Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಜನ್ಮದಲ್ಲಿಯೇ ವಿದ್ಯುತ್ ಕಂಡ ಉತ್ತಪ್ರದೇಶದ ವಯೋವೃದ್ಧೆ; ಇಂಥ ಅಧಿಕಾರಿಗಳು ಬೇಕು ಎನ್ನುತ್ತಿರುವ ನೆಟ್ಟಿಗರು

Electricity : ತಾನು ಬುಡ್ಡಿದೀಪದಲ್ಲಿಯೇ ಬದುಕು ಕಳೆಯುತ್ತೇನೇನೋ ಎಂದು ಬೇಸರಗೊಂಡಿದ್ದ ವಯೋವೃದ್ಧೆ ನೂರಜಹಾನಳ ಮನೆಗೆ ಸ್ವತಃ ಧಾವಿಸಿದ ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ ಆಕೆಯ ಮುಖದಲ್ಲಿ ಸಂತಸ ಅರಳಿಸಿದ್ದಾರೆ.

Viral Video: ಈ ಜನ್ಮದಲ್ಲಿಯೇ ವಿದ್ಯುತ್ ಕಂಡ ಉತ್ತಪ್ರದೇಶದ ವಯೋವೃದ್ಧೆ; ಇಂಥ ಅಧಿಕಾರಿಗಳು ಬೇಕು ಎನ್ನುತ್ತಿರುವ ನೆಟ್ಟಿಗರು
ಉತ್ತರ ಪ್ರದೇಶದ ಬುಲಂದ್​ಶಹರದ ವಯೋವೃದ್ಧೆ ನೂರ್​ಜಹಾನ್​ ಮನೆಗೆ ವಿದ್ಯುತ್​ ಸಂಪರ್ಕ ಕಲ್ಪಿಸಿದ ಖುಷಿಯಲ್ಲಿ ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ
Follow us
ಶ್ರೀದೇವಿ ಕಳಸದ
|

Updated on:Jun 27, 2023 | 4:18 PM

Uttar Pradesh : ಈತನಕವೂ ನಮ್ಮ ದೇಶದ ಅದೆಷ್ಟೋ ಲಕ್ಷಾಂತರ ಜನರು ಮನೆಯೊಳಗೆ ಕತ್ತಲನ್ನೇ ಉಸಿರಾಡುತ್ತಿದ್ದಾರೆ. ಆದರೂ ಕಣ್ಣುಮುಚ್ಚುವುದರೊಳಗೆ ಒಮ್ಮೆಯಾದರೂ ವಿದ್ಯುತ್ (Electricity) ನಮ್ಮ ಮನೆ ಬೆಳಗೀತೇ ಎಂದು ಬುಡ್ಡಿದೀಪವನ್ನಿಟ್ಟುಕೊಂಡು ಕನಸು ಕಾಣುತ್ತ ಜೀವಿಸುತ್ತಿದ್ದಾರೆ. ಹೀಗಿರುವಾಗ ಝಗ್ಗನೆ ಮನೆಯೊಳಗೆ ವಿದ್ಯುದ್ದೀಪ ಬೆಳಗಿದರೆ? ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ವಯೋವೃದ್ಧೆಯೊಬ್ಬರು ಇದೀಗ ತಮ್ಮ ಮನೆಯಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣೀಕರ್ತರಾದವರು ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ (Anukriti Sharma). ಕೆಳಗಿನ ಈ ವಿಡಿಯೋದಲ್ಲಿ ಈ ವಿದ್ಯುದ್ಸಂಭ್ರಮ ನೋಡಿ.

ಬುಲಂದ್​ಶಹರದಲ್ಲಿ (Bulandshahar) ವಾಸಿಸುತ್ತಿರುವ ನೂರ್​ಜಹಾನ್​ ಎನ್ನುವ ವೃದ್ಧೆಯ ಮನೆಯಲ್ಲಿ ದಶಕಗಳಿಮದ ವಿದ್ಯುತ್​ ಸಂಪರ್ಕವಿಲ್ಲದೇ ಬದುಕುತ್ತಿದ್ದರು. ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ ಅವರಿಗೆ ಈಕೆಯ ಪರಿಸ್ಥಿತಿಯ ಬಗ್ಗೆ ತಿಳಿಯಿತು. ಆಗ ಈ ಕೆಲಸವನ್ನು ಯಾರಿಗೂ ವಹಿಸದೇ ತಾವೇ ಸ್ವತಃ ನೂರ್​ಜಹಾನ್​ ಅವರ ಮನೆಗೆ ಧಾವಿಸಿದರು. ನಂತರ ಅವರ ತಂಡದ ಸದಸ್ಯರು ವಿದ್ಯುತ್​ ಮೀಟರ್​ ಅಳವಡಿಸಿ ಮನೆತುಂಬಾ ಬಲ್ಬಿನ ಬೆಳಕನ್ನೂಡಿಸಿದರು. ಇಷ್ಟೇ ಅಲ್ಲ, ಸೆಖೆಗಾಲಕ್ಕಾಗಿ ಒಂದು ಪಂಖಾ ಅನ್ನೂ ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ : Viral Video: ‘ನನಗ ಬರ್ಯಾಕ ಬರಲ್ಲಲೇಪಾ, ನಮ್ ಅಜ್ಜನ್ ಕೂಡೇ ಎಬಿಸಿಡಿ ಬರ್ಸೆಕೆಂಬರ್ತೇನಿ’

ನೂರ್​ಜಹಾನ್​ ಅನುಕೃತಿ ಶರ್ಮಾ ಅವರಿಗೆ ಸಿಹಿ ತಿನ್ನಿಸಿ ಸಂತೋಷ ಹಂಚಿಕೊಂಡರು. ಅಲ್ಲಿದ್ದವರೆಲ್ಲ ಅಜ್ಜಿಯ ಖುಷಿಯನ್ನು ಅನುಭವಿಸುತ್ತ ತಮ್ಮ ಬಾಯಿಯನ್ನೂ ಸಿಹಿ ಮಾಡಿಕೊಂಡರು. ಇದು ನನ್ನ ಜೀವನದ ಅತ್ಯುದ್ಭುತ ಕ್ಷಣ ಎಂದು ನೂರ್​ಜಹಾನ್​ ಹೇಳುವಾಗ ಆಕೆಯ ಮುಖದಲ್ಲಿ ತೃಪ್ತಭಾವವಿತ್ತು. ಮೇಲಿನ ಈ ಟ್ವೀಟ್​ ಅನ್ನು ಅನುಕೃತಿ ತಮ್ಮ ಟ್ವಿಟರ್​ ಖಾತೆಯಲ್ಲಿ ಜೂ. 26ರಂದು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು 9 ಲಕ್ಷ ಜನರು ನೋಡಿದ್ದಾರೆ. ಸಾವಿರಾರು ಜನರು ಅನುಕೃತಿಯವರಿಗೆ ಅಭಿನಂದನೆ ಕೋರಿದ್ದಾರೆ. ನಮಗೆ ನಿಮ್ಮಂಥ ಅಧಿಕಾರಿಗಳು ಬೇಕು. ಬಡಜನರಿಗೆ ಸಹಾಯ ಮಾಡುವಂಥ ಮನಸ್ಸುಗಳು ಆಡಳಿತಲ್ಲಿರಬೇಕು ಎಂದಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:15 pm, Tue, 27 June 23

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ