Viral: ಹೆಣ್ಣುಮಕ್ಕಳಿಂದ ನಿರಾಕರಣೆ; ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಈತ ರೂ. 66 ಲಕ್ಷ ವ್ಯಯಿಸಿದ

Limb Lengthening Surgery: 'ಹುಡುಗಿಯರ ಬಳಿ ಹೋಗಬೇಕೆಂದರೆ ಮೊದಲು ಅವರ ಎತ್ತರ ಗಮನಿಸಬೇಕು ಎನ್ನುವಷ್ಟು ಕೀಳರಿಮೆಗೆ ಇಳಿದೆ. ಭವಿಷ್ಯದ ಬಗ್ಗೆ ಆತಂಕಕ್ಕೊಳಗಾದೆ. ಆಗ ಈ ಚಿಕಿತ್ಸೆ ನನಗೆ ವರದಾನವಾಗಿ ಕಂಡಿತು.

Viral: ಹೆಣ್ಣುಮಕ್ಕಳಿಂದ ನಿರಾಕರಣೆ; ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಈತ ರೂ. 66 ಲಕ್ಷ ವ್ಯಯಿಸಿದ
5.5 ಅಡಿ ಎತ್ತರವಿದ್ದ ಸೈಗರ್ಸ್ ಶಸ್ತ್ರಚಿಕಿತ್ಸೆಯ ನಂತರ 6 ಅಡಿಗೆ ಏರಿರುವುದು.
Follow us
ಶ್ರೀದೇವಿ ಕಳಸದ
|

Updated on: Jun 24, 2023 | 12:59 PM

Height Increasing Surgery: ಬಣ್ಣ, ಗಾತ್ರ, ಎತ್ತರ ಮತ್ತಿತರೇ ಬಾಹ್ಯಸಮಸ್ಯೆಗಳಿಂದ ಬಳಲುತ್ತಿರುವ ಜನರನ್ನು ಸಮಾಜವು ಕೀಳರಿಮೆಯಲ್ಲಿ ಬೀಳಿಸಿ ಒದ್ದಾಡಿಸುತ್ತದೆ. ಸತತ ನಿರಾಕರಣೆಗೆ ಗುರಿಯಾದ ವ್ಯಕ್ತಿ ಖಿನ್ನತೆ ಅಥವಾ ಇನ್ನಿತರೇ ಮಾನಸಿಕ ತೊಂದರೆಗಳಿಗೆ ಈಡಾಗುತ್ತಾರೆ. ಆಗ ಅವರಿಗಳು ಸ್ನೇಹಿತರು ಮತ್ತು ಕುಟುಂಬದಿಂದ ದೂರು ಉಳಿಯಲು ಬಯಸುತ್ತಾರೆ. ಈ ಸಂದರ್ಭದಲ್ಲಿ ಇವರ ಸ್ಥಿತಿ ಅತ್ಯಂತ ಶೋಚನೀಯವಾಗಿರುತ್ತದೆ. ಅವರನ್ನು ಆ ಕೂಪದಿಂದ ಎತ್ತುವವರು ಬೇಕು ಅಥವಾ ಸ್ವತಃ ಅವರೇ ಪರಿಹಾರ ಕಂಡುಕೊಳ್ಳಬೇಕು. ಜಾರ್ಜಿಯಾದ ನೌಕಾಪಡೆಯಲ್ಲಿರುವ ಡಿನ್ಝೆಲ್​ ಸೈಗರ್ಸ್​ಗೆ 27 ವರ್ಷ. ಕುಳ್ಳನೆಂಬ ಕಾರಣಕ್ಕೆ ಅನೇಕ ಹುಡುಗಿಯರಿಂದ ತಿರಸ್ಕರಿಸಲ್ಪಟ್ಟ ನಂತರ ಈತ ಕಂಡುಕೊಂಡ ಉಪಾಯ, ತನ್ನ ಎತ್ತರವನ್ನು ಹೆಚ್ಚಿಸಿಕೊಳ್ಳುವುದು. ಆದರೆ ಹೇಗೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by @mrbrokenbonez

‘ಹದಿಹರೆಯದ ದಿನಗಳಲ್ಲಿ ನಾನು ತುಂಬಾ ಅವಮಾನವನ್ನು ಅನುಭವಿಸಿದ್ದೇನೆ. ನನಗಿಂತ ಎತ್ತರವಿರುವ ಹುಡುಗಿಯರಿಂದ ತಿರಸ್ಕಾರಕ್ಕೆ ಈಡಾಗಿದ್ದೇನೆ. ಆನಂತರ ಹುಡುಗಿಯರನ್ನು ಮಾತನಾಡಿಸುವ ಮೊದಲು ಅವರ ಎತ್ತರವನ್ನು ಗಮನಿಸುವುದು ಅಭ್ಯಾಸವಾಯಿತು. ಆಗೆಲ್ಲಾ ಅತ್ಯಂತ ಸಂಕಟಕ್ಕೆ ಈಡುಮಾಡುತ್ತ ಹೋಯಿತು. ಕುಳ್ಳಗಿದ್ದ ನಾನು ಒಟ್ಟಾರೆ ಕೀಳರಿಮೆಯಿಂದ ಬಳಲಿದೆ.”

ಇದನ್ನೂ ಓದಿ : Viral Video: ಮಧ್ಯಪ್ರದೇಶದ ಈ ರೌಡಿ ಮಂಗಣ್ಣನನ್ನು ಹಿಡಿದುಕೊಟ್ಟವರಿಗೆ ರೂ. 21000 ಬಹುಮಾನ

‘ಮೊದಲು 5.5 ಅಡಿ ಎತ್ತರ ಇದ್ದ ಈತ ಶಸ್ತ್ರಚಿಕಿತ್ಸೆ ನಂತರ 6 ಅಡಿಯಾಗಿದ್ದಾನೆ. ಇದಕ್ಕಾಗಿ ಸುಮಾರು ರೂ. 66 ಲಕ್ಷ ಹಣವನ್ನು ವ್ಯಯಿಸಿದ್ದೇನೆ. ನನ್ನ ಜೀವಮಾನವಿಡೀ ನಾನು ಕುಳ್ಳಗೆ ಕಾಣುವುದು ನನಗಿಷ್ಟವಿರಲಿಲ್ಲ. ನನ್ನ ಎತ್ತರವನ್ನು ಹೇಗಾದರೂ ಹೆಚ್ಚಿಸಿಕೊಳ್ಳಬೇಕೆಂದು ಯೋಚಿಸುತ್ತಿದ್ದೆ. Limb lengthening surgery ಶಸ್ತ್ರಚಿಕಿತ್ಸೆಯು ನನಗೆ ವರದಾನವಾಗಿ ಕಂಡಿತು’ ಎಂದಿದ್ಧಾನೆ ಸೈಗರ್ಸ್​.

ಇದನ್ನೂ ಓದಿ : Viral Video;ನನ್ನ ಮೊಟ್ಟೆಗಳಿಗೆ ಕೈಹಾಕಿದರೆ ಅಷ್ಟೇ; ಹೆಬ್ಬಾವು ಮುಂದೇನು ಮಾಡಿತು?

ಈತನಕ ಆರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ ಸೈಗರ್ಸ್​. ಎರಡೂ ಕಾಲುಗಳ ಮೂಳೆಯನ್ನು ಅರ್ಧದಷ್ಟು ಕತ್ತರಿಸಿ ರಾಡ್​ ಅನ್ನು ತೂರಿಸಲಾಗಿದೆ. 90 ದಿನಗಳಲ್ಲಿ ಹೊಸ ಮೂಳೆಯು ಬೆಳೆಯುತ್ತದೆ. ತದನಂತರ ರಾಡ್​ ಅನ್ನು ತೆಗೆಯಲಾಗುತ್ತದೆ. ಒಟ್ಟಾರೆ ಈ ಚಿಕಿತ್ಸೆಯ ಅವಧಿ ಒಂದು ವರ್ಷ. ಆದರೂ ಮೊದಲಿನಂತೆ ಚಟುವಟಿಕೆಯಿಂದ ಇರಲು ಪೂರಕವಾದ ವ್ಯಾಯಾಮ, ಆರೈಕೆ ಬೇಕಾಗುತ್ತದೆ.

ಆದರೂ ಇದು ಎಲ್ಲರಿಗೂ ಸಾಧ್ಯವಾಗುವುದೇ? ಅಡ್ಡಪರಿಣಾಮಗಳನ್ನು ಎದುರಿಸುವುದು ಎಲ್ಲರಿಗೂ ಸುಲಭವೇ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ