AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಕಚ್ಚಾ ಬದಾಮ್’ ಹಾಡಿಗೆ ಹೆಜ್ಜೆ ಹಾಕಿದ ಪಾಕಿಸ್ತಾನದ ಪೋರ

Kacha Badam: ನನ್ನ ಮದುವೆಯಲ್ಲಿ ನೀ ಡ್ಯಾನ್ಸ್ ಮಾಡಲೇಬೇಕು ಎಂದು ಕೆಲವರು. ನಿನಗೆ ಒಳ್ಳೆಯ ಭವಿಷ್ಯವಿದೆ ಎಂದು ಹಲವರು ಈ ಮಗುವಿಗೆ ಹೇಳುತ್ತಿದ್ದಾರೆ. ಅಂಥ ವಿಶೇಷ ಏನಿದೆ ಈ ಮಗುವಿನ ನೃತ್ಯದಲ್ಲಿ? ನೀವೇ ನೋಡಿ.

Viral Video: 'ಕಚ್ಚಾ ಬದಾಮ್' ಹಾಡಿಗೆ ಹೆಜ್ಜೆ ಹಾಕಿದ ಪಾಕಿಸ್ತಾನದ ಪೋರ
ಕಚ್ಚಾ ಬದಾಮ್ ಹಾಡಿಗೆ ಹೆಜ್ಜೆ ಹಾಕುತ್ತಿರುವ ಪಾಕಿಸ್ತಾನಿ ಪೋರ
ಶ್ರೀದೇವಿ ಕಳಸದ
|

Updated on: Jun 22, 2023 | 11:48 AM

Share

Kaccha Badam: ಮಕ್ಕಳು ಏನು ಮಾಡಿದರೂ ಛಂದವೇ. ಅದರಲ್ಲೂ ತಾಳಕ್ಕೆ ತಕ್ಕಂತೆ ಕುಣಿದು ಭಾವಾಭಿನಯ ಮಾಡಿದರಂತೂ ಮತ್ತೂ ಛಂದ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಪಾಕಿಸ್ತಾನದ ಈ ಪುಟ್ಟಪೋರ ಕಚ್ಚಾ ಬದಾಮ್ ಹಾಡಿಗೆ ಹೆಜ್ಜೆ ಹಾಕಿದ್ದಾನೆ. 2022ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೂ ಈ ಹಾಡು ಗುಂಗು ಹಿಡಿಸಿತ್ತು. ಲಕ್ಷಾಂತರ ವಿಡಿಯೋ ರೀಲ್​ಗಳು ಅಪ್​ಲೋಡ್ ಆದವು. ಇದೀಗ ಮತ್ತೆ ಈ ಹಾಡು ಚಾಲ್ತಿಯಲ್ಲಿದೆ. ಈತನಕ 4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by R World Photography (@rworld.official)

ವೈಭವೋಪೇತವಾಗಿ ಮದುವೆಯೊಂದು ನಡೆಯುತ್ತಿದೆ. ಈ ಸಂದರ್ಭದಲ್ಲಿ ಈ ಪುಟ್ಟ ಹೆಜ್ಜೆ ಹಾಕಿದ್ದಾನೆ. ಸುತ್ತಮುತ್ತಲಿನವರೆಲ್ಲರೂ ಇವನ ಪ್ರತಿಭೆಯಿಂದ ಪುಳಕಿತರಾಗಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಈ ಥರ ನರ್ತಿಸಿದರೆ ಈ ಮಗು ಯಾರದೆಂದು ಕೇಳುವುದು ಖಂಡಿತ! ಚೆನ್ನಾಗಿ ನರ್ತಿಸಿದ್ದೀಯಾ ನಿನಗೆ ಒಳ್ಳೆಯದಾಗಲಿ ಎಂದಿದ್ದಾರೆ ಒಬ್ಬರು. ಓಹ್​ ಇನ್ನೇನು 1 ಮಿಲಿಯನ್​ಗೆ ಈ ವಿಡಿಯೋ ತಲುಪುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಪ್ರಾಣಿಲೋಕದ ಬುದ್ಧಿಮತ್ತೆ, ಸಂವಹನಾ ಸಾಮರ್ಥ್ಯಕ್ಕೆ ಇದಕ್ಕಿಂತ ದಂಗುಬಡಿಸುವ ಉದಾಹರಣೆ ಬೇಕೆ?

ನನ್ನ ಮದುವೆಯಲ್ಲಿಯೂ ಈ ಮಗು ಹೀಗೆಯೇ ನರ್ತಿಸಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಪಾಕಿಸ್ತಾನದ ರಿಯಾಲಿಟಿ ಷೋದಿಂದ ಈ ಮಗುವಿಗೆ ಆಹ್ವಾನ ಬರುತ್ತದೆ ಎನ್ನಿಸುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ಮಗುವಿಗೆ ಹುಟ್ಟಿನಿಂದಲೇ ನೃತ್ಯ ಮೈಗೂಡಿದೆ ಎನ್ನಿಸುತ್ತದೆ ಎಂದು ಮಗದೊಬ್ಬರು ಹೇಳಿದ್ದಾರೆ. ಬಹಳ ಮುದ್ದಾಗಿದೆ ಈ ಮಗು, ಡ್ಯಾನ್ಸ್​ ಮತ್ತು ಆ್ಯಕ್ಟಿಂಗ್​ನಲ್ಲಿ ಇದಕ್ಕೆ ಭವಿಷ್ಯವಿದೆ ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ