Viral Video: ಬನಾನಾ ಪಾನೀಪುರಿ; ಆಗಲೇ ಕಿವುಚಿದ ಬಾಳೆಹಣ್ಣಿನಂತಾಗೋಯ್ತಾ ನಿಮ್ಮ ಮುಖ?

Panipuri: ದಿನವಿಡೀ ಬೆರಳಿನಿಂದ ಸ್ಕ್ರೀನ್​ ದೂಡುವ ನಿಮಗೆ ವರ್ಚುವಲ್ ಬಹುಮಾನ ಕೊಟ್ಟರೆ ಹೇಗೆ? ಹೇಗಿದ್ದರೂ ನೀವು ಚಾಟ್​ಪ್ರಿಯರು. ಯಾಕೆ ಒಮ್ಮೆ ಈ ವಿಶೇಷ ತಿಂಡಿಯನ್ನು ಪ್ರಯತ್ನಿಸಬಾರದು? ಮತ್ತಿದು ಉಚಿತ, ಸೀಮಿತ ಅವಕಾಶ!

Viral Video: ಬನಾನಾ ಪಾನೀಪುರಿ; ಆಗಲೇ ಕಿವುಚಿದ ಬಾಳೆಹಣ್ಣಿನಂತಾಗೋಯ್ತಾ ನಿಮ್ಮ ಮುಖ?
ಬನಾನಾ ಪಾನೀಪುರಿ
Follow us
ಶ್ರೀದೇವಿ ಕಳಸದ
|

Updated on:Jun 26, 2023 | 4:49 PM

Banana Panipuri : ಅಯ್ಯಾ ಚಾಟ್​ವಾಲಾಗಳಿರಾ ಮತ್ತು ಫುಡ್ ವ್ಲಾಗರ್​ಗಳಿರಾ, ಭಾರತೀಯರ ಪಂಚಪ್ರಾಣವಾದ ಈ ಸ್ಟ್ರೀಟ್​ ಚಾಟ್​ಗಳನ್ನು ಅಧ್ವಾನಗೊಳಿಸಿದ ಆರೋಪದ ಮೇಲೆ ನಿಮ್ಮನ್ನು ಬಂಧಿಸಿದರೆ ಈತನಕ ಎಷ್ಟು ಪ್ರಕರಣಗಳು ದಾಖಲಾದಾವು? ಯಾಕ್ರೋ ಹೀಗೆಲ್ಲ ಹುಚ್ಚು ಪ್ರಯೋಗಗಳಿಗೆ ಬಿದ್ದಿದ್ದೀರಿ? ನೆಟ್ಟಿಗರಂತೂ ನಿಮ್ಮನ್ನು ಬಯ್ಯಲು ಪದಪುಂಜಗಳನ್ನು ಹುಡುಕಾಡಿ ಬೇಸತ್ತಿದ್ದಾರೆ. ಅವರ ಮುಂದೆ ಸ್ಕ್ರೀನ್​ ಇರುವುದರಿಂದ ನೀವೆಲ್ಲಾ ಈತನಕ ಬದುಕಿದ್ದೀರಿ ಇಲ್ಲವಾದರೆ! ಪ್ರಿಯ ನೆಟ್ಟಿಗರೇ, ಈ ಬನಾನಾ ಪಾನೀಪುರಿಯನ್ನು ಇದೊಂದು ಸಲ ಹೊಟ್ಟೆಗೆ ಹಾಕ್ಕೊಂಬಿಡಿ…

ಪ್ರಪಂಚದಾದ್ಯಂತ ಪಾನಿಪುರಿ ಪ್ರಿಯರು ಈ ವಿಡಿಯೋ ನೋಡಿ ಕೆರಳಿ ಕೆಂಡವಾಗಿದ್ದಾರೆ. ಅವರ ತಲೆಯ ಮೇಲೆ ಬಾಳೆಹಣ್ಣು ಇಟ್ಟರೆ ಅದು ಕ್ಷಣಾರ್ಧದಲ್ಲಿ ಬೆಂದರೂ ಅಚ್ಚರಿಯಾಗದು. ಟ್ವಿಟರ್​ ಖಾತೆದಾರರಾದ ಮೊಹಮ್ಮದ್ ಫ್ಯೂಚರ್‌ವಾಲಾ ಎನ್ನುವವರು ಮೇಲಿನ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ಬಾಳೆಹಣ್ಣನ್ನು ಬರೀಗೈಯಿಂದ ಕಿವುಚುವುದೇನು, ತುಂಬುವುದೇನು, ಪಾನಿಯನ್ನು ಅದ್ದಿ ಕೊಡುವುದೇನು? ಕೆಲ ನೆಟ್ಟಿಗರಿಗೆ ಪ್ರತಿಕ್ರಿಯೆ ಟೈಪ್​ ಮಾಡಲು ಬೆರಳುಗಳೇ ಚಲಿಸುತ್ತಿಲ್ಲ.

ಇದನ್ನೂ ಓದಿ : Viral: ಸೇಕ್ರೆಡ್​ ಫೈರ್; 16 ವರ್ಷಗಳ ”ದಾಸವಾಳ ಪುಷ್ಪಾ” ಕನಸು ನನಸಾದದ್ದು ಹೀಗೆ

ಕೃಪಾಲಿ ಪಟೇಲ್​ ಎಂಬ ಇನ್​​ಸ್ಟಾ ಖಾತೆದಾರ ಫುಡ್​ ಬ್ಲಾಗ್​ನಲ್ಲಿ ಮೂಲ ಪೋಸ್ಟ್ ನೋಡಬಹುದಾಗಿದೆ. ನಾಳೆ ಸಂಜೆ ಬೀದಿಬದಿಯಲ್ಲಿ ಚನ್ನಾ ಬಟುರಾ ತಿನ್ನಲು ಹೋಗೋಣ ಎಂದು ನನ್ನ ಹೆಂಡತಿ ಹೇಳಿದ್ದಳು. ಈ ವಿಡಿಯೋ ನೋಡಿ ಕ್ಯಾನ್ಸಲ್​ ಮಾಡಿದಳು. ಈಗ ನಾಳೆ ರಾತ್ರಿಯ ಅಡುಗೆ ಜವಾಬ್ದಾರಿ ನನ್ನ ತಲೆಮೇಲೆ ಎಂದಿದ್ದಾರೆ ಒಬ್ಬರು. ಇಂಥ ಪೋಸ್ಟ್​ಗಳನ್ನು ಟ್ವೀಟ್ ಮಾಡಿದರೆ ನಿಮ್ಮನ್ನು ಬ್ಲಾಕ್ ಮಾಡಬೇಕಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ಧಾರೆ

ಇದನ್ನೂ ಓದಿ : Viral Video: ಕೋಕ್​ ಸ್ಟುಡಿಯೋದ ”ಕನ ಯಾರೀ” ಹಾಡಿಗೆ ಫ್ರೀ ಸ್ಟೈಲ್​ ನೃತ್ಯ

ಇದರಲ್ಲಿ ಅತ್ಯಂತ ಶುಚಿಯಾಗಿ ಕಾಣುತ್ತಿರುವುದೆಂದರೆ ಯೂಸ್ ಅಂಡ್​ ಥ್ರೋ ಪ್ಲೇಟ್ ಮಾತ್ರ ಎಂದಿದ್ದಾರೆ ಮತ್ತೊಬ್ಬರು. ಇದು ಜೈನ್​ ಪಾನೀಪುರಿ ಎಂದು ಮಗದೊಬ್ಬರು ಹೇಳಿದ್ದಾರೆ. ಏಯ್ ಶೀ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ಧಾರೆ. ಜೈನರು ಆಲೂಗಡ್ಡೆಯನ್ನು ಬಳಸುವುದಿಲ್ಲ. ಮಧುಮೇಹ ರೋಗಿಗಳು ಆಲೂಗಡ್ಡೆ ಬಳಸಬಾರದು. ಜೈನರು ಬಾಳೆಕಾಯಿಯನ್ನು ಆಲೂಗಡ್ಡೆಯ ಬದಲಾಗಿ ಬಳಸುತ್ತಾರೆ. ಇದು ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ ಎಂದಿದ್ದಾರೆ ಮತ್ತೊಬ್ಬರು. ಎಲ್ಲ ಸರಿ ಆದರೆ ಪಾನಿಪುರಿಯಲ್ಲಿ ಬಾಳೆಹಣ್ಣು!? ಎಂದು ಜನ ಮುಖ ಕಿವುಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಇಂಥ ವಿಚಿತ್ರ ಚಾಟ್​ಪ್ರಯೋಗಗಳನ್ನು ನೋಡಿದರೆ ನಿಮಗೆ ಏನೆನ್ನಿಸುತ್ತದೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:43 pm, Mon, 26 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ