Viral Video: ‘ನನ್ನ ಮೊಟ್ಟೆಗಳಿಗೆ ಕೈಹಾಕಿದರೆ ಅಷ್ಟೇ’ ಹೆಬ್ಬಾವು ಮುಂದೇನು ಮಾಡಿತು?

Python : ಅರೆ ನಿನ್ನ ಮೊಟ್ಟೆಗಳನ್ನು ನಾನು ನೋಡುವುದು ಬೇಡವಾ? ನೋಡು ಎರಡೇ ಮೊಟ್ಟೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಪ್ರಾಣಿಪ್ರಿಯ ಜಯ್​ ಹೆಬ್ಬಾವಿಗೆ ಮುದ್ದಿನಿಂದ ಮಾತನಾಡಿಸುತ್ತ ಮೊಟ್ಟೆಗಳಿಗೆ ಕೈ ಹಾಕುತ್ತಿದ್ಧಾರೆ. ಆದರೆ ಈ ಹೆಬ್ಬಾವು...

Viral Video: 'ನನ್ನ ಮೊಟ್ಟೆಗಳಿಗೆ ಕೈಹಾಕಿದರೆ ಅಷ್ಟೇ' ಹೆಬ್ಬಾವು ಮುಂದೇನು ಮಾಡಿತು?
ನನ್ನ ಮೊಟ್ಟೆಗಳಿವು! ಮುಟ್ಟಬೇಡ; ಹಾವುಪ್ರಿಯ ಜಯ್ ಬ್ರೀವರ್​​ ಗೆ ಹೆದರಿಸುತ್ತಿರುವ ಹಾವು
Follow us
ಶ್ರೀದೇವಿ ಕಳಸದ
|

Updated on: Jun 24, 2023 | 11:34 AM

Animals : ಮೊಟ್ಟೆಯನ್ನೋ ಮರಿಯನ್ನೋ ಹಾಕಿದ ಸಂದರ್ಭದಲ್ಲಿ ತನ್ನನ್ನು ಸಾಕಿದವರನ್ನೇ ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಪ್ರಾಣಿಗಳು. ಅವುಗಳನ್ನು ರಕ್ಷಿಸಿಕೊಳ್ಳುವುದೇ ತನ್ನ ಮೊದಲ ಆದ್ಯತೆ ಎಂಬಂಥ ಮನಸ್ಥಿತಿ ತಾಯಿಯಾತ್ತಿದ್ದ ಒಡನೆಯೇ ಅವುಗಳಲ್ಲಿ ಮೈಗೂಡಿಬಿಡುತ್ತದೆ. ಇದೀಗ ಜಯ್​ ಬ್ರೀವರ್​ (Jay Brewer) ಎಂಬ ಪ್ರಾಣಿಪ್ರಿಯ ಮತ್ತು ಪಾಲಕ ತಾನು ಸಾಕಿದ ತಾಯಿಹೆಬ್ಬಾವಿನ (Python) ಬಳಿ ನಿಂತಿದ್ದಾನೆ. ಹಾಕಿದ ಮೊಟ್ಟೆಗಳನ್ನು ರಕ್ಷಿಸುವುದಕ್ಕಾಗಿ ಅವುಗಳೆಡೆ ಕೈಹಾಕುತ್ತಾನೆ. ತಕ್ಷಣವೇ ತಾಯಿಹೆಬ್ಬಾವು ಅವನನ್ನು ಕಚ್ಚಲು ಸಮೀಪಿಸುತ್ತದೆ. ನೋಡಿ ಈ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಈತನಕ 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ಧಾರೆ. ಸುಮಾರು 22,000 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ಧಾರೆ. ಪ್ರತೀಬಾರೀಯೂ ಈ ಮೊಟ್ಟೆಗಳನ್ನು ಮುಟ್ಟಲು ಜಯ್​ ಪ್ರಯತ್ನಿಸಿದಾಗೆಲ್ಲ ತಾಯಿಹೆಬ್ಬಾವು ಹೀಗೆಯೇ ವರ್ತಿಸಿದೆ. ಅನೇಕರು ಈ ವಿಡಿಯೋ ನೋಡಿ ಭಯವಾಯಿತು ಎಂದು ಪ್ರತಿಕ್ರಿಯಿಸಿದ್ಧಾರೆ. ಈ ಹೆಬ್ಬಾವು ಮೊಟ್ಟೆಗಳನ್ನು ಎಣಿಸುವುದಕ್ಕೂ ಬಿಡಲಾರದು ಅಷ್ಟೊಂದು ರಕ್ಷಣಾತ್ಮಕ ಮನೋಭಾವವವನ್ನು ಹೊಂದಿದೆ.

ಇದನ್ನೂ ಓದಿ : Viral Video: ರೇಲಿಂಗ್​ ಮೇಲೆ ಕೂಲಿ; ಇವು ತಿರುಮಲದ ಮೆಟ್ಟಿಲುಗಳು ಎನ್ನುತ್ತಿದ್ದಾರೆ ನೆಟ್ಟಿಗರು, ಹೌದೆ?

ಸಾಕಿದ ಹಾವಾದರೂ ಹಾವು ಹಾವೇ. ಅದರಲ್ಲೂ ಮೊಟ್ಟೆ ಇಟ್ಟ ಹಾವನ್ನು ಕೇಳಬೇಕೇ? ಕಚ್ಚಿಸಿಕೊಂಡರೂ ಪರ್ವಾಗಿಲ್ಲ ಎನ್ನುವ ಧೈರ್ಯ ಬೇಕು ಎಂದಿದ್ಧಾರೆ ಒಬ್ಬರು. ಜಯ್​ ಇನ್​ಸ್ಟಾ ಪುಟ ನೋಡಿದರೆ ಸಾಕು, ಥರಾವರಿ ಜಾತಿಯ ಮತ್ತು ಬಣ್ಣದ ಬೃಹತ್ ಗಾತ್ರದ ಹಾವುಗಳೊಂದಿಗೆ ಅವರು ಒಡನಾಡುವುದನ್ನು ನೋಡಿದರೆ ಒಂದು ಕ್ಷಣ ಎದೆ ಝಲ್ ಎನ್ನುತ್ತದೆ.

ಮೇಲಿನ ವಿಡಿಯೋದಲ್ಲಿ ಜಯ್​ ಇನ್ನೊಂದು ಹೆಬ್ಬಾವಿನ ಮೊಟ್ಟೆಗಳನ್ನು ಒಟ್ಟಾಗಿ ಮತ್ತೊಂದು ಟ್ರೇಗೆ ವರ್ಗಾಯಿಸಿದ್ದಾರೆ. ಈ ತಾಯಿಹೆಬ್ಬಾವು ಶಾಂತಸ್ವಭಾವವನ್ನು ಹೊಂದಿದೆ ಅನ್ನಿಸುತ್ತದೆ. ಆದರೆ ಮೇಲಿನ ಹೆಬ್ಬಾವು ಮಾತ್ರ ಭಯಂಕರ!

ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ