Viral Video: ಮೂರು ವರ್ಷಗಳ ನಂತರ ತನ್ನನ್ನು ಸಾಕಿದವರನ್ನು ನೋಡಿದಾಗ

Dogs : ಪ್ರಬಲವಾದ ವಾಸನಾಗ್ರಹಣ ಶಕ್ತಿ, ಪ್ರೀತಿ ವಿಶ್ವಾಸವನ್ನು ಕೊನೆತನಕವೂ ಕಾಪಿಟ್ಟುಕೊಳ್ಳುವ, ಸಾಕಿದವರೊಂದಿಗೆ ನಿಷ್ಠೆಯಿಂದ ಇರುವ ಜೀವಿ ಈ ನಾಯಿ. ಈ ವಿಡಿಯೋಗೆ 1 ಮಿಲಿಯನ್​ ಜನರು ಪ್ರತಿಕ್ರಿಯಿಸಿದ್ಧಾರೆ. ಯಾಕಿರಬಹುದು?

Viral Video: ಮೂರು ವರ್ಷಗಳ ನಂತರ ತನ್ನನ್ನು ಸಾಕಿದವರನ್ನು ನೋಡಿದಾಗ
3 ವರ್ಷಗಳ ನಂತರ ತನ್ನ ಪೋಷಕರನ್ನು ನೋಡಿದ ನಾಯಿ
Follow us
ಶ್ರೀದೇವಿ ಕಳಸದ
|

Updated on: Jun 29, 2023 | 10:21 AM

Dog Lover: ಯಾರದೋ ಕಾರಂತೂ ಬಂದು ನಿಂತಿತು. ಯಾರಿರಬಹುದು? ಎಂದು ಮೂತಿಯನ್ನು ಇನ್ನಷ್ಟು ಚೂಪು ಮಾಡಿಕೊಂಡು ಕಾರಿನೆಡೆ ನೋಡುತ್ತ ನಿಲ್ಲುತ್ತದೆ ಈ ನಾಯಿ. ಆ ಕಾರಿನೊಳಗಿರುವವನು ತನ್ನನ್ನು ಸಾಕಿದವನು ಎಂಬುದು ಅರಿವಿಗೆ ಬರುತ್ತಿದ್ದಂತೆ ಶರವೇಗದಲ್ಲಿ ಬಿಡಿಸಿಕೊಂಡು ಓಡಿಹೋಗುತ್ತದೆ. ಮೂರು ವರ್ಷಗಳ ಕಾಲ ಅವನಿಂದ ದೂರವಿದ್ದ ನಾಯಿಗೆ ಆದ ಸಂತೋಷ (Happyness) ವರ್ಣಿಸಲಸಾಧ್ಯ. ಕುಣಿದು ಕುಪ್ಪಳಿಸುತ್ತ ಅತ್ತಿಂದಿತ್ತ ಓಡಾಡುತ್ತದೆ. ಈ ವಿಡಿಯೋ ಅನೇಕ ನೆಟ್ಟಿಗರ ಹೃದಯವನ್ನು ಕರಗಿಸುತ್ತಿದೆ. ಅನೇಕರು ಇಲ್ಲವಾದ ತಮ್ಮ ನಾಯಿಗಳನ್ನು ನೆನೆದು ಹನಿಗಣ್ಣಾಗುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by REAL KINGS GIVE ?? (@realkingsgive)

ವಿಶ್ವಾಸ, ನಿಷ್ಠೆಯಿಂದ ಮನುಷ್ಯನ ಮನಸ್ಸನ್ನು ಗೆಲ್ಲುವ ನಾಯಿಗಳು ಎಂಥವರನ್ನೂ ಮೆತ್ತಗಾಗಿಸುತ್ತವೆ. ಅವುಗಳ ಸ್ವಭಾವವೇ ಅಂಥದ್ದು. ಮೇ 29ರಂದು ಹಂಚಿಕೊಂಡಿರುವ ಈ ವಿಡಿಯೋ ಅನ್ನು ಈಗಾಗಲೇ 10.5 ಮಿಲಿಯನ್​ಗಿಂತ ಹೆಚ್ಚು ಜನರು ನೋಡಿದ್ದಾರೆ. 1ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಸಹಸ್ರಾರು ಪ್ರತಿಕ್ರಿಯೆಗಳಿಂದ ಜನರು ಈ ವಿಡಿಯೋ ಅನ್ನು ಪ್ರೀತಿಸುತ್ತಿದ್ದಾರೆ.

ಇದನ್ನೂ ಓದಿ : Viral Video: 5 ಗಂಟೆ ಓಡಿಸಿದರೂ ಕೇವಲ ರೂ. 40 ಸಂಪಾದನೆ; ಕಣ್ಣೀರಿಟ್ಟ ಆಟೋ ಚಾಲಕ

ಪ್ರಾಣಿಗಳು ತಮ್ಮ ಪೋಷಕರನ್ನು ಎಂದಿಗೂ ಮರೆಯುವುದಿಲ್ಲ. ಅವು ಬಹಳ ಪ್ರೀತಿಸುತ್ತವೆ. ಈ ನಾಯಿ ತನ್ನ ಪೋಷಕನ ಕಾರನ್ನೂ ಸ್ವಾಗತಿಸುವ ರೀತಿ ನೋಡಿದಿರಾ? ಕೆಲ ವರ್ಷಗಳ ಹಿಂದೆ ನಾನು ಬಹಳ ಬೇಸರದಲ್ಲಿದ್ದಾಗ ನನ್ನ ನಾಯಿಯೇ ನನಗೆ ಆಪ್ತಮಿತ್ರನಂತೆ ಇತ್ತು. ಕಳೆದ ವರ್ಷ ನಾನು ಡ್ರೈವ್ ಮಾಡಿಕೊಂಡು ಎಲ್ಲೋ ಕಳೆದುಹೋಗಿದ್ದೆ. ನನ್ನ ನಾಯಿ ನನ್ನನ್ನು ವಾಪಾಸು ಮನೆಗೆ ಕರೆದುಕೊಂಡು ಬಂದಿತ್ತು, ನನ್ನ ಆಲೀವರ್​ನನ್ನು ನಾನು ಬಹಳ ಪ್ರೀತಿಸುತ್ತೇನೆ. ನಮ್ಮ ನಾಯಿ ಅಪ್ಪನೊಂದಿಗೆ ದಿನಸಿ ತರಲು ಹೋಗುತ್ತಿತ್ತು. ಆದರೆ ಈಗ ಅದಿಲ್ಲ ಎಂದು ಬೇಸರಿಕೊಂಡಿದ್ದಾರೆ ಒಬ್ಬರು… ಹೀಗೆ ಅನೇಕರು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ಧಾರೆ.

ಈ ವಿಡಿಯೋ ನೋಡಿದ ನಿಮಗೆ ನಿಮ್ಮ ಮನೆಯ ನಾಯಿಗಳ ಬಗ್ಗೆ ಪ್ರೀತಿ ಉಕ್ಕುತ್ತಿದೆಯೇ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ