Viral Video: ಬಾಲಿವುಡ್ ಮಿಯಾಂವ್ಸ್; ನಿಸಾ ಶೆಟ್ಟಿ ಕರೆತಂದ ಈ ಬೆಕ್ಕುಗಳು ಗೊತ್ತೆ?
Cats : ಮೀನಾಬೆಕ್ಕು, ಕಂಗನಾಬೆಕ್ಕು, ರಾಖೀಬೆಕ್ಕು, ಜಾಹ್ನವಿಬೆಕ್ಕು, ಪ್ರಿಯಾಂಕಾಬೆಕ್ಕು... ಹೀಗೆ ಒಂದಿಷ್ಟು ಬಾಲಿವುಡ್ ಬೆಕ್ಕುಗಳನ್ನು ಕರೆತಂದಿದ್ದಾರೆ ಗಾಯಕಿ ನಿಸಾ ಶೆಟ್ಟಿ. ಇನ್ನ್ಯಾಕೆ ತಡ ಈ ವಿಡಿಯೋ ನೋಡಿಬಿಡಿ.
Bollywood Actress : ನಿಮ್ಮಲ್ಲಿ ಕಲ್ಪನಾ ಶಕ್ತಿ ಇದ್ದು, ಜಗತ್ತಿನ ಆಗುಹೋಗುಗಳ ಬಗ್ಗೆ ಗಮನವಿದ್ದು ಮತ್ತು ನಿಮ್ಮದೇ ಆದ ಶೈಲಿಯಲ್ಲಿ ಅಭಿವ್ಯಕ್ತಿಸುವ ಸಾಮರ್ಥ್ಯ ಇದ್ದರೆ ಸಾಕು. ಸಾಮಾಜಿಕ ಜಾಲತಾಣಗಳಲ್ಲಿ ನೀವೊಬ್ಬ ಮನರಂಜನಾಕಾರರೆಂದು (Entertainer) ಗುರುತಿಸಿಕೊಳ್ಳಬಹುದು ಅಥವಾ ಡಿಜಿಟಲ್ ಕ್ರಿಯೇಟರ್ (Digital Creator). ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಈ ಚಟುವಟಿಕೆಯಲ್ಲಿ ತೊಡಗಿದ್ದಾರೆ. ತಮ್ಮನ್ನು ತಾವು ಚಾಲ್ತಿಯಲ್ಲಿಟ್ಟುಕೊಳ್ಳಲು ರೀಲ್ಸ್ ಮಾಡುವುದರಲ್ಲಿ ಮುಳುಗಿದ್ದಾರೆ. ಗಾಯಕಿ ನಿಸಾ ಶೆಟ್ಟಿ (Nisa Shetty) ಕೂಡ ಹೊಸ ರೀಲ್ನೊಂದಿಗೆ ಇದೀಗ ಸುದ್ದಿಯಲ್ಲಿದ್ಧಾರೆ. ಇವರ ಕಲ್ಪನೆಯಲ್ಲಿ ಬಾಲಿವುಡ್ ನಾಯಕಿಯರು ಬೆಕ್ಕುಗಳಾಗಿದ್ದರೆ ಹೇಗಿರುತ್ತಿತ್ತು ಎಂಬುದನ್ನು ನೋಡಿ.
ಇದನ್ನೂ ಓದಿView this post on Instagram
ಕರೀನಾ ಕಪೂರ್, ಸುಷ್ಮಿತಾ ಸೇನ್, ಪ್ರಿಯಾಂಕಾ ಚೋಪ್ರಾ, ಕಂಗನಾ ರಣಾವತ್, ರಾಖೀ ಸಾವಂತ್, ಅನನ್ಯಾ ಪಾಂಡೆ, ಜಾಹ್ನವಿ ಕಪೂರ್, ಮೀನಾಕುಮಾರಿ, ರೇಖಾ ಅವರನ್ನೆಲ್ಲ ಊಹಿಸಿಕೊಂಡು ಮಿಯಾಂವಾಭಿನಯ ಮಾಡಿದ್ದಾರೆ. ಈತನಕ ನೀವು ಬಾಲಿವುಡ್ ನಟನಟಿಯರನ್ನು ಅನುಕರಿಸಿದ ವಿಡಿಯೋಗಳನ್ನು ನೋಡುತ್ತ ಬಂದಿದ್ದೀರಿ. ಆದರೆ ಹೀಗೆ ಮಿಯಾಂವಾಭಿನಯ ನೋಡಿದ್ದು ಇದೇ ಮೊದಲಲ್ಲವೇ? ಇನ್ಸ್ಟಾಗ್ರಾಂನಲ್ಲಿರುವ ತರುಣ್ ಖೇಮ್ ಅವರಿಂದ ಪ್ರೇರಣೆ ಪಡೆದು ಈ ರೀಲ್ ಮಾಡಿದೆ. ಇದನ್ನು ಚಿತ್ರೀಕರಿಸಲು ಬರೋಬ್ಬರಿ 20 ನಿಮಿಷ ತೆಗೆದುಕೊಂಡೆ. ನಾನೀಗ ನನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದೇನೆ! ಎಂದಿದ್ದಾರೆ ನಿಸಾ.
ಇದನ್ನೂ ಓದಿ : Viral Video: ಮೊಸಳೆ ಕಾಲುಸೂಪ್; ಜನರನ್ನು ಬೆಚ್ಚಿಬೀಳಿಸುತ್ತಿದೆ ಈ ಗಾಡ್ಝಿಲ್ಲಾ ರಾಮೆನ್
ಸಾಕಷ್ಟು ನೆಟ್ಟಿಗರು ಈ ವಿಡಿಯೋ ಮೆಚ್ಚಿದ್ದಾರೆ. ಕರೆಕ್ಟ್ ಆಗಿ ಅಭಿನಯಿಸಿದ್ದೀರಿ, ಅದರಲ್ಲೂ ಪ್ರಿಯಾಂಕಾ ಮಿಯಾಂವ್ ಥೇಟ್ ಅವರಂತೆಯೇ ಎಂದಿದ್ದಾರೆ ಒಬ್ಬರು. ಕರೀನಾ ಮಿಯಾಂವ್ ಚೆನ್ನಾಗಿದೆ, ಆದರೆ ಕಂಗನಾ ಮಿಯಾಂವ್ ಆಕೆಗಿಂತ ಛಂದ ಎಂದಿದ್ದಾರೆ ಮತ್ತೊಬ್ಬರು. ಕೊನೆಯದನ್ನು ನೋಡಿ ನಾನಂತೂ ಸತ್ತೇ ಹೋದೆ! ಎಂದಿದ್ದಾರೆ ಮಗದೊಬ್ಬರು. ಈ ವಿಡಿಯೋ ಅನ್ನು ಈತನಕ ಸುಮಾರು 90,000 ಜನರು ನೋಡಿದ್ಧಾರೆ. ಈತನಕ ಸುಮಾರು 6,500 ಜನರು ಇಷ್ಟಪಟ್ಟಿದ್ದಾರೆ.
ಈ ವಿಡಿಯೋ ನಿಮಗೆ ಇಷ್ಟವಾಯಿತೇ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:16 pm, Thu, 29 June 23