Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಆಸ್ಟ್ರೇಲಿಯಾದ ಈ ಪ್ರಸಿದ್ಧ ರೆಸ್ಟೋರೆಂಟ್​ನಲ್ಲಿ ಸಸ್ಯಜನ್ಯ ಆಹಾರ ನಿಷೇಧ

Vegan : ಸಸ್ಯಜನ್ಯ ಆಹಾರವನ್ನು ಸೂಕ್ತಪ್ರಮಾಣದಲ್ಲಿ ಸೇವಿಸದಿದ್ದರೆ ಪ್ರೊಟೀನ್ ಕೊರತೆಯಿಂದ ಖಿನ್ನತೆ ಆವರಿಸುತ್ತದೆ ಎನ್ನುತ್ತವೆ ಕೆಲ ಅಧ್ಯಯನಗಳು. ಈ ಕಾರಣಕ್ಕೆ ಆಸ್ಟ್ರೇಲಿಯಾದ ಖ್ಯಾತ ಬಾಣಸಿಗ ಈ ನಿರ್ಧಾರಕ್ಕೆ ಬಂದಿದ್ಧಾನೆಯೇ, ಏನಂತೀರಿ?

Viral: ಆಸ್ಟ್ರೇಲಿಯಾದ ಈ ಪ್ರಸಿದ್ಧ ರೆಸ್ಟೋರೆಂಟ್​ನಲ್ಲಿ ಸಸ್ಯಜನ್ಯ ಆಹಾರ ನಿಷೇಧ
ಆಸ್ಟ್ರೇಲಿಯಾದ ಫೈರ್ ರೆಸ್ಟೋರೆಂಟ್​ನಲ್ಲಿ ಸಸ್ಯಜನ್ಯ ಆಹಾರವನ್ನು ನಿಷೇಧಿಸಿದ ಬಗ್ಗೆ ಫೇಸ್​ಬುಕ್​ ಪೋಸ್ಟ್​
Follow us
ಶ್ರೀದೇವಿ ಕಳಸದ
|

Updated on:Jun 28, 2023 | 3:02 PM

Australia : ಆಸ್ಟ್ರೇಲಿಯಾದ ಖ್ಯಾತ ಬಾಣಸಿಗ ಜಾನ್​ ಮೌಂಟೇನ್​ (John Mountain) ತಮ್ಮ ರೆಸ್ಟೋರೆಂಟ್​ FYRE ನಲ್ಲಿ ಸಸ್ಯಜನ್ಯ (Vegan) ಆಹಾರವನ್ನು ನಿಷೇಧಿಸಿದ್ಧಾರೆ. ಈ ವಿಷಯವನ್ನು ಅವರು ತಮ್ಮ ಫೇಸ್​​ಬುಕ್ ಪುಟದಲ್ಲಿ ಹಂಚಿಕೊಂಡಾಗಿನಿಂದ ನೆಟ್ಟಿಗರು ಪ್ರತಿಕ್ರಿಯೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಈಗಾಗಲೇ ಈ ಪೋಸ್ಟ್​ ಅನ್ನು 5,000 ಜನರು ಇಷ್ಟಪಟ್ಟಿದ್ದಾರೆ. 4,000ಕ್ಕಿಂತಲೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. 209 ಜನರು ಇದನ್ನು ಹಂಚಿಕೊಂಡಿದ್ದಾರೆ. ಅರೆ! ಇವರು ಯಾಕೆ ಹೀಗೆ ಹೇಳಿದ್ದಾರೆ, ಇದಕ್ಕೆ ಕಾರಣವಾದರೂ ಏನು ಎಂಬ ಕುತೂಹಲ ನಿಮ್ಮಲ್ಲಿ ಉಂಟಾಗಿರಬೇಕಲ್ಲ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇತ್ತೀಚಿನ ವರ್ಷಗಳಲ್ಲಿ ಜನರು ತಮ್ಮ ತಮ್ಮ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಅರಿವನ್ನು ಬೆಳೆಸಿಕೊಂಡಿದ್ದಾರೆ. ಸಾಕಷ್ಟು ಜನ ಸಸ್ಯಜನ್ಯ ಆಹಾರದೆಡೆ ಆಕಸ್ತರಾಗುತ್ತಿದ್ದಾರೆ. ಅನೇಕರು ಸಂಪೂರ್ಣವಾಗಿ ಸಸ್ಯಾಧಾರಿತ ಆಹಾರಕ್ರಮವನ್ನು ಈಗಾಗಲೇ ರೂಢಿಸಿಕೊಂಡಿದ್ದಾರೆ. ಹಾಗಾಗಿ ರೆಸ್ಟೋರೆಂಟ್​ಗಳ ಮೆನುಗಳಲ್ಲಿ ಸಸ್ಯಜನ್ಯ ಪದಾರ್ಥಗಳನ್ನು ಉಲ್ಲೇಖಿಸುತ್ತಿರುವುದು ಸಹಜ. ಆದರೆ ಜಾಬ್​ ಮೌಂಟೇನ್​ ‘ಮಾನಸಿಕ ಆರೋಗ್ಯ’ದ ಕಾರಣ ನೀಡಿ ತನ್ನ ರೆಸ್ಟೋರೆಂಟ್​ನಿಂದ ಸಸ್ಯಾಹಾರವನ್ನು ನಿಷೇಧಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ಒಂದೇ ಕ್ಷಣ ತಡವಾಗಿದ್ದರೂ ಆತ ಹುಡುಗಿಯನ್ನು ಇರಿದೇ ಬಿಡುತ್ತಿದ್ದ!

ಈ ರೆಸ್ಟೋರೆಂಟ್​ ಪರ್ತ್​ನಲ್ಲಿದೆ. ಜೂ. 19ರಂದು ಹಂಚಿಕೊಳ್ಳಲಾದ ಈ ಪೋಸ್ಟ್​​ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಬಹಳ ಒಳ್ಳೆಯ ನಿರ್ಧಾರ ಮುಂದುವರಿಯಿರಿ ಎಂದಿದ್ದಾರೆ. ಸದ್ಯದಲ್ಲಿಯೇ ನಿಮ್ಮ ರೆಸ್ಟೋರೆಂಟ್​ಗೆ ಬಂದು ಊಟ ಮಾಡುತ್ತೇವೆ ಎಂದು ಅನೇಕರು ಹೇಳಿದ್ದಾರೆ. ಒಳ್ಳೆಯದು, ನಿಮ್ಮ ಬಿಝಿನೆಸ್​ ನಿಮ್ಮದೇ ನಿರ್ಧಾರ ಎಂದು ಮತ್ತೊಂದಿಷ್ಟು ಜನ ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : Viral Video: ಈ ಜನ್ಮದಲ್ಲಿಯೇ ವಿದ್ಯುತ್ ಕಂಡ ಉತ್ತಪ್ರದೇಶದ ವಯೋವೃದ್ಧೆ; ಇಂಥ ಅಧಿಕಾರಿಗಳು ಬೇಕು ಎನ್ನುತ್ತಿರುವ ನೆಟ್ಟಿಗರು

ಕಳೆದ ಭಾನುವಾರ ನಿಮ್ಮ ರೆಸ್ಟೋರೆಂಟ್​ನ ಬಾತುಕೋಳಿಯ ಕರುಳಿನಿಂದ ಮಾಡಿದ ಖಾದ್ಯ ನಿಜಕ್ಕೂ ಚೆನ್ನಾಗಿತ್ತು ಎಂದು ಒಬ್ಬರು ಹೇಳಿದ್ದಾರೆ. ಯಾರೊಬ್ಬರೂ ಜಾನ್​ ಅವರ ಈ ನಿರ್ಧಾರವನ್ನು ತಳ್ಳಿಹಾಕಿಲ್ಲ. ಬದಲಾಗಿ ಅವರ ನಿರ್ಧಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರೀ 4,000 ಜನರು!

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

Published On - 3:02 pm, Wed, 28 June 23

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು