Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಭಾರತ್ ಮಾತಾ ಕೀ ಜೈ!?’; ವರನು ಸಿಹಿ ತಿನ್ನಿಸುವ ಮೊದಲೇ ವಧು ಅದನ್ನು ಬೀಸಿ ಒಗೆದಳು

Marriage : ಭಾರತದಲ್ಲಿ ಇಂಥ ಮದುವೆಗಳಿಗೆ ಆಯುಷ್ಯ ಹೆಚ್ಚು. ವಿಚ್ಛೇದನಕ್ಕೂ ಇಲ್ಲಿ ಅವಕಾಶವಿರುವುದಿಲ್ಲ. ಮುಂದೆ ಇದು ಸ್ಟಾಕ್​ಹೋಮ್​ ಸಿಂಡ್ರೋಮ್​ಗೆ ಕಾರಣವಾಗುತ್ತದೆ ಎಂಬ ಚರ್ಚೆ ಈ ವಿಡಿಯೋದಡಿ ನಡೆಯುತ್ತಿದೆ.

Viral Video: 'ಭಾರತ್ ಮಾತಾ ಕೀ ಜೈ!?'; ವರನು ಸಿಹಿ ತಿನ್ನಿಸುವ ಮೊದಲೇ ವಧು ಅದನ್ನು ಬೀಸಿ ಒಗೆದಳು
ಒಲ್ಲದ ಮದುವೆ
Follow us
ಶ್ರೀದೇವಿ ಕಳಸದ
|

Updated on:Jun 29, 2023 | 4:08 PM

Indian Marriage: ವಿಪರ್ಯಾಸವೆಂದರೆ ಭಾರತದಲ್ಲಿ ಇಂಥ ಮದುವೆಗಳು ಹೆಚ್ಚು ಕಾಲ ಬದುಕುಳಿಯುತ್ತವೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗುತ್ತಿರುವ ಈ ವಿಡಿಯೋ ನೆಟ್ಟಿಗರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇಲ್ಲೊಂದು ಮದುವೆ ನಡೆಯುತ್ತಿದೆ. ಆರತಿ ತಟ್ಟೆಯೊಳಗಿನ ಸಿಹಿಯನ್ನು ವಧುವಿಗೆ (Bride) ತಿನ್ನಿಸುವಂತೆ ವರನಿಗೆ (Groom) ಹೇಳಲಾಗುತ್ತದೆ. ಅವನು ತಿನ್ನಿಸಲು ಹೋದಾಗ ಆಕೆ ಸಿಹಿಯನ್ನು ಚೆಂಡಿನಂತೆ ಬೀಸಿ ಆಹ್ವಾನಿತರೆಡೆ ಕೋಪದಿಂದ ಎಸೆದುಬಿಡುತ್ತಾಳೆ. ಹಾಗೆ ವರನಿಗೆ ಗ್ಲಾಸಿನೊಳಗಿನನ್ನು ಕುಡಿಸಲು ವಧುವಿಗೆ ಹೇಳಲಾಗುತ್ತದೆ. ಆಕೆ ಕುಡಿಸಲು ಮುಂದಾದಾಗ ವರ ನಿರಾಕರಿಸುತ್ತಾನೆ. ಆಗ ಆ ಗ್ಲಾಸನ್ನೂ ಆಕೆ ಅದೇ ವೇಗದಲ್ಲಿ ಬೀಸಿ ಒಗೆದುಬಿಡುತ್ತಾಳೆ.

ಬಹುಶಃ ಇಬ್ಬರಿಗೂ ಈ ಮದುವೆ ಇಷ್ಟವಿಲ್ಲ ಅಥವಾ ವಧುವಿಗೆ ಇಷ್ಟವಿಲ್ಲ. ನಮ್ಮ ಭಾರತದಲ್ಲಿ ಯಾಕೆ ಹೀಗೆ? ಈಗಲೇ ಹೀಗಿರುವ ಇವರು ಮುಂದೆ ಹೇಗೆ ಬಾಳಿಯಾರು? ಜಗತ್ತಿನ ಜನರೆಲ್ಲ ಈ ವಿಡಿಯೋ ನೋಡಿ ಭಾರತೀಯ ಮದುವೆಗಳಲ್ಲಿ ಹೀಗೆ ವಧುವರರು ಬೀಸಿ ಎಸೆಯುವುದೂ ಒಂದು ಪದ್ಧತಿಯೇ ಇರಬೇಕು! ಎಂದುಕೊಂಡರೆ? ಆದರೆ ಅವರಿಬ್ಬರ ಮುಖಭಾವ ಗಮನಿಸಿದರೆ ಸಾಕು ಇದು ಒಲ್ಲದ ಮದುವೆ ಎನ್ನುವುದು ಖಾತ್ರಿಯಾಗುತ್ತದೆ. ಈ ವಿಡಿಯೋ ಅನ್ನು ಈತನಕ ಸುಮಾರು 1.5 ಮಿಲಿಯನ್​ ಜನರು ನೋಡಿದ್ದಾರೆ.

ಇದನ್ನೂ ಓದಿ : Viral Video: ಬಾಲಿವುಡ್​ ಮಿಯಾಂವ್ಸ್​; ನಿಸಾ ಶೆಟ್ಟಿ ಕರೆತಂದ ಈ ಬೆಕ್ಕುಗಳು ಗೊತ್ತೆ?

‘ವಧುವಿಗೆ ಬೇರೆ ದಾರಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಭವಿಷ್ಯದಲ್ಲಿಯೂ ಇದು ಹೀಗೇ ಮುಂದುವರಿದು ಸ್ಟಾಕ್​ಹೋಮ್ ​ಸಿಂಡ್ರೋಮ್​ಗೆ (Stockholm Syndrome) ಕಾರಣವಾಗುತ್ತದೆ, ಮತ್ತದು ಹಾಗೆಯೇ ಮುಂದುವರಿಯುತ್ತದೆ’ ಎಂದಿದ್ದಾರೆ ಈ ವಿಡಿಯೋ ಟ್ವೀಟ್ ಮಾಡಿದ ಗಬ್ಬರ್​ ಎನ್ನುವವರು. ಮದುವೆಯಂತೆ ವಿಚ್ಛೇದನವೂ (Divorce) ಎಷ್ಟೋ ಜನರಿಗೆ ಕಷ್ಟ ಎಂದು ಪ್ರತ್ಯುತ್ತರಿಸಿದ್ದಾರೆ ಒಬ್ಬರು. ಹುಡುಗಿಗೆ ತನ್ನದೇ ಆದ ಆಯ್ಕೆ ಎನ್ನುವುದು ಇದ್ದಿದ್ದರೆ ಆಕೆ ಈ ಮದುವೆಗೆ ಒಪ್ಪುತ್ತಿರಲಿಲ್ಲ. ಭವಿಷ್ಯದಲ್ಲಿಯೂ ಇದು ಹೀಗೇ ಸಾಗುತ್ತದೆ ಎಂದು ಮರುಉತ್ತರ ನೀಡಿದ್ದಾರೆ ಗಬ್ಬರ್.

ಈ ವಿಡಿಯೋದಲ್ಲಿ ತೂರಿಬಂದ ಧ್ವನಿಗಳನ್ನು ಕೇಳಿದಿರಾ?; ಭಾರತ್ ಮಾತಾ ಕೀ ಜೈ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 4:03 pm, Thu, 29 June 23

ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್