Viral Video: ಸಂಗಾತಿಯ ಅಗಲಿಕೆಯ ದುಃಖದಿಂದ ಪ್ರಾಣ ಬಿಟ್ಟ ಪುಟ್ಟ ಹಕ್ಕಿ, ಪರಿಶುದ್ಧ ಪ್ರೀತಿಗೆ ಇದು ಸಾಕ್ಷಿ

ತನ್ನ ಸಂಗಾತಿಯ ಅಗಳಿಕೆಯ ದುಃಖವನ್ನು ಸಹಿಸಲಾರದೆ ಹಕ್ಕಿಯೊಂದು ಪ್ರಾಣ ಕಳೆದುಕೊಂಡಂತಹ ಹೃದಯವಿದ್ರಾವಕ ಘಟನೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ವಾರ್ಥ ತುಂಬಿದ ಈ ಜಗತ್ತಿನಲ್ಲಿ ಪರಿಶುದ್ಧ ಪ್ರೀತಿ ಎಂದರೆ ಏನು ಎಂಬುದನ್ನು ಈ ಹಕ್ಕಿಯನ್ನು ನೋಡಿ ಮನುಷ್ಯ ಕಲಿಯಬೇಕಾಗಿದೆ.

Viral Video: ಸಂಗಾತಿಯ ಅಗಲಿಕೆಯ ದುಃಖದಿಂದ ಪ್ರಾಣ ಬಿಟ್ಟ ಪುಟ್ಟ ಹಕ್ಕಿ, ಪರಿಶುದ್ಧ ಪ್ರೀತಿಗೆ ಇದು ಸಾಕ್ಷಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 24, 2023 | 10:22 AM

ಪ್ರೀತಿ ಮತ್ತು ಬಾಂಧವ್ಯ ಮನುಷ್ಯರ ನಡುವೆ ಮಾತ್ರವಲ್ಲದೆ ಪ್ರಾಣಿಗಳು ಮತ್ತು ಪಕ್ಷಿಗಳ ನಡುವೆಯೂ ಇದೆ. ಪ್ರೀತಿ ಕಾಳಜಿ ತೋರಿಸುವುದರರಲ್ಲಿ ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳು ಒಂದು ಕೈ ಮೇಲು ಅಂತಾನೇ ಹೇಳಬಹುದು. ಅವುಗಳು ತಮ್ಮ ಪ್ರೀತಿಯ ಸಂಗಾತಿಯನ್ನು ಬಿಟ್ಟು ಬದುಕಲಾರವು. ಅಷ್ಟು ನಿಸ್ವಾರ್ಥ ಮತ್ತು ಪರಿಶುದ್ಧ ಪ್ರೇಮ ಈ ಮೂಕ ಜೀವಿಗಳದ್ದು. ಇದೇ ರೀತಿ ಪ್ರೀತಿ ಮತ್ತು ಕಾಳಜಿಯ ನಿಜವಾದ ಅರ್ಥವನ್ನು ಮನುಷ್ಯರಿಗೆ ಕಲಿಸುವಂತಹ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೋಡಿ ಹಕ್ಕಿಯ ನಿಷ್ಕಲ್ಮಶ ಪ್ರೀತಿ ಎಂತಹ ಕಲ್ಲುಮನಸ್ಸನ್ನೂ ಕರಗಿಸುವಂತಿದೆ.

ಈ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಂಸ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರೀತಿ ಮತ್ತು ನಿಷ್ಠೆ. ನೀವು ಹೃದಯವನ್ನು ಹೊಂದಿದ್ದರೆ ಖಂಡಿತವಾಗಿಯೂ ಈ ದೃಶ್ಯ ನಿಮ್ಮ ಕಣ್ಣಂಚಲ್ಲಿ ನೀರು ತರಿಸುತ್ತದೆ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಪಕ್ಷಿಯೊಂದರ ಪರಿಶುದ್ಧ ಪ್ರೀತಿ ಮತ್ತು ನಿಷ್ಠೆಯನ್ನು ಕಣ್ತುಂಬಿಕೊಳ್ಳಬಹುದು.

ಗುಬ್ಬಿಯಂತಹ ಎರಡು ಪುಟ್ಟ ಪಕ್ಷಿಗಳಿರುತ್ತವೆ. ಅದರಲ್ಲಿ ಒಂದು ಹಕ್ಕಿ ಸತ್ತುಹೋಗಿರುತ್ತದೆ. ತೀರಿಕೊಂಡ ಸಂಗಾತಿಯ ಪಕ್ಕದಲ್ಲಿಯೇ ಕುಳಿತು ಇನ್ನೊಂದು ಹಕ್ಕಿ ಸಂಕಟಪಡುತ್ತಿರುತ್ತದೆ. ಯಾರೋ ಒಬ್ಬ ವ್ಯಕ್ತಿ ಬಂದು ಆ ಹಕ್ಕಿಯನ್ನು ಆಚೆ ಸರಿಸಲು ಪ್ರಯತ್ನಿಸುತ್ತಾರೆ. ಆ ಸಂದರ್ಭದಲ್ಲಿ ತನ್ನ ಸಂಗಾತಿಯಿಂದ ಬೇರ್ಪಡಲು ಬಯಸದ ಹಕ್ಕಿ ತನ್ನ ಸಂಗಾತಿಯ ಜೊತೆಯಾಗಿಯೇ ಇರುತ್ತದೆ. ಆದರೆ ಕೊನೆಯಲ್ಲಿ ಸಂಗಾತಿಯ ಅಗಲಿಕೆಯ ನೋವಿನಿಂದ ಆ ಇನ್ನೊಂದು ಹಕ್ಕಿಯೂ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ. ನಂತರ ಆ ಎರಡು ಹಕ್ಕಿಗಳನ್ನು ಜೊತೆಯಾಗಿ ಮಣ್ಣು ಮಾಡಲಾಗುವ ದೃಶ್ಯಾವಳಿಯನ್ನು ವೀಡಿಯೋದಲ್ಲಿ ಕಾಣಬಹುದು. ಇದು ಎಲ್ಲರ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು, ಸಾವಿನಲ್ಲೂ ಜೊತೆಯಾದ ಈ ಜೋಡಿ ಹಕ್ಕಿಯ ನಿಜವಾದ ಪ್ರೀತಿ ನಿಷ್ಠೆ.

ಇದನ್ನೂ ಓದಿ: Viral Video: ಈತನಿಂದ ಕಲಿಯಬೇಕು ಬದುಕಿನ ಪಾಠ, ಕಾಲಿಗೆ ಗಾಯವಾಗಿದ್ದರೂ ರಸ್ತೆ ಬದಿಯಲ್ಲಿ ಕೀಚೈನ್ ಮಾರಾಟ ಮಾಡಿದ ಪುಟ್ಟ ಬಾಲಕ

ಜೂನ್ 21ರಂದು ಹಂಚಿಕೊಳ್ಳಲಾದ ಈ ವೀಡಿಯೋ 79.2 ಸಾವಿರ ವೀಕ್ಷಣೆಗಳನ್ನು ಹಾಗೂ 1,436 ಲೈಕ್ಸ್​​ಗಳನ್ನು ಪಡೆದುಕೊಂಡಿದೆ. ಈ ವೀಡಿಯೊವನ್ನು ನೋಡಿ ಅನೇಕರು ಕಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರರು ಇದುವೇ ನಿಜವಾದ ಪ್ರೀತಿಯಲ್ಲವೇ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇನ್ನೊಂದು ಪಕ್ಷಿ ಜೀವಂತವಾಗಿತ್ತಲ್ಲ, ಅದು ಹೇಗೆ ಪ್ರಾಣ ಕಳೆದುಕೊಂಡದ್ದು ಪಕ್ಷಿಗಳು ಸಂಗಾತಿಯ ಅಗಲಿಕೆಯ ದುಃಖದಿಂದ ಸಾಯುತ್ತವೆಯೇ?’ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರೀತಿ ಮತ್ತು ಪರಿಶುದ್ಧತೆಯ ಹೃದಯವನ್ನು ಕಂಡುಕೊಳ್ಳುವುದೇ ಅಪರೂಪವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ