Viral: ಬಾಹ್ಯಾಕಾಶದಲ್ಲಿ ಫ್ರೆಂಚ್​ ಫ್ರೈಸ್​ ತಯಾರಿಸಿದ ವಿಜ್ಞಾನಿಗಳು, ನೆಟ್ಟಿಗರ ಅಚ್ಚರಿ

French Fries : ಗುರುತ್ವಾಕರ್ಷಣೆ ಇಲ್ಲದೆ ಈ ಪ್ರಯೋಗ ಸಾಧ್ಯವಾಗದು ಎಂದುಕೊಂಡಿದ್ದರು ವಿಜ್ಞಾನಿಗಳು. ಆದರೆ ಅವರಿಗೆ ಅಚ್ಚರಿಯ ಫಲಿತಾಂಶ ದೊರಕಿದೆ. ವಿಜ್ಞಾನಿಗಳು ಫ್ರೆಂಚ್​ ಫ್ರೈಸ್​ ಅನ್ನು ಹೇಗೆ ಮಾಡಿದರು ಎಂದು ಈ ವಿಡಿಯೋದಲ್ಲಿ ನೋಡಿ.

Viral: ಬಾಹ್ಯಾಕಾಶದಲ್ಲಿ ಫ್ರೆಂಚ್​ ಫ್ರೈಸ್​ ತಯಾರಿಸಿದ ವಿಜ್ಞಾನಿಗಳು, ನೆಟ್ಟಿಗರ ಅಚ್ಚರಿ
ಬಾಹ್ಯಾಕಾಶದಲ್ಲಿ ತಯಾರಿಸಿದ ಫ್ರೆಂಚ್​ ಫ್ರೈಸ್​ನೊಂದಿಗೆ ವಿಜ್ಞಾನಿ
Follow us
ಶ್ರೀದೇವಿ ಕಳಸದ
|

Updated on:Jun 23, 2023 | 5:02 PM

Potato Chips : ಇತ್ತೀಚೆಗಷ್ಟೇ ಬಾಹ್ಯಾಕಾಶದಲ್ಲಿ ಸುಂದರವಾದ ಹೂವೊಂದು ಅರಳಿದ ಸುದ್ದಿಯನ್ನು ಓದಿದಿರಿ ಮತ್ತು ಮನಮೋಹಕವಾದ ಅದರ ಚಿತ್ರವನ್ನೂ ನೋಡಿದಿರಿ. ಇದೀಗ ವಿಜ್ಞಾನಿಗಳು International Space Station ನಲ್ಲಿ ಗುರುತ್ವಾಕರ್ಷಣೆ (Zero Gravity) ಇಲ್ಲದೇ ಆಲೂಗಡ್ಡೆ ಚಿಪ್ಸ್​ ಕರಿಯುವಲ್ಲಿ ಯಶ ಸಾಧಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಯುರೋಪಿಯನ್​ ಸ್ಪೇಸ್​ ಏಜೆನ್ಸಿಯು ಈ ವಿಡಿಯೋ ಬಿಡುಗಡೆ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ರೆಂಚ್​ ಫ್ರೈಸ್​​ (French Fries) ಅನ್ನು ತಯಾರಿಸಿದ್ದನ್ನು ಹಂತಹಂತವಾಗಿ ಈ ವಿಡಿಯೋದಲ್ಲಿ ತೋರಿಸಿ ವಿವರಿಸಲಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ESA – European Space Agency (@europeanspaceagency)

ಗಗನಯಾತ್ರಿಗಳು ಗಗನಯಾನದಲ್ಲಿದ್ದಾಗ ತಮಗೆಂದೇ ತಯಾರಿಸಿದ ವಿಶೇಷ ಫುಡ್​ ಪ್ಯಾಕ್​ ಮೇಲೆ ಅವಲಂಬಿತರಾಗಿರುತ್ತಾರೆ. ಆದರೂ ತಮಗೆ ಬೇಕಾದ ತಿಂಡಿತಿನಿಸುಗಳನ್ನು ಯಾಕೆ ಪ್ರಯತ್ನಿಸಬಾರದು ಎಂದೆನ್ನಿದೇ ಇರುತ್ತದೆಯೇ? ಇದೀಗ ವಿಜ್ಞಾನಿಗಳು ಒಂದು ಕೈ ನೋಡಿಯೇ ಬಿಡೋಣ ಎಂದು ಆಲೂಗಡ್ಡೆ ಚಿಪ್ಸ್​ ಮಾಡುವ ಪ್ರಯತ್ನಕ್ಕೆ ಬಿದ್ದಿದ್ದಾರೆ. ಗುರುತ್ವಾಕರ್ಷಣೆ ಇಲ್ಲದೆ ಚಿಪ್ಸ್​ ಅನ್ನು ಕರಿಯಲು ಸಾಧ್ಯವಿಲ್ಲ ಎಂದು ಅವರು ಮೊದಲಿಗೆ ಭಾವಿಸಿದ್ದರು. ಆದರೂ ಪ್ರಯೋಗದಲ್ಲಿ ತೊಡಗಿಕೊಂಡರು. ಅಂದಹಾಗೆ ಪ್ಯಾರಾಬೋಲಿಕ್​ ಫ್ಲೈಟ್​ನಲ್ಲಿ ಆಲೂಗಡ್ಡೆ ಚಿಪ್ಸ್ ತಯಾರಿಸಿದ್ಧಾರೆ.  ತಯಾರಿಸುವ ಹಂತಗಳನ್ನು ವಿಶೇಷ ಸಾಧನ ಬಳಸಿ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ : Viral: ಎಐ ಕೃಪಾ ಕಟಾಕ್ಷ; ಹೃದಯ, ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳ ಪತ್ತೆಗೆ ಕಣ್ಣಿನ ಪರೀಕ್ಷೆ ಸಾಕು

ಈ ವಿಡಿಯೋ ಅನ್ನು ಈತನಕ ಸುಮಾರು 37,000 ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ನನ್ನ ನೆಚ್ಚಿನ ಖಾದ್ಯವನ್ನು ನೀವು ಬಾಹ್ಯಾಕಾಶದಲ್ಲಿ ತಯಾರಿಸಿದ್ದೀರಿ ಅಭಿನಂದನೆ ಎಂದಿದ್ದಾರೆ ಅನೇಕರು. ಇಂಥವೆಲ್ಲ ಮಕ್ಕಳಾಟದಂತೆ ಗೋಚರಿಸುತ್ತವೆ, ಒಂದೊಂದು ಪ್ರಯೋಗವೂ ಯಶಸ್ವಿಯಾದಾಗ ಖುಷಿಯೂ ಆಗುತ್ತದೆ. ಈ ಸವಾಲನ್ನು ಯಶಸ್ವಿಗೊಳಿಸುತ್ತಿರುವ ವಿಜ್ಞಾನಿಗಳಿಗೆ ಧನ್ಯವಾದ ಎಂದಿದ್ದಾರೆ ಕೆಲವರು. ಗುರುತ್ವಾಕರ್ಷಣೆ ಇಲ್ಲದೆ ಇದ್ದಾಗ ಕಾಯ್ದ ಎಣ್ಣೆ ಹಾರಾಡಲು ಶುರು ಮಾಡಿದರೆ ಏನಾಗುತ್ತಿತ್ತು ಯೋಚಿಸಿ! ಸದ್ಯ ಹಾಗಾಗಿಲ್ಲವಲ್ಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: 6ಮಿಲಿಯನ್​ ಮಂದಿ ಕಣ್ಣಿಗೆ ಬಿದ್ದ ಈ ಬೆಣಚುಬೆಕ್ಕು; ಜಸ್ಟಿನ್​ ಬತ್ತಳಿಕೆಯಲ್ಲಿ ಗಾಂಧೀಜಿ, ರಮಣ ಮಹರ್ಷಿ ಇನ್ನೂ ಯಾರೆಲ್ಲ?

ನಾನಂತೂ ಕಾಸ್ಮಿಕ್​ ಚಿಪ್ಸ್​ ಬಿಝಿನೆಸ್​ ಮಾಡಿ ಮಿಲೇನಿಯರ್ ಆಗಲು ನಿರ್ಧರಿಸಿದ್ದೇನೆ, ನೀವು? ಅಂತೊಬ್ಬರು ಕೇಳಿದ್ಧಾರೆ. ಇದು ವಿಮಾನದೊಳಗೆ ನಡೆದ ಪ್ರಯೋಗ, ಬಾಹ್ಯಾಕಾಶದಲ್ಲಿ ಅಲ್ಲ ಎಂಬುದನ್ನು ಗಮನಿಸಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಮತ್ತಷ್ಟು ಇಂಥ ಕರಿದ ತಿಂಡಿಗಳನ್ನು ಬಾಹ್ಯಾಕಾಶ ವಿಜ್ಞಾನಿಗಳು ಪ್ರಯೋಗ ಮಾಡಲಿ, ಅವುಗಳನ್ನು ನೋಡಲು ನಾನಂತೂ ಕಾತುರಳಾಗಿದ್ದೇನೆ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:57 pm, Fri, 23 June 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್