Viral Video: ಬುಲ್ ಶಾರ್ಕ್ ಅವನ ಕೈಕಚ್ಚಿದ್ದಲ್ಲದೆ ನೀರಿಗೂ ಎಳೆಯುತ್ತದೆ, ಮುಂದೆ?
Shark Attack: ''ನನ್ನ ಸ್ನೇಹಿತ ನೀರಿನಲ್ಲಿ ಕೈ ತೊಳೆಯುತ್ತಿರುವಾಗ ಶಾರ್ಕ್ ಅವನ ಕೈಕಚ್ಚಿ ಹಿಡಿದೆಳೆಯಿತು. ಎವರ್ಗ್ಲೇಡ್ಸ್ ಉದ್ಯಾನದಲ್ಲಿ ಭಯಂಕರ ಶಾರ್ಕ್ಗಳಿಗೆ. ದಯವಿಟ್ಟು ಜಾಗ್ರತೆ ವಹಿಸಿ. ನನಗಂತೂ ಇದನ್ನು ಎಂದೂ ಮರೆಯಲಾಗುವುದಿಲ್ಲ''
Shark : ಈ ಘಟನೆ ಫ್ಲೋರಿಡಾದ ಎವರ್ಗ್ಲೇಡ್ಸ್ ರಾಷ್ಟ್ರೀಯ ಉದ್ಯಾನದಲ್ಲಿ (Everglades National Park, Florida) ಶುಕ್ರವಾರ ನಡೆದಿದೆ. ಈ ಮೀನುಗಾರ ದೋಣಿವಿಹಾರದ ಮಧ್ಯೆ ಕೈತೊಳೆಯಲೆಂದು ನೀರಿಗೆ ಕೈ ಹಾಕಿದಾಗ ಇದ್ದಕ್ಕಿದ್ದಂತೆ ಶಾರ್ಕ್ ಇವನ ಕೈಯನ್ನು ಕಚ್ಚಿ ಹಿಡಿದೆಳೆಕೊಂಡುಬಿಡುತ್ತದೆ. ಅವನು ದೋಣಿಯಿಂದ ನೀರಿನೊಳಗೆ ಬಿದ್ದುಬಿಡುತ್ತಾನೆ. ಅಲ್ಲಿತನಕ ದೃಶ್ಯ ಸೆರೆಯಾಗಿದೆ. ಮುಂದೇನಾಯಿತು ಎಂದು ನೆಟ್ಟಿಗರು ಕಳವಳದಿಂದ ಪ್ರಶ್ನಿಸುತ್ತಿದ್ಧಾರೆ. ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆಯೋ ಎಂಬಂತೆ ಯಾವ ನೀರಿನಲ್ಲಿ ಯಾವ ಮೀನು ಇರುತ್ತದೆಯೋ? ಬಹಳ ಜಾಗ್ರತೆಯಿಂದ ವರ್ತಿಸಿ ಎಂಬ ಸಂದೇಶವನ್ನು ನೀಡುತ್ತಿದೆ ಈ ವಿಡಿಯೋ.
ಇದನ್ನೂ ಓದಿView this post on Instagram
ದೋಣಿಯಲ್ಲಿ ಈ ವ್ಯಕ್ತಿಯ ಜೊತೆಗಿದ್ದ ಮೈಕೆಲ್ ಎಂಬಾತ ಈ ವಿಡಿಯೋ ಸೆರೆಹಿಡಿದು ಇನ್ಸ್ಟಾಗ್ರಾಮ್ ಗೆ ಪೋಸ್ಟ್ ಮಾಡಿದ್ದಾನೆ. ನಾನು ಅನುಭವಿಸಿದ ಅತ್ಯಂತ ಭಯಾನಕ ಅನುಭವ ಇದು ಎಂದು ಈ ಘಟನೆಯ ಕುರಿತು ಸಾರಾಂಶ ಬರೆದಿದ್ದಾನೆ. ”ನನ್ನ ಸ್ನೇಹಿತ ನೀರಿನಲ್ಲಿ ಕೈ ತೊಳೆದುಕೊಳ್ಳುವಾಗ ಈ ಬುಲ್ ಶಾರ್ಕ್ (Bull Shark) ಅವನ ಕೈಕಚ್ಚಿ ಹಿಡಿದೆಳೆಯಿತು. ಎವರ್ಗ್ಲೇಡ್ಸ್ ಉದ್ಯಾನದಲ್ಲಿ ಭಯಂಕರ ಶಾರ್ಕ್ಗಳಿಗೆ. ನೀವು ದೋಣಿ ವಿಹಾರ ಮಾಡುವಾಗ ಜಾಗ್ರತೆ ವಹಿಸಿ. ನನಗಂತೂ ಇದನ್ನು ಎಂದೂ ಮರೆಯಲಾಗುವುದಿಲ್ಲ” ಎಂದಿದ್ದಾನೆ.
ಇದನ್ನೂ ಓದಿ : Viral Video: ”ಪುಟ್ಟಿ, ನೀನು ಸ್ಪೈಡರ್ಮ್ಯಾನ್ನ ಮಗಳೇ? ವಂಡರ್ ವುಮನ್ನ ಮಗಳೇ?”
ನಂತರ ಈ ವ್ಯಕ್ತಿಯನ್ನು ಜಾಕ್ಸನ್ ಸೌತ್ ಮೆಡಿಕಲ್ ಸೆಂಟರ್ಗೆ ವಿಮಾನದ ಮೂಲಕ ಕರೆದೊಯ್ದು ಚಿಕಿತ್ಸೆ ಕೊಡಲಾಗಿದೆ. ತೀವ್ರ ಗಾಯಗಳಿಂದ ಬಳಲುತ್ತಿರುವ ಈ ವ್ಯಕ್ತಿಯ ಕೈ ಬಗ್ಗೆ ಆಸ್ಪತ್ತೆಯು ಇನ್ನೂ ಮಾಹಿತಿ ನೀಡಿಲ್ಲ. ಈ ಘಟನೆಯ ಕುರಿತು ಉದ್ಯಾನವನದ ಆಡಳಿತ ಮಂಡಳಿಯ ಸದಸ್ಯರೊಬ್ಬರನ್ನು ಕೇಳಿದಾಗ, ‘ಹೌದು ಈ ಉದ್ಯಾನವನದಲ್ಲಿ ಶಾರ್ಕ್, ಮೊಸಳೆ, ವಿಷಪೂರಿತ ಹಾವುಗಳು ಇವೆ. ಇವು ಪರಭಕ್ಷಕಗಳಾಗಿದ್ದರಿಂದ ಇಲ್ಲಿಗೆ ಬರುವವರು ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದ್ದಾರೆ. ಯೂನಿವರ್ಸಿಟಿ ಆಫ್ ಫ್ಲೋರಿಡಾದ ಇಂಟರ್ನ್ಯಾಷನಲ್ ಶಾರ್ಕ್ ಅಟ್ಯಾಕ್ ಫೈಲ್ ಪ್ರಕಾರ, ಕಳೆದ ವರ್ಷ ಜಗತ್ತಿನಾದ್ಯಂತ 57 ಜನರು ಶಾರ್ಕ್ ಕಡಿತಕ್ಕೆ ಒಳಗಾಗಿದ್ಧಾರೆ. ಐವರು ತೀರಿಹೋಗಿದ್ಧಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ