Viral: 14 ಜನರಲ್ಲಿ ಯಾರನ್ನು ಮದುವೆಯಾಗಲಿ?; ನೆಟ್ಟಿಗರ ಸಹಾಯ ಕೋರಿದ ಯುವತಿ

Marriage : ಸದ್ಯ ನಿರುದ್ಯೋಗಿಯಾಗಿರುವ ಈ ಹುಡುಗಿ ಟಿಸಿಎಸ್​, ಬೈಜೂಸ್​, ಡೆಲಾಯಿಟ್​ ಮುಂತಾದ ಕಂಪೆನಿಗಳಲ್ಲಿ ರೂ. 14ರಿಂದ 45 ಲಕ್ಷ ಆದಾಯವಿರುವ 14ರ ಹುಡುಗರ ಪಟ್ಟಿ ಮಾಡಿಕೊಂಡಿದ್ದಾಳೆ. ಆದರೆ ಆಯ್ಕೆಯ ಗೊಂದಲಕ್ಕೆ ಬಿದ್ದಿದ್ದಾಳೆ.

Viral: 14 ಜನರಲ್ಲಿ ಯಾರನ್ನು ಮದುವೆಯಾಗಲಿ?; ನೆಟ್ಟಿಗರ ಸಹಾಯ ಕೋರಿದ ಯುವತಿ
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Jul 19, 2023 | 11:50 AM

Matrimonial : ತನ್ನ ನಿರೀಕ್ಷೆಗೆ ತಕ್ಕಂಥ ಸಂಗಾತಿ ಬೇಕೆಂದು ಹುಡುಗನೂ ಬಯಸುತ್ತಾನೆ, ಹುಡುಗಿಯೂ. ಇದಕ್ಕೆ ಆನ್​ಲೈನ್​ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ಗಳು ಸಾಥ್​ ಕೊಡುತ್ತ ಮೂರು ದಶಕಗಳೇ ಕಳೆದವು. ಸಾಕಷ್ಟು ಜನರ ಮದುವೆಗೂ (Marriage) ಇವು ಸಾಕ್ಷಿಯಾದವು ಮತ್ತು ಆಗುತ್ತಲೇ ಇವೆ. ಆದರೆ ಇಲ್ಲೊಬ್ಬಳು ಹುಡುಗಿ ಆಯ್ಕೆಯ ಗೊಂದಲದಲ್ಲಿದ್ದಾಳೆ. 14 ಹುಡುಗರನ್ನು ಶಾರ್ಟ್​ಲಿಸ್ಟ್ ಮಾಡಿದ ಆಕೆ ಯಾವ ಹುಡುಗನನ್ನು ಮದುವೆಯಾದರೆ ಒಳ್ಳೆಯದು ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾಳೆ. ಈಕೆ ಲಿಸ್ಟ್ ಮಾಡಿದ ಹುಡುಗರು ಬೈಜೂಸ್​, ಡೆಲಾಯ್ಡ್​, ಟಿಸಿಎಸ್​ ಮುಂತಾದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ವಾರ್ಷಿಕ ಆದಾಯ ರೂ. 14 ಲಕ್ಷದಿಂದ ರೂ 45 ಲಕ್ಷ.

‘ನನಗೆ 29 ವರ್ಷ. ಬಿಕಾಂ ಓದಿದ್ದೇನೆ ಆದರೆ ಸದ್ಯ ಉದ್ಯೋಗದಲ್ಲಿಲ್ಲ. ಈ 14 ಹುಡುಗರೊಂದಿಗೆ ಸಂವಹನ ನಡೆಸುತ್ತಿದ್ದೇನೆ. ಆದರೆ ಮದುವೆಯಾಗಲು ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದೇನೆ, ದಯವಿಟ್ಟು ಸಹಾಯ ಮಾಡಿ’ ತಪ್ಪೊಪ್ಪಿಗೆ ಎಂಬ ಶೀರ್ಷಿಕೆಯಡಿ ಈಕೆ ಆ ವಿವಾಹಾಕಾಂಕ್ಷಿಗಳ ವಯಸ್ಸು, ಊರು, ಕಂಪೆನಿ, ವಾರ್ಷಿಕ ಆದಾಯವನ್ನು ಪಟ್ಟಿ ಮಾಡಿದ್ದಾಳೆ. ಈ ಪಟ್ಟಿ  ಅಂತರ್ಜಾಲದಲ್ಲಿ ಭಾರೀ ಚರ್ಚೆಗೀಡು ಮಾಡುತ್ತಿದೆ.

ಇದನ್ನೂ ಓದಿ : Viral Video: ಸಂಚಾರಿ ನಿಯಮ ಮುರಿದ ಜೋಡಿ; ವಿಡಿಯೋಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು

ಆದರೆ ರೂ. 45 ಲಕ್ಷ ವಾರ್ಷಿಕ ಆದಾಯವಿರುವ ವ್ಯಕ್ತಿಗಳು,  ವೈದ್ಯರುಗಳು ನಿರುದ್ಯೋಗಿಯಾಗಿರುವ ಈ ಹುಡುಗಿಯೆಡೆ ಆಸಕ್ತಿ ತೋರಿಸುತ್ತಿದ್ದಾರೆಂದರೆ, ಅವರಿಗೆ ತುಂಬಾ ಮುಖ್ಯವಾದಂಥ ಯಾವುದೇ ನ್ಯೂನತೆಗಳು ಇಲ್ಲ ತಾನೇ? ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈಕೆ ಯಾಕೆ ಉದ್ಯೋಗದಲ್ಲಿಲ್ಲ? ಈಕೆ ತಾನು ಮದುವೆಯಾಗಬಯಸುವ ಹುಡುಗರಿಂದ ಏನನ್ನು ನಿರೀಕ್ಷಿಸುತ್ತಿದ್ದಾಳೆ? ಎಂದೂ ಕೇಳುತ್ತಿದ್ಧಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:49 am, Wed, 19 July 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್