದ ಯುವತಿ
ಕೇವಲ ರಾಕ್ ಮೃಗಾಲಯದಲ್ಲಿ ಮಾತ್ರ ನೀವು ಹೀಗಿರಲು ಸಾಧ್ಯ, ಭೂಮಿಯ ಮೇಲಿರುವ ಬೇರೆ ಇನ್ನ್ಯಾವ ಸ್ಥಳದಲ್ಲಿಯೂ ಇದು ಅಸಾಧ್ಯ ಎಂದು ಈ ಪೋಸ್ಟ್ಗೆ ಒಕ್ಕಣೆ ಬರೆಯಲಾಗಿದೆ. ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಸಿಂಹಕ್ಕೆ ಹಲ್ಲುಗಳಿವೆಯೇ? ಎಂದು ಕೇಳಿದ್ದಾರೆ ಒಬ್ಬರು. ಸಿಂಹಕ್ಕೆ ಕರುಣೆ ಇರುವುದಿಲ್ಲ, ತಟ್ಟೆಯಲ್ಲಿ ಮಾಂಸ ಮುಗಿದ ನಂತರ ಅದು ನಿಮ್ಮನ್ನು ತಿನ್ನಬಹುದು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಕೆಲಸ ಖಾಲೀ ಇದೆ; ಅರ್ಹತೆಯ ಬಗ್ಗೆ ಈ ವಿಡಿಯೋ ನೋಡಿ ತಿಳಿದುಕೊಳ್ಳಿ
ಅದು ನಾಯಿಮರಿ ಅಲ್ಲ ಸಿಂಹ, ಎಚ್ಚರವಿರಲಿ ಎಂದಿದ್ದಾರೆ ಇನ್ನೂ ಒಬ್ಬರು. ಸಿಂಹವು ಊಟ ಮಾಡುತ್ತಿರುವಾಗ ಅದರ ಹತ್ತಿರ ಕುಳಿತುಕೊಳ್ಳುವುದು ಅಪಾಯಕಾರಿ ಎಂದಿದ್ದಾರೆ ಮಗದೊಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:33 pm, Wed, 19 July 23