Viral Video: ಮಧ್ಯಪ್ರದೇಶದ ಈ ರೌಡಿ ಮಂಗಣ್ಣನನ್ನು ಹಿಡಿದುಕೊಟ್ಟವರಿಗೆ ರೂ. 21000 ಬಹುಮಾನ

Most Wanted Monkey : ಈ ಪ್ರಚಂಡ ಕೋತಿ ಒಟ್ಟು 20 ಜನರ ಮೇಲೆ ದಾಳಿ ಮಾಡಿದೆ. ಅವರಲ್ಲಿ ಎಂಟು ಮಕ್ಕಳು, ಒಬ್ಬ ವಯೋವೃದ್ಧ ಸೇರಿದ್ದಾರೆ. ಕೆಲವರ ಗಾಯಗಳಿಗೆ ಹೊಲಿಗೆಗಳೂ ಬಿದ್ದಿವೆ. ಕೊನೆಯಲ್ಲಿ ಇದನ್ನು ಬಂಧಿಸಿದ್ದು ಹೇಗೆಂದಿರಿ?

Viral Video: ಮಧ್ಯಪ್ರದೇಶದ ಈ ರೌಡಿ ಮಂಗಣ್ಣನನ್ನು ಹಿಡಿದುಕೊಟ್ಟವರಿಗೆ ರೂ. 21000 ಬಹುಮಾನ
ಸೌಜನ್ಯ : ಅಂತರ್ಜಾಲ
Follow us
|

Updated on:Jun 23, 2023 | 3:26 PM

Monkey : ಹಿಂದೆ ಉಜ್ಜಯನಿಯ ಅರಸ ವಿಕ್ರಮಾದಿತ್ಯ ಕುಟಿಲ ಬೇತಾಳವೊಂದನ್ನು ಬೆಂಬತ್ತಿ ಅದರ ಒಗಟುಗಳಿಗೆ ಉತ್ತರಿಸಲಾಗದೇ ಬಸವಳಿಯುತ್ತಿದ್ದನಂತೆ. ಈಗಿನ ಉಜ್ಜಯನಿಯಲ್ಲಿ ಒಂದು ಉಗ್ರವಾದ ‘most wanted’ ಮಂಗ ಕಳೆದೆರಡು ವಾರಗಳಲ್ಲಿ ಇಪ್ಪತ್ತು ಮಂದಿಯನ್ನು ಗಾಯಗೊಳಿಸಿ ಇಡೀ ಊರಲ್ಲೇ ಹೆದರಿಕೆಯ ವಾತಾವರಣ ಸೃಷ್ಟಿಸಿ, ಯಾರಿಗೂ ಸಿಗಬೀಳದೇ ಪೊಲೀಸರನ್ನು ಸತತ ಅಲೆದಾಡಿಸಿ, ಕೊನೆಗೂ ಸೆರೆಯಾಗಿದೆ. ಈ ಕೋತಿಯ ತಲೆಗೆ ರೂ 21,000 ಬಹುಮಾನದ ಘೋಷಣೆಯಾಗಿತ್ತು ಎಂದರೆ ನಂಬುತ್ತೀರಾ?

ಇದನ್ನೂ ಓದಿ : Viral: ಎಐ ಕೃಪಾ ಕಟಾಕ್ಷ; ಹೃದಯ, ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳ ಪತ್ತೆಗೆ ಕಣ್ಣಿನ ಪರೀಕ್ಷೆ ಸಾಕು

ಕೋತಿಯಿಂದ ದಾಳಿಗೊಳಗಾದ ಇಪ್ಪತ್ತು ಸಂತ್ರಸ್ತರಲ್ಲಿ ಎಂಟು ಜನ ಮಕ್ಕಳೂ ಇದ್ದಾರೆ. ಅದು ಮನೆ ಮಾಳಿಗೆ ಅಥವಾ ಕಿಟಕಿಗಳ ಕಟ್ಟೆಯ ಮೇಲೆ ಕಾದು ಕುಳಿತು ಅಮಾಯಕರ ಮೇಲೆ ಒಮ್ಮೆಲೇ ಜಿಗಿಯುತ್ತಿತ್ತು. ಬಹುತೇಕರಿಗೆ ಹಲವು ಕಡೆ ಗಾಯಗಳಾಗಿ ಹೊಲಿಗೆ ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ವಯೋವೃದ್ಧನೊಬ್ಬನ ಮೇಲೆರಗಿ ನೆಲಕ್ಕುರುಳಿಸಿ ತೊಡೆಗೆ ಆಳವಾದ ಗಾಯ ಮಾಡಿದ ದೃಶ್ಯ ಹತ್ತಿರದ CCTV ಕ್ಯಾಮರಾದಲ್ಲಿ ಸೆರೆಯಾಗಿದ್ದನ್ನು ಅಧಿಕಾರಿಗಳು ನೋಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: 6ಮಿಲಿಯನ್​ ಮಂದಿ ಕಣ್ಣಿಗೆ ಬಿದ್ದ ಈ ಬೆಣಚುಬೆಕ್ಕು; ಜಸ್ಟಿನ್​ ಬತ್ತಳಿಕೆಯಲ್ಲಿ ಗಾಂಧೀಜಿ, ರಮಣ ಮಹರ್ಷಿ ಇನ್ನೂ ಯಾರೆಲ್ಲ?

“ನಗರಸಭೆಯ ಬಳಿ ಈ ದುರುಳ ಕೋತಿಯನ್ನು ಹಿಡಿಯುವ ಸಾಧನ ಸಲಕರಣೆಗಳಿರಲಿಲ್ಲ. ಹೀಗಾಗಿ ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರ ಸಹಾಯದಿಂದ ಒಂದು ರಕ್ಷಣಾ ದಳವನ್ನು ಕಟ್ಟಿದೆವು. ನಗರಸಭೆ ಮತ್ತು ಸ್ಥಳೀಯರು ಕೈಜೋಡಿಸಿದರೂ ಅದನ್ನು ಹಿಡಿಯಲು ನಾಲ್ಕು ಗಂಟೆಗಳ ವೇಳೆ ಬೇಕಾಯಿತು” ಎಂದು ನಗರಸಭೆಯ ಅಧ್ಯಕ್ಷರು ತಿಳಿಸಿದ್ದಾರೆ.

ಇದನ್ನೂ ಓದಿ : Viral Video: ಕ್ಯಾಚ್​ ಕ್ಯಾಚ್​; ನಿರಾಶ್ರಿತ ಮಕ್ಕಳೊಂದಿಗೆ ಚೆಂಡಾಟವಾಡಿದ ಸಾಕುನಾಯಿ

ಕೊಳ್ಳೆ ಹೊಡೆಯುತ್ತಾ ಅಲೆಯುವ ರೌಡಿಗಳನ್ನೋ ದರೋಡೆಕೋರರನ್ನೋ ಹಿಡಿಯಲು ಹೇಗೆ ಪೊಲೀಸ್ ಇಲಾಖೆ ತನ್ನೆಲ್ಲ ಸಾಮರ್ಥ್ಯ ಬಳಸಿಕೊಳ್ಳುತ್ತದೋ ಅದೇ ರೀತಿ ಈ ಮಂಗನನ್ನು ಹಿಡಿಯಲು ಹಲವು ಕಡೆಗಳಿಂದ ವಿಶೇಷ ತಂಡಗಳು ಬಂದಿಳಿದಿವೆ. ಅಂತೂ ಉಜ್ಜಯಿನಿಯ ಪೊಲೀಸ್ ಪಡೆ ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ನಾಲ್ಕು ಗಂಟೆಗಳ ಎಡೆಬಿಡದ ಪ್ರಯತ್ನದ ನಂತರ ಈ ಕ್ರೂರ ಕೋತಿಯನ್ನು ಹಿಡಿಯಲಾಗಿದೆ.

ಪ್ರಾಣಿ ಸಂರಕ್ಷಣಾ ತಂಡಕ್ಕೆ ರೂ. 21,000 ಬಹುಮಾನ ದೊರಕಿದೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:22 pm, Fri, 23 June 23