AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುನಿಸಿಕೊಂಡ ಪ್ರೇಯಸಿ, ಅದ್ಭುತವಾಗಿ ಸಾರಿ ಹೇಳಿದ ಪ್ರಿಯತಮ – ಇವರ ಪ್ರೇಮದಾಟ ಕಂಡು ಜನ ಏನಂದರು?

ಈ ಹೋರ್ಡಿಂಗ್ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ಪ್ರಿಯಕರನಲ್ಲಿರುವ ಪ್ರೀತಿ ಪ್ರೇಮಕ್ಕೆ ಫಿದಾ ಆಗಿದ್ದಾರೆ. ಇದು ನಿಜವಾದ ಪ್ರೀತಿ, ಕ್ಷಮಿಸಿಬಿಡು ಎಂದು ಹುಡುಗಿಗೆ ಉಚಿತ ಸಲಹೆ ನೀಡಿದ್ದಾರೆ.

ಮುನಿಸಿಕೊಂಡ ಪ್ರೇಯಸಿ, ಅದ್ಭುತವಾಗಿ ಸಾರಿ ಹೇಳಿದ ಪ್ರಿಯತಮ - ಇವರ ಪ್ರೇಮದಾಟ ಕಂಡು ಜನ ಏನಂದರು?
ಮುನಿಸಿಕೊಂಡ ಪ್ರೇಯಸಿ, ಅದ್ಭುತವಾಗಿ ಸಾರಿ ಹೇಳಿದ ಪ್ರಿಯತಮ
Follow us
ಸಾಧು ಶ್ರೀನಾಥ್​
|

Updated on:Jun 28, 2023 | 4:49 PM

ವಿವಾಹಿತ ಜೋಡಿಯೇ ಆಗಿರಲಿ ಅಥವಾ ಹದಿಹರೆಯದ ಪ್ರೇಮಿಗಳೇ ಆಗಿರಲಿ… ಕೋಪೋದ್ರೇಕಗಳು (Love and Fight Viral) ಅವರಲ್ಲಿ ಸಾಮಾನ್ಯ. ಹೆಚ್ಚಿನ ಪ್ರೇಮಿಗಳು ಅಥವಾ ದಂಪತಿಗಳು ಸಂತೋಷದ ಕ್ಷಣಗಳಿಗಿಂತ ಹೆಚ್ಚು ಜಗಳವಾಡುವ ಕ್ಷಣಗಳನ್ನು ಹೊಂದಿರುತ್ತಾರೆ. ಜಗಳವಾಡುವುದು ಮತ್ತು ಸ್ವಲ್ಪ ಸಮಯದ ನಂತರ ಕ್ಷಮಿಸಿ ಎಂದು ಹೇಳುವುದು ಸಾಮಾನ್ಯವಾಗಿದೆ. ಆದರೆ, ಇತ್ತೀಚೆಗೆ ಗೆಳೆಯನೊಬ್ಬ ತನ್ನ ಗೆಳತಿಗೆ ಕ್ಷಮೆ ಕೇಳಿದ (apology) ರೀತಿ ಸಂಚಲನ ಮೂಡಿಸಿದೆ. ಸ್ಥಳೀಯರಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಅವರ ಬದ್ಧತೆ ನೋಡಿ ಜಗತ್ತೇ ಬೆಚ್ಚಿಬಿದ್ದಿದೆ. ಪ್ರೇಮಿಯ ಜೊತೆ ಜಗಳವಾಡಿದ ಬಳಿಕ ಪ್ರಿಯಕರನೊಬ್ಬ ವಿನೂತನ ರೀತಿಯಲ್ಲಿ (bizarre billboard) ತನ್ನ ಗೆಳತಿಯ ಬಳಿ ಕ್ಷಮೆ ಕೇಳಿದ್ದಾನೆ.

ದೇಶದ ರಾಜಧಾನಿ ನೋಯ್ಡಾದಲ್ಲಿ (noida) ಯುವಕನೊಬ್ಬ ತನ್ನ ಗೆಳತಿಗೆ ಕ್ಷಮೆ ಯಾಚಿಸಿ ಬೃಹತ್ ಜಾಹೀರಾತು ಫಲಕ ಹಾಕಿದ್ದಾನೆ. ಅವರಿಬ್ಬರ ಬಾಲ್ಯದ ಫೋಟೋಗಳನ್ನು ಅದರಲ್ಲಿ ಸೇರಿಸಿದ್ದಾನೆ. ಕ್ಷಮಿಸು ಎಂದಿದ್ದಾನೆ. ಈ ಬೃಹತ್ ಹೋರ್ಡಿಂಗ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ‘ನನ್ನನ್ನು ಕ್ಷಮಿಸು ಸಂಜು. ನಾನು ಇನ್ನು ಮುಂದೆ ನಿನ್ನ ಹೃದಯವನ್ನು ನೋಯಿಸುವುದಿಲ್ಲ. ನೀ ಸುಶ್’ ಎಂಬುದು ಶೀರ್ಷಿಕೆ. ಮೇಲಾಗಿ.. ಈ ಹೋರ್ಡಿಂಗ್‌ನಲ್ಲಿ ಹುಡುಗಿ ಮತ್ತು ಹುಡುಗನ ಬಾಲ್ಯದ ಫೋಟೋಗಳಿವೆ. ಜೊತೆಗೆ ಪಿಂಕ್​ ಬಣ್ಣದ ಹೋರ್ಡಿಂಗ್ ಮತ್ತಷ್ಟು ಕಳೆಗಟ್ಟಿದೆ.​

ಈ ಹೋರ್ಡಿಂಗ್ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ಪ್ರಿಯಕರನಲ್ಲಿರುವ ಪ್ರೀತಿ ಪ್ರೇಮಕ್ಕೆ ಫಿದಾ ಆಗಿದ್ದಾರೆ. ನೆಟಿಜನ್‌ಗಳು ತಮ್ಮದೇ ಶೈಲಿಯಲ್ಲಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಇದು ನಿಜವಾದ ಪ್ರೀತಿಯ ಪುರಾವೆ ಎಂದು ಪ್ರಶಂಸಿಸಲಾಗುತ್ತದೆ. ಕ್ಷಮಿಸಿಬಿಡು ಎಂದು ಹುಡುಗಿಗೆ ಉಚಿತ ಸಲಹೆ ನೀಡಿದ್ದಾರೆ.

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:46 pm, Wed, 28 June 23