Viral Video: ‘ಹಲಿಂಗಲಿಯ ಸರ್ಕಾರಿ ಶಾಲೆಯ ಶಿಕ್ಷಕರಂಥವರು ಎಲ್ಲ ಶಾಲೆಗಳಿಗೂ ಬೇಕು’

Teachers : ಉತ್ತರ ಕರ್ನಾಟಕದ ಹಲಿಂಗಲಿಯ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠದೊಂದಿಗೆ ಜೀವನಪಾಠವನ್ನು ಕಲಿಸಿಕೊಡುತ್ತಿದ್ದಾರೆ ಈ ಶಿಕ್ಷಕರು. ನೋಡಿ ವಿಡಿಯೋ.

Viral Video: 'ಹಲಿಂಗಲಿಯ ಸರ್ಕಾರಿ ಶಾಲೆಯ ಶಿಕ್ಷಕರಂಥವರು ಎಲ್ಲ ಶಾಲೆಗಳಿಗೂ ಬೇಕು'
ನೀರ ಮೇಲೆ ಬೆಂಕಿ; ಪ್ರಯೋಗದಲ್ಲಿ ನಿರತಳಾಗಿರುವ ಹಲಿಂಗಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಜ್ಯೋತಿ.
Follow us
ಶ್ರೀದೇವಿ ಕಳಸದ
|

Updated on:Jun 29, 2023 | 5:17 PM

Nail polish : ಸರ್ಕಾರಿ ಶಾಲೆಗಳಲ್ಲಿ ಮೊದಲಿನಂತೆ ನಿಷ್ಠೆ ಮತ್ತು ಬದ್ಧತೆಯಿಂದ ಸೇವೆಗೈಯ್ಯುವ ಶಿಕ್ಷಕರು ಈಗಿಲ್ಲ. ಎಲ್ಲ ವೃತ್ತಿಯಂತೆ ಸಂಬಳಕ್ಕಾಗಿ ಮಾಡಲು ಇರುವ ಒಂದು ಮಾರ್ಗವೆಂಬಂತೆ ಇದೂ. ಇಲ್ಲಿ ಓದಿದ ಮಕ್ಕಳಿಗೆ ಭವಿಷ್ಯವಿಲ್ಲ… ಇತ್ಯಾದಿ ದೂರುಗಳು ಆಗಾಗ ಕೇಳಿಬರುತ್ತಿರುತ್ತವೆ. ಆದರೆ ಇದಕ್ಕೆ ಅಪವಾದವೆಂಬಂತಿದ್ದಾರೆ ಬಾಗಲಕೋಟೆ ಜಿಲ್ಲೆಯ ರಬಕವಿ ತಾಲೂಕಿನ ಹಲಿಂಗಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು (Government Higher Primary School Halingali). ಈ ವಿಡಿಯೋದಲ್ಲಿ ಆ ಶಿಕ್ಷಕರು ಇಲ್ಲ ಮತ್ತವರ ಹೆಸರೂ ಇಲ್ಲ. ಆದರೆ ಎದುರಿಗೆ ನಡೆಯುತ್ತಿರುವ ಪ್ರಯೋಗವನ್ನು ಉತ್ಸುಕತೆಯಿಂದ ನೋಡುವ ಬೆರಗುಗಣ್ಣಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದಾರೆ. ಜೊತೆಗೆ ಪ್ರಯೋಗದಲ್ಲಿ ನಿರತಳಾಗಿರುವ ಜ್ಯೋತಿ ಎಂಬ ವಿದ್ಯಾರ್ಥಿನಿಯೂ ಇದ್ದಾಳೆ. ನೀರಿನ ಮೇಲೆ ಬೆಂಕಿ ಹೊತ್ತಿಸುವುದು ಹೇಗೆ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾಳೆ. ನೋಡಿ ಈ ಕೆಳಗಿನ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Ghps Halingali (@ghps_halingali)

ನೀರಿನ ಮೇಲೆ ತೇಲುತ್ತಿದ್ದ ದ್ರವವೇ ನೇಲ್​ಪಾಲಿಶ್​. ಈ ನೇಲ್​ಪಾಲಿಶ್​ನಲ್ಲಿ ಎಸಿಟೋನ್ (Acetone) ​ ಎಂಬ ಆಮ್ಲವಿರುವುದರಿಂದ ಭಗ್ಗನೆ ಬೆಂಕಿ (Fire on Water) ಹತ್ತಿಕೊಂಡಿತು. ‘ನೀವು ನೇಲ್​ಪಾಲಿಶ್​ ಹಚ್ಚಿಕೊಂಡ ತಕ್ಷಣ ಸ್ಟೋವ್​ ಹೊತ್ತಿಸಲು ಹೋದರೆ ಬೆಂಕಿ ನಿಮ್ಮ ಬೆರಳಿಗೂ ತಗುಲಿಕೊಳ್ಳುತ್ತದೆ’ ಎಂಬ ಎಚ್ಚರಿಕೆಯನ್ನು ನೀಡುತ್ತಾ ನೀರ ಮೇಲೆ ಬೆಂಕಿ ಹಚ್ಚುವುದು ಹೇಗೆ ಎಂಬ ಪ್ರಯೋಗವನ್ನು ಸರಳವಾಗಿ ಮಕ್ಕಳಿಗೆ ತಿಳಿಸಿಕೊಟ್ಟಿದ್ದಾರೆ ಈ ಶಿಕ್ಷಕರು. ಹೀಗೆ ಪಾಠವನ್ನು ಆಟದೊಂದಿಗೆ ತಿಳಿಸಿಕೊಟ್ಟಾಗ ಎಂಥ ಕಬ್ಬಿಣದ ಕಡಲೆಯೂ ಕಡುಬಿನಂತೆ ಗಂಟಲಿಗೆ ಇಳಿಯುತ್ತದೆ ಅಲ್ಲವೆ?

ಇದನ್ನೂ ಓದಿ : Viral Video: ಭಾರತ್ ಮಾತಾ ಕೀ ಜೈ!?; ವರನು ಸಿಹಿ ತಿನ್ನಿಸುವ ಮೊದಲೇ ವಧು ಅದನ್ನು ಬೀಸಿ ಒಗೆದಳು 

ಈ ವಿಡಿಯೋ ಅನ್ನು ಮಿಲಿಯನ್​ ಜನರು ವೀಕ್ಷಿಸಿದ್ದಾರೆ. ಇನ್ನೇನು ಇದನ್ನು ಇಷ್ಟಪಟ್ಟವರ ಸಂಖ್ಯೆ 4 ಲಕ್ಷವನ್ನು ಸಮೀಪಿಸುತ್ತಿದೆ. ಸಾವಿರಾರು ಜನರು ಹೆಮ್ಮೆ ಮತ್ತು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ನೋಡಿ ನಮ್ಮ ಕನ್ನಡ ಶಾಲೆಗಳು ಯಾವುದಕ್ಕೂ ಕಮ್ಮೀ ಇಲ್ಲ. ಸರಕಾರಿ ಶಾಲೆಗಳಲ್ಲಿ ಓದಿದವರು ನನ್ನಂತೆ ನಿಜಕ್ಕೂ ಅದೃಷ್ಟವಂತರು. ಇಂಥ ಶಿಕ್ಷಕರು ಪ್ರತಿಯೊಂದು ಸರ್ಕಾರಿ ಶಾಲೆಗೂ ಇರಬೇಕು. ಕಲಿಕೆ ಎನ್ನುವುದು ಪರೀಕ್ಷೆಗಾಗಿ ಅಲ್ಲ, ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಬೇಕು, ಇದನ್ನು ನೀವು ಸರಳವಾಗಿ ಪ್ರಾಯೋಗಿಕವಾಗಿ ತಿಳಿಸಿಕೊಡುತ್ತಿದ್ದೀರಿ ಧನ್ಯವಾದ ನಿಮಗೆ… ಅಂತೆಲ್ಲ ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:02 pm, Thu, 29 June 23

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು