AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಾನೀಪೂರಿ ಪ್ರಿಯರೇ, ಒಂದೇ ಸಲ ಈ ವಿಡಿಯೋ ನೋಡಿ ಸಾಕು

Unhygienic : ಹೊತ್ತಿಲ್ಲ ಗೊತ್ತಿಲ್ಲ, ನೆನಪಾದರೆ ಪಾನೀಪೂರಿ ಗಾಡಿಗಳಿಗೆ ಇರುವೆಯಂತೆ ಮುಕರುತ್ತೀರಲ್ಲ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಉಳಿದದ್ದನ್ನು ನೀವೇ ನಿರ್ಧರಿಸಿ.

Viral Video: ಪಾನೀಪೂರಿ ಪ್ರಿಯರೇ, ಒಂದೇ ಸಲ ಈ ವಿಡಿಯೋ ನೋಡಿ ಸಾಕು
ಪಾನೀಪೂರಿಯ ಹಿಟ್ಟನ್ನು ಕಾಲಿನಿಂದ ತುಳಿಯುತ್ತಿರುವ ಯುವಕ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jul 19, 2023 | 2:10 PM

Share

PaniPuri: ಸಂಜೆಯಾದೊಡನೆ ಸ್ನೇಹಿತರೊಂದಿಗೆ ಫುಡ್​ ಸ್ಟ್ರೀಟ್​ಗಳಿಗೆ (Food Street) ಹೋಗಿ ಅಲ್ಲಿರುವ ಚಾಟ್​ಗಾಡಿಗಳನ್ನು ಮುತ್ತಿಗೆ ಹಾಕಿ ಎರಡು ಮೂರು ಪ್ಲೇಟ್​ ಈ ಪೂರಿ ಕುಟುಂಬದವರನ್ನು ಚೆನ್ನಾಗಿ ಬಾರಿಸಿ ಬರುವ ಚಾಟ್​ ಪ್ರಿಯರೇ ಸ್ವಲ್ಪ ಇತ್ತ ಗಮನಿಸಿ. ಪಾನೀಪೂರೀ, ಶೇವ್​ಪೂರೀ, ಮಸಾಲಾಪೂರೀ, ದಹೀಪೂರೀ, ಆಲೂಪೂರಿ, ಆ ಪೂರೀ ಈ ಪೂರೀಗೆ ತಯಾರಾಗುವ ಪೂರಿ ಮತ್ತತರೇ ಖಾದ್ಯಗಳು ತಯಾರಾಗುವ ಜಾಗವನ್ನು ನೋಡಿದ್ದೀರಾ? ಇಲ್ಲವಾದಲ್ಲಿ ಒಮ್ಮೆ ಈ ಕೆಳಗಿನ ವಿಡಿಯೋ ನೋಡಿ. ನೋಡಿದ ಮೇಲೆ ನಿಮ್ಮ ನಿಮ್ಮ ನಿರ್ಧಾರ ನಿಮಗೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಇದೇನು ಮೊದಲಲ್ಲ, ಹಿಂದೆಯೂ ಇಂಥ ಅನೇಕ ವಿಡಿಯೋಗಳು ವೈರಲ್ ಆಗಿವೆ. ಆದರೂ ಚಾಟ್​ಗಾಡಿಗಳನ್ನು ಇರುವೆಗಳಂತೆ ಮುಕುರುವುದನ್ನಂತೂ ನಮ್ಮ ಜನ ಬಿಟ್ಟೇ ಇಲ್ಲ. ಏನೇ ಆಗಲಿ ನಾಲಗೆಯಿಂದ ಮೆದುಳಿಗಂಟಿದ ರುಚಿಯ ನೆನಪನ್ನು ಮಾತ್ರ ತ್ಯಜಿಸಲಾರೆವು ಎಂದು ಪ್ರಮಾಣ ಮಾಡಿದವರಂತೆ ಮತ್ತೆ ಮತ್ತೆ ಪಾನೀಪುರಿಗೆ ಮೊರೆ ಹೋಗುತ್ತಲೇ ಇರುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಟೈಲರ್ ಸ್ವಿಫ್ಟ್​​ ಸಂಗೀತ ಕಛೇರಿಯಲ್ಲಿ ಪ್ರೇಮ ನಿವೇದನೆ; ನೆಟ್ಟಿಗರ ಹರ್ಷ

ಅದರಲ್ಲೂ ಮಕ್ಕಳಿಗೆ ಮತ್ತು ಯುವಕರಿಗಂತೂ ಈ ಖಾದ್ಯಗಳು ಪಂಚಪ್ರಾಣ. ವಾರಾಂತ್ಯ ಬಂದರೆ ತಿಂಡಿಗೂ ಅದೇ, ಊಟಕ್ಕೂ ಅದೇ. ಆದರೆ ಇಂಥ ಆಹಾರ ಪದ್ಧತಿಯಿಂದ ತಮ್ಮ ಆರೋಗ್ಯ ಏನಾಗುತ್ತಿದೆ ಎಂಬ ಅರಿವೇ ಅವರಿಗಿರದು, ಅಂಥ ವಿಚಿತ್ರ ವ್ಯಾಮೋಹದಲ್ಲಿ ಅವರು ಮುಳುಗಿಬಿಟ್ಟಿರುತ್ತಾರೆ. ತಿಳಿವಳಿಕೆ ಹೇಳಹೊರಟರೆ ರಂಪ!

ಇದನ್ನೂ ಓದಿ : Viral Video: ಒಂದೇ ತಟ್ಟೆಯಲ್ಲಿ ಸಿಂಹದೊಂದಿಗೆ ಊಟ ಮಾಡುತ್ತಿರುವ ಯುವತಿ

ಮೇಲಿನ ವಿಡಿಯೋ ನೋಡಿದ ಮೇಲೆ ಮತ್ತೆ ವಿವರಿಸುವುದು ಏನಿದೆ? ಮೂರು ವರ್ಷದ ಹಿಂದೆ ಅಪ್​ಲೋಡ್ ಆದ ವಿಡಿಯೋ ಈಗಲೂ ವೈರಲ್ ಆಗುತ್ತಿದೆ ಎಂದರೆ, ಜನ ನೋಡುತ್ತಲೇ ಇರುತ್ತಾರೆ. ಮತ್ತೆ ಮತ್ತೆ ಇಂಥ  ಪಾನೀಪೂರಿಯನ್ನು ತಿನ್ನುತ್ತಲೇ ಇರುತ್ತಾರೆ. ನೀವು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:09 pm, Wed, 19 July 23

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್