Viral Video: ಕೋಕ್​ ಸ್ಟುಡಿಯೋದ ‘ಕನ ಯಾರೀ’ ಹಾಡಿಗೆ ಫ್ರೀ ಸ್ಟೈಲ್​ ನೃತ್ಯ

Kana Yaree: ಬಲೂಚಿ ಭಾಷೆಯ ಈ ಹಾಡು ಮಿಲಿಯನ್​ಗಟ್ಟಲೆ ಹೃದಯವನ್ನು ಕದ್ದಿದೆ. ಸಾಹಿತ್ಯ ಅರ್ಥವಾಗದಿದ್ದರೂ ಸಂಗೀತ ಸಂಯೋಜನೆಗೆ ಜನ ಮಾರು ಹೋಗಿದ್ದಾರೆ. ನೃತ್ಯಗಾತಿ ಇಷ್ನಾ ಹೂಪ್​ನೊಂದಿಗೆ ನರ್ತಿಸಿದ್ದು ಇದರ ಮೆರುಗನ್ನು ಹೆಚ್ಚಿಸಿದೆ.

Viral Video: ಕೋಕ್​ ಸ್ಟುಡಿಯೋದ 'ಕನ ಯಾರೀ' ಹಾಡಿಗೆ ಫ್ರೀ ಸ್ಟೈಲ್​ ನೃತ್ಯ
ಕನ ಯಾರೀ ಹಾಡಿಗೆ ನರ್ತಿಸುತ್ತಿರುವ ಕಲಾವಿದೆ ಇಷ್ನಾ
Follow us
ಶ್ರೀದೇವಿ ಕಳಸದ
|

Updated on:Jun 26, 2023 | 10:33 AM

Cock Studio: ಕಳೆದ ವರ್ಷ ಕೋಕ್​ ಸ್ಟುಡಿಯೋ ಪಾಕಿಸ್ತಾನ ಬಿಡುಗಡೆ ಮಾಡಿದ ಕನ ಯಾರೀ (Kana Yaree) ಹಾಡು ಜಗತ್ತಿನ ಸಂಗೀತ ಪ್ರೇಮಿಗಳ ಮನಸ್ಸನ್ನು ಕದ್ದಿದೆ. ಬಲೂಚಿ ಭಾಷೆಯ ಈ ಹಾಡಿನ ಸಾಹಿತ್ಯ ಎಷ್ಟೋ ಜನರಿಗೆ ಅರ್ಥವಾಗದಿದ್ದೂ ಸಂಗೀತ ಸಂಯೋಜನೆ ಮತ್ತು ಮಾಧುರ್ಯದಿಂದಾಗಿ ಅನೇಕರು ಮೆಚ್ಚುಗೆಗೆ ಪಾತ್ರವಾಗಿದೆ. ಸಾಕಷ್ಟು ಜನ ಈ ಹಾಡಿಗೆ ನರ್ತಿಸಿ ರೀಲ್ಸ್ ಮಾಡಿದ್ಧಾರೆ. ಆದರೆ ಇದೀಗ ವೈರಲ್ ಆಗುತ್ತಿರುವ ಈ ಡ್ಯಾನ್ಸ್​ ಭಿನ್ನವಾಗಿದೆ. ಈ ಯುವತಿಯ ಡ್ಯಾನ್ಸ್​ ಅನ್ನು ನೆಟ್ಟಿಗರು ಬಹುವಾಗಿ ಮೆಚ್ಚುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Eshna Kutty (@eshnakutty)

ಇವಾ ಬಿ ಮತ್ತು ವಹಾಬ್​ ಬುಗ್ತಿ ಬರೆದ ಈ ಹಾಡಿಗೆ ನರ್ತಕಿ ಎಷ್ನಾ ಕುಟ್ಟಿ ಹೆಜ್ಜೆ ಹಾಕಿದ್ದಾರೆ. ಕೋಕ್​ ಸ್ಟುಡಿಯೋ ನನ್ನ ನೆಚ್ಚಿನ ಚಾನೆಲ್. ಕನಾ ಯಾರೀ ಹಾಡು ನನ್ನನ್ನು ಇನ್ನಿಲ್ಲದಂತೆ ಸೆಳೆಯಿತು. ಹೀಗಾಗಿ ಫ್ರೀಸ್ಟೈಲ್​ ನೃತ್ಯವನ್ನು ಮಾಡಿದೆ. ಮುಂದೊಂದು ದಿನ ನಾನು ತಂಡದೊಂದಿಗೆ ಈ ಹಾಡಿಗೆ ನೃತ್ಯ ಸಂಯೋಜಿಸುತ್ತೇನೆ ಎಂದಿದ್ದಾರೆ ಎಷ್ನಾ.  ಹೂಪ್​ನೊಂದಿಗೆ ಹೆಜ್ಜೆ ಹಾಕಿದ್ದಕ್ಕೆ ಇದರ ಮೆರುಗು ಇಮ್ಮಡಿಗೊಂಡಿದೆ. ನೆಟ್ಟಿಗರು ಕ್ಯಾ ಬಾತ್​ ಹೈ ಎನ್ನುತ್ತಿದ್ದಾರೆ. ಈ ಹಾಡನ್ನು ಕೋಕ್​ ಸ್ಟುಡಿಯೋದಲ್ಲಿ ಕೇಳಿ ನೋಡಿ.

ಎಷ್ನಾ, ವಾಹ್​ ನೀವು ತುಂಬಾ ಪ್ರತಿಭಾನ್ವಿತೆ. ಆ ಹೂಪ್​ಗುಂಟ ನೀವು ಅತೀ ಸೂಕ್ಷ್ಮವಾಗಿ ಕತ್ತು ತಿರುಗಿಸುವುದು ಬಹಳ ಆಕರ್ಷಕವಾಗಿದೆ. ಐದು ಸಲ ಈ ವಿಡಿಯೋ ನೋಡಿದೆ. ನಿಮ್ಮ ಹಿಂಬದಿಯಲ್ಲಿ ಕಟ್ಟಿಗೆಯ ಗೋಡೆ! ಹಾಗಿದ್ದರೆ ನೀವು ಮನೆಗೆ ಬಂದಿದ್ದೀರಿ ಎಂದರ್ಥ. ನನ್ನಿಷ್ಟದ ಹಾಡಿಗೆ ಹೆಜ್ಜೆ ಹಾಕುತ್ತಿರುವುದನ್ನು ನೋಡಿ ನನಗೆ ಬಹಳ ಖುಷಿಯಾಗಿದೆ. ಪಾಕಿಸ್ತಾನದಿಂದ ನಿಮಗೆ ಪ್ರೀತಿಯ ಹೊಳೆಯನ್ನೇ ಹರಿಸುತ್ತಿದ್ದೇವೆ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral: ಹೆಣ್ಣುಮಕ್ಕಳಿಂದ ನಿರಾಕರಣೆ; ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಈತ ರೂ. 66 ಲಕ್ಷ ವ್ಯಯಿಸಿದ

ಎಷ್ನಾ ಇದು ತುಂಬಾ ಮಜವಾಗಿದೆ. ನಾವೆಲ್ಲ ಸೇರಿದಾಗ ಈ ಹಾಡಿಗೆ ನರ್ತಿಸೋಣ. ನಾನು ಭಾರತೀಯ, ಈಗಾಗಲೇ 10 ಸಲ ಈ ಹಾಡು ನೋಡಿದೆ. ನನಗೆ ಭಾಷೆ ಅರ್ಥವಾಗದಿದ್ದರೂ ಸಂಗೀತ ಮತ್ತು ನೃತ್ಯ ಇಷ್ಟವಾಯಿತು ಎಂದು ಹೇಳಿದ್ದಾರೆ ಇನ್ನುಳಿದ ನೆಟ್ಟಿಗರು. ಈ ವಿಡಿಯೋ ಅನ್ನು ಈಗಾಗಲೇ ಮಿಲಿಯನ್​ ಜನರು ನೋಡಿದ್ದಾರೆ. ಸುಮಾರು 73,000 ಜನರು ಇಷ್ಟಪಟ್ಟಿದ್ಧಾರೆ.

ನಿಮಗೆ ಈ ಹಾಡು ನೃತ್ಯ ಇಷ್ಟವಾಯಿತೆ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:32 am, Mon, 26 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ