AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜೇಡನಿಗೇ ಬಲೆ!; ಜಾರ್ ಪಾಲಾಯಿತೇ ಈ ದೊಡ್ಡಜೀವ?

Tarantulas: ಅಚಾನಕ್ ಆಗಿ ನಿಮ್ಮ ಮುಖಕ್ಕೆ ಏನೋ ಅಡರಿದಂತಾಗಿ ಅದು ಕೈಗೆ ಸಿಗದಂತೆ ಕಾಡಿಸಿದರೆ ಅದೇನು? ಅದೆನೆಂದು ನಿಮಗೆ ಗೊತ್ತಾಗಿ ಅದರ ಕರ್ತೃವನ್ನು ಹಿಡಿಯಲು ಹೋದರೆ ನೀವು ಯಶಸ್ವಿಯಾಗುತ್ತೀರೇ? ಈ ವಿಡಿಯೋ ನೋಡಿ ಹೇಳಿ.

Viral Video: ಜೇಡನಿಗೇ ಬಲೆ!; ಜಾರ್ ಪಾಲಾಯಿತೇ ಈ ದೊಡ್ಡಜೀವ?
ದೊಡ್ಡ ಜೇಡನನ್ನು ಹಿಡಿಯಲು ಪ್ರಯತ್ನಿಸುತ್ತಿರುವುದು
ಶ್ರೀದೇವಿ ಕಳಸದ
|

Updated on:Jun 28, 2023 | 12:32 PM

Share

Spider: ಇದ್ದಕ್ಕಿದ್ದ ಹಾಗೆ ದೊಡ್ಡದಾದ ಒಂದು ಜೇಡ (Tarantula) ನಿಮ್ಮೆದುರು ಪ್ರತ್ಯಕ್ಷವಾದರೆ ಏನು ಮಾಡುತ್ತೀರಿ? ಒಂದು ಓಡಿಹೋಗುತ್ತಿದ್ದೀರಿ, ಇಲ್ಲವೆ ಅದನ್ನು ಹಿಡಿಯಲು ಪ್ರಯತ್ನಿಸುತ್ತೀರಿ. ಸಣ್ಣಪುಟ್ಟ ಜೇಡವಾದರೆ ಪೊರಕೆಯಿಂದ ದಬ್ಬಿಬಿಡುತ್ತೀರಿ. ಆದರೆ ತುಸು ದೊಡ್ಡದಾದರೆ? ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ, ಕಪಾಟಿನ ಸಂದಿಯಲ್ಲಿ ಈ ದೊಡ್ಡದಾದ ಜೇಡ ಕಾಣಿಸಿಕೊಂಡಿದೆ. ಈ ವ್ಯಕ್ತಿ ಜಾರ್​ನಿಂದ ಅದನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾನೆ. ಈ ”ಆಪರೇಷನ್​ ಜೇಡ”ದಲ್ಲಿ ಈತ ಯಶಸ್ವಿಯಾಗುವನೆ? ನೋಡಿ ಈ ಕೆಳಗಿನ  ವಿಡಿಯೋ.

Away we go! by u/louyplays in nope

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಂತೂ ನನ್ನ ಮನೆಗೆ ಬಂದಿದ್ದ ಈ ಜೇಡನನ್ನು ಬಲೆಗೆ ಬೀಳಿಸಿದ್ದೇನೆ ಎಂದು ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ ಈ ವ್ಯಕ್ತಿ. ಈತನಕ ಈ ವಿಡಿಯೋ ಸುಮಾರು 18,000 ಓಟುಗಳನ್ನು ಗಳಿಸಿದೆ. ಅನೇಕರು ಅನೇಕ ರೀತಿ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರಿಗೆ ಭಯವಾಗಿದೆ, ಕೆಲವರಿಗೆ ಇದು ತಮಾಷೆಯಾಗಿ ಕಂಡಿದೆ. ಇನ್ನೂ ಕೆಲವರು ಈ ಸಾಹಸಕ್ಕೆ ಅಭಿನಂದನೆ ಎಂದಿದ್ದಾರೆ.

ಇದನ್ನೂ ಓದಿ : Viral Video:ನನಗ ಬರ್ಯಾಕ ಬರಲ್ಲಲೇಪಾ, ನಮ್ ಅಜ್ಜನ್ ಕೂಡೇ ಎಬಿಸಿಡಿ ಬರ್ಸೆಕೆಂಬರ್ತೇನಿ

ಇಲ್ಲ, ಜೇಡನ ಮನೆಯಲ್ಲಿ ನೀವಿದ್ದೀರಿ ಅದು ನಿಮ್ಮ ಮನೆಯಲ್ಲ ಎಂದು ಕಾಲೆಳೆದಿದ್ದಾರೆ ಒಬ್ಬರು. ಅಬ್ಬಾ! ಇನ್ನೂ ಮನೆಯಲ್ಲಿ ಇನ್ನೂ ಇಂಥ ಅದೆಷ್ಟು ಜೇಡಗಳು ಅಡಗಿವೆಯೋ ಎಂದು ಭಯ ವ್ಯಕ್ತಪಡಿಸಿದ್ದಾರೆ ಇನ್ನೊಬ್ಬರು. ನನಗಂತೂ ಹೃದಯಾಘಾತವೇ ಆಯಿತು ಅದು ಕಪಾಟಿನ ಸಂದಿಯಿಂದ ಹೊರಬಂದಾಗ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇಷ್ಟೆಲ್ಲ ಭಯಪಟ್ಟರೆ ಹೇಗೆ? ಒಮ್ಮೆ ಆಪ್ತವಾಗಿ ತಬ್ಬಿಕೊಂಡು ನೋಡಿ ಎಂದು ಮಗದೊಬ್ಬರು ತಮಾಷೆ ಮಾಡಿದ್ದಾರೆ. ಇವ ನಮ್ಮನೆಯಲ್ಲಿಯೇ ಇದ್ದ, ಎರಡು ದಿನದಿಂದ ಕಾಣುತ್ತಿಲ್ಲ, ಓಹೋ ಇಲ್ಲಿ ಬಂದಿದ್ದನೇ? ಸರಿ ಅವನನ್ನು ಜೋಪಾನವಾಗಿ ನಮ್ಮ ಮನೆಗೆ ವಾಪಾಸು ಕಳಿಸಿ ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:30 pm, Wed, 28 June 23

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್