AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕ್ಯಾಚ್​ ಕ್ಯಾಚ್​; ನಿರಾಶ್ರಿತ ಮಕ್ಕಳೊಂದಿಗೆ ಚೆಂಡಾಟವಾಡಿದ ಸಾಕುನಾಯಿ

Dog Lovers : ಮೊದಲಿಗೆ ಈ ಹುಡುಗಿ ತಾನೊಬ್ಬಳೇ ನಾಯಿಯ ಸ್ನೇಹ ಮಾಡಿದ್ದಾಳೆ. ನಂತರ ತನ್ನೊಂದಿಗಿರುವ ಮಕ್ಕಳನ್ನೂ ಕರೆದುಕೊಂಡು ಬಂದಿದ್ದಾಳೆ. ನಾಯಿ ಗೇಟಿನೊಳಗೇ ಇದ್ದು ಇವರೊಂದಿಗೆ ಚೆಂಡಾಟವಾಡಿದೆ. ಎಂಥ ಆಪ್ತ ಈ ವಿಡಿಯೋ.

Viral Video: ಕ್ಯಾಚ್​ ಕ್ಯಾಚ್​; ನಿರಾಶ್ರಿತ ಮಕ್ಕಳೊಂದಿಗೆ ಚೆಂಡಾಟವಾಡಿದ ಸಾಕುನಾಯಿ
ನಿರಾಶ್ರಿತ ಮಕ್ಕಳೊಂದಿಗೆ ಆಡುತ್ತಿರುವ ಸಾಕುನಾಯಿ
ಶ್ರೀದೇವಿ ಕಳಸದ
|

Updated on:Jun 22, 2023 | 4:00 PM

Share

Friendship : ಮಕ್ಕಳಾಗಲಿ, ಪ್ರಾಣಿಗಳಾಗಲಿ ಇವರು ತನ್ನವರು ಅವರು ಪರರು ಎಂಬ ಭೇದಭಾವ ಎಳ್ಳಷ್ಟೂ ಮಾಡಲಾರವು. ತಮ್ಮೊಂದಿಗೆ ಯಾರು ನಗುಮುಖದಿಂದ ಮಾತನಾಡುತ್ತಾರೆ, ಆಟವಾಡಿಸುತ್ತಾರೆ ಅವರೆಡೆ ಅನಾಯಾಸವಾಗಿ ಸ್ನೇಹಭಾವದಿಂದ ಒಡನಾಡುತ್ತವೆ. ಪುಟ್ಟಜೀವಗಳ ಅಸ್ತಿತ್ವವೇ ಸರಳತೆ ಮತ್ತು ಮುಗ್ಧತೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ನಿರಾಶ್ರಿತ ಮಕ್ಕಳು ಈ ಮನೆಯ ಸಾಕುನಾಯಿಯೊಂದಿಗೆ (Dog) ಚೆಂಡಾಟವಾಡುತ್ತಿದ್ಧಾರೆ. ನಾಯಿ ಕೂಡ ಎಷ್ಟು ಉಲ್ಲಾಸದಿಂದ ಅವರೊಂದಿಗೆ ಸ್ಪಂದಿಸುತ್ತಿದೆ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Tuffy | Brown Boxer (@theboxertuffy)

ಬ್ರೌನ್​ ಬಾಕ್ಸರ್​ ಟಫಿ ಎಂಬ ಇನ್​ಸ್ಟಾ ಖಾತೆಯಲ್ಲಿ ಈ ವಿಡಿಯೋ  ಹಂಚಿಕೊಳ್ಳಲಾಗಿದೆ. ಈ ಮಕ್ಕಳು ಚೆಂಡು ಎಸೆದಾಗ ಪ್ರತೀ ಬಾರಿಯೂ ಅದು ಬಾಯಿಯಿಂದ ಚೆಂಡನ್ನು ಹಿಡಿಯುತ್ತದೆ. ನಂತರ ಅವರತ್ತ ಎಸೆಯುತ್ತದೆ. ಪರಸ್ಪರ ಕುಣಿದಾಡುತ್ತ ಈ ಆಟವನ್ನು ನಾಯಿಯೊಂದಿಗೆ ಅವರೆಲ್ಲ ಆನಂದಿಸುತ್ತಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಸಂಪೂರ್ಣ ಪರವಶರಾಗಿದ್ದಾರೆ. ಆದರೆ, ಈ ವಿಡಿಯೋಗಿಂತ ಮೊದಲು ಇದೇ ನಾಯಿಯ ಇನ್ನೊಂದು ವಿಡಿಯೋ ವೈರಲ್ ಆಗಿತ್ತು. ಸುಮಾರು 10 ಲಕ್ಷ ಜನರು ಈ ವಿಡಿಯೋ ನೋಡಿದ್ದರು. 90,000 ಜನರು ಇದನ್ನು ಇಷ್ಟಪಟ್ಟಿದ್ದರು. ಆ ವಿಡಿಯೋ ಲಿಂಕ್​ ಈ ಕೆಳಗಿದೆ.

ಮೊದಲಿಗೆ ಈ ಹುಡುಗಿಯೊಂದೇ ನಾಯಿಯ ಸ್ನೇಹ ಬೆಳೆಸಿದೆ. ನಂತರ ತನ್ನೊಂದಿಗೆ ಇನ್ನಷ್ಟು ಮಕ್ಕಳನ್ನು ಕರೆದುಕೊಂಡು ಬಂದಿದೆ. ಹೀಗೆ ಈ ಮಕ್ಕಳು ಮತ್ತು ನಾಯಿಯ ಮಧ್ಯೆ ಮಧುರವಾದ ಸ್ನೇಹ ಅರಳಿದೆ. ಆಪ್ತವಾದ ಈ ವಿಡಿಯೋಗಳನ್ನು ನೋಡಿದ ಅನೇಕರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ. ನಾಯಿಗಳಾಗಲೀ, ಮಕ್ಕಳಾಗಲೀ ಎಂದೂ ನಿಮ್ಮ ಆರ್ಥಿಕ ಸ್ಥಿತಿಯಿಂದ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸಲಾರವು. ಈ ಮಕ್ಕಳಿಗೂ ನಾಯಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ ಹಲವಾರು ಜನ. ಮುಗ್ಧಜೀವಗಳಿಗೆ ಪ್ರೀತಿಯೊಂದೇ ಸೇತುವೆ. ನೀವೇನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:59 pm, Thu, 22 June 23

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್