AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಂಭಾಷಣೆ ಈ ಪ್ರೇಮ ಸಂಭಾಷಣೆ; ಅಜ್ಜಅಜ್ಜಿಯ ಈ ವಿಡಿಯೋ ವೈರಲ್

Couple Love : ''ಇದು ಪ್ರೀತಿಯಲ್ಲ, ಒಂಟಿನ. ಹಿರಿಯನಾಗರಿಕರು ತಮ್ಮ ಸುತ್ತ ಜನರಿರಬೇಕೆಂದು ಬಯಸುತ್ತಾರೆ. ಇರುವವರ ಗಮನ ಸೆಳೆಯುತ್ತಿರುತ್ತಾರೆ. ಆದರೆ ಈಗಿನ ಪೀಳಿಗೆಯವರು ಸ್ವಾರ್ಥಿಗಳು. ಅವರನ್ನು ನಿರ್ಲಕ್ಷಿಸುತ್ತಾರೆ.''

Viral Video: ಸಂಭಾಷಣೆ ಈ ಪ್ರೇಮ ಸಂಭಾಷಣೆ; ಅಜ್ಜಅಜ್ಜಿಯ ಈ ವಿಡಿಯೋ ವೈರಲ್
ಸಂಭಾಷಣೆಯಲ್ಲಿ ತೊಡಗಿರುವ ಕೊಲ್ಕತ್ತಾದ ದಂಪತಿ
ಶ್ರೀದೇವಿ ಕಳಸದ
|

Updated on:Jun 22, 2023 | 11:05 AM

Share

Love: ಈ ಅಜ್ಜಿ ತನ್ನ ಪಾಡಿಗೆ ತಾನು ಸೊಪ್ಪು ಬಿಡಿಸುತ್ತಿದ್ದಾಳೆ. ಆದರೆ ಈ ಅಜ್ಜ ಆಕೆಯನ್ನು ವಾಕಿಂಗ್ ಸ್ಟಿಕ್​ ನಿಂದ ತಿವಿದು ತನ್ನೆಡೆ ಗಮನ ಸೆಳೆಯುತ್ತಿದ್ದಾನೆ. ಕೆಲಸವನ್ನೂ ಮಾಡುತ್ತ ಅಜ್ಜನೊಂದಿಗೆ ಮಾತನಾಡುತ್ತಲೇ ಇದ್ದಾಳೆ. ಕೊನೆಗೆ ತಂಬಿಗೆಯಲ್ಲಿಯ ನೀರನ್ನು ತಲೆಗೆ ಸಿಂಪಡಿಸಿ ಉಜ್ಜಿಕೊಳ್ಳುತ್ತ ಮತ್ತೆ ಆಕೆಯನ್ನು ತನ್ನೆಡೆ ಸೆಳೆಯಲು ನೋಡುತ್ತಿದ್ದಾನೆ. ಹುಸಿಗದರಿನಿಂದಲೇ ತಂಬಿಕೆಯನ್ನು ಇಸಿದುಕೊಳ್ಳುತ್ತಾಳೆ. ಅತ್ತಿತ್ತ ಓಲಾಡುವ ಮಗುವಿನ ಗದ್ದ ಹಿಡಿದು ಬಾಚುವಂತೆ ಕೆದರಿಕೊಂಡ ಅಜ್ಜನ ತಲೆಯನ್ನು ಬಾಚುತ್ತಾಳೆ ಅಜ್ಜಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by কলকাতা_chitrography (@kolkata_chitrography)

ಈ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದೆ. ಈಗಿನ ಎಳೇಜೋಡಿಗಳು ಇಂಥ ವಿಡಿಯೋಗಳನ್ನು ನೋಡಬೇಕು.  ಇದು ಶುದ್ಧಪ್ರೀತಿ ಎನ್ನುತ್ತಿದ್ದಾರೆ. ಸುಮಾರು 62,000 ಜನರು ಈ ವಿಡಿಯೋ ಇಷ್ಟಪಟ್ಟಿದ್ಧಾರೆ. ಇಂಥ ಪ್ರೀತಿ ಈಗಿನ ಪೀಳಿಗೆಯಲ್ಲಿ ಇದೆಯೇ? ಖಂಡಿತ ಇಲ್ಲ ಮರೆತುಬಿಡಿ ಎಂದಿದ್ದಾರೆ ಒಬ್ಬರು.  ಕಳೆದ ತಿಂಗಳು ಕ್ಯಾನ್ಸರ್​ನಿಂದ ನನ್ನ ಅಜ್ಜನನ್ನು ಕಳೆದುಕೊಂಡೆ. ಈ ದೃಶ್ಯ ಅವರನ್ನು ನೆನಪಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ತನ್ನ ಅಮ್ಮ ಇನ್ನೆಂದೂ ಬಾರಳು ಎಂಬ ಅರಿವು ಈ ಮರಿಗಿಲ್ಲ 

ಇದು ಪ್ರೀತಿಯಲ್ಲ. ಹಿರಿಯನಾಗರಿಕರು ಗಮನಸೆಳೆಯಲು ನೋಡುತ್ತಿರುತ್ತಾರೆ. ಏಕೆಂದರೆ ವಯಸ್ಸಾಗುತ್ತಾ ಅವರಿಗೆ ಒಂಟಿತನ ಕಾಡತೊಡಗುತ್ತದೆ. ತಮ್ಮ ಸುತ್ತ ಜನರಿರಬೇಕೆಂದು ಬಯಸುತ್ತಾರೆ. ಆದರೆ ಈಗಿನ ಪೀಳಿಗೆಯವರು ಸ್ವಾರ್ಥಿಗಳು. ಹಿರಿಯ ನಾಗರಿಕರನ್ನು ನಿರ್ಲಕ್ಷಿಸುತ್ತಾರೆ ಎಂದಿದ್ದಾರೆ ಮತ್ತೊಬ್ಬರು. ಇದೆಲ್ಲ ಸ್ಕ್ರಿಪ್ಟೆಡ್​, ರೀಲ್​​ಗೋಸ್ಕರ ಮಾಡಿದ್ದು ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video;ನಾಯಿಯಿಂದ ಯೋಗ ಮಾಡಿಸಿ ಯೋಗವನ್ನು ಅವಮಾನಿಸಿದ್ದೀರಿ

ಈ ಪೀಳಿಗೆಗೆ ಇದೆಲ್ಲವೂ ಅಸಹಜವೆನ್ನಿಸುತ್ತದೆ. ಇಂಥ ಶುದ್ಧ ಪ್ರೀತಿಯನ್ನು ಅವರೆಂದೂ ಅರ್ಥ ಮಾಡಿಕೊಳ್ಳಲಾರರು ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ವಯಸ್ಸಾದಂತೆ ಮತ್ತೆ ಮಕ್ಕಳಾಗುತ್ತಾರಂತೆ, ಈ ವಿಡಿಯೋದಲ್ಲಿ ಅದನ್ನು ಕಾಣಬಹುದು ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:45 am, Thu, 22 June 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!