AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತನ್ನ ಅಮ್ಮ ಇನ್ನೆಂದೂ ಬಾರಳು ಎಂಬ ಅರಿವು ಈ ಮರಿಗಿಲ್ಲ

Mother : ತೀರಿದ ತಾಯಿಯಿಂದ ಅದನ್ನು ದೂರಗೊಳಿಸುವಾಗ ಅದು ಪ್ರತಿಭಟಿಸುತ್ತ ಮತ್ತೆ ತಾಯಿಯ ಬಳಿ ಬರುತ್ತಿರುವುದನ್ನು ನೋಡಿದರೆ ಎಂಥವರಿಗೂ ಕಣ್ಣಲ್ಲಿ ನೀರೂರಬೇಕು.ಈ ವಿಡಿಯೋ ಕ್ಷಣ ಕಾಲ ನಿಮ್ಮನ್ನು ಮೌನವಾಗುಳಿಯುವಂತೆ ಮಾಡುತ್ತದೆ.

Viral Video: ತನ್ನ ಅಮ್ಮ ಇನ್ನೆಂದೂ ಬಾರಳು ಎಂಬ ಅರಿವು ಈ ಮರಿಗಿಲ್ಲ
ತಾನು ತಾಯಿಯನ್ನು ಕಳೆದುಕೊಂಡಿದ್ದೇನೆನ್ನುವ ಅರಿವೇ ಇಲ್ಲ ಈ ಮರಿಗೆ
Follow us
ಶ್ರೀದೇವಿ ಕಳಸದ
|

Updated on:Jun 21, 2023 | 5:11 PM

Monkey: Mammal ಎಂಬ ಪದ ಪುರಾತನ ಗ್ರೀಕ್ ಭಾಷೆಯ ಮ್ಯಾಮೆ (mamme) ಪದದಿಂದ ಲ್ಯಾಟಿನ್ ಭಾಷೆಯ ಮಾಮ್ಮಾ (mamma) ಮೂಲಕ ಬಂದದ್ದು. ಕನ್ನಡದಲ್ಲಿ ಇದು ಸಸ್ತನಿ. ತಮ್ಮ ಮರಿಗಳಿಗೆ ಎದೆಹಾಲೂಡಿಸುವ ಪ್ರಾಣಿಗಳು ಸಸ್ತನಿಗಳು. ಜಗತ್ತಿನ ಬಹುತೇಕ ಭಾಷೆಗಳಲ್ಲಿ ತಾಯಿಯನ್ನು ಕರೆಯಲು ಬಳಸುವ ಪದಗಳು, ಉದಾಹರಣೆಗೆ “ಮಾ” / “ಅಮ್ಮಾ” / “mummy” ಇವೆಲ್ಲ ಅದೇ ರೀತಿ ಕೇಳಿಸುವುದು ಅಚ್ಚರಿಯ ವಿಷಯವೇನಲ್ಲ. ನಮ್ಮಲ್ಲಿ ಮೊಲೆ ಕುಡಿಸುವುದಕ್ಕೆ ಅಮ್ಮೀ ಕುಡಿಸುವುದು ಎಂಬ ಬಳಕೆಯಿದೆ. ತಾಯಿಗೂ ಮೊಲೆಹಾಲಿಗೂ ಅಂಥ ಅನ್ಯೋನ್ಯ ಸಂಬಂಧ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Vikram Verma (@vikramsnakesaverballia)

ತಾಯ ಮೊಲೆಹಾಲು ಬಯಸಿ ಅದನ್ನು ಗಟ್ಟಿಯಾಗಿ ಅವುಚಿಕೊಳ್ಳಲೆಳಸುವ ಕೋತಿಮರಿಯ ವಿಡಿಯೋವೊಂದನ್ನು ಇಲ್ಲಿ ಕಾಣಬಹುದು. ಇಲ್ಲಿ ಅದು ಹೃದಯವಿದ್ರಾವಕವಾಗಿರುವುದಕ್ಕೆ ಕಾರಣ ಅದರ ತಾಯಿ ತೀರಿಹೋಗಿದೆ. ಸತ್ತುಹೋಗಿದೆ ಮತ್ತು ಅದರ ಅರಿವು ಮರಿಗೆ ಇಲ್ಲ. ಅದು ಎಂದಿನಂತೆ ತಾಯಿಯ ಮಡಿಲೇರಿ ಮೊಲೆಗೆ ಬಾಯಿ ಹಾಕಿ ಚೀಪುತ್ತಿದೆ. ಆದರೆ ತಾಯಿಯಿಂದ ಯಾವ ಪ್ರತಿಕ್ರಿಯೆಯೂ ಇಲ್ಲ.

ಇದನ್ನೂ ಓದಿ : Viral:ಪ್ರೀತಿಗೆ ಜಯವಾಗಲಿ!; ದೆಹಲಿ ಮೆಟ್ರೋದ ಈ ಜೋಡಿಯನ್ನು ಹುರಿದುಂಬಿಸುತ್ತಿರುವ ನೆಟ್ಟಿಗರು

ತೀರಿದ ತಾಯಿಯಿಂದ ಅದನ್ನು ದೂರಗೊಳಿಸುವಾಗ ಅದು ಪ್ರತಿಭಟಿಸುತ್ತ ಮತ್ತೆ ತಾಯಿಯ ಬಳಿ ಬರುತ್ತಿರುವುದನ್ನು ನೋಡಿದರೆ ಎಂಥವರಿಗೂ ಕಣ್ಣಲ್ಲಿ ನೀರೂರಬೇಕು. ಮಣ್ಣುಮಾಡಲು ಗುಂಡಿ ತೆಗೆದು ಅದರಲ್ಲಿ ಸತ್ತ ಹೆಣ್ಣುಮಂಗವನ್ನು ಮಲಗಿಸಿದಾಗಲೂ ಮರಿ ತಪ್ಪಿಸಿಕೊಂಡು ಹೋಗಿ ತಾಯಿಯ ಪಕ್ಕವೇ ಮಲಗುತ್ತಿದೆ.

ಸಾವು ಎಂಥ ಕ್ರೂರಿಯಲ್ಲವೇ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:00 pm, Wed, 21 June 23

ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ