Viral Video: ಈತನಿಂದ ಕಲಿಯಬೇಕು ಬದುಕಿನ ಪಾಠ, ಕಾಲಿಗೆ ಗಾಯವಾಗಿದ್ದರೂ ರಸ್ತೆ ಬದಿಯಲ್ಲಿ ಕೀಚೈನ್ ಮಾರಾಟ ಮಾಡಿದ ಪುಟ್ಟ ಬಾಲಕ

ಕಾಲಿಗೆ ಗಾಯವಾಗಿದ್ದರೂ ಅದನ್ನು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ಪುಟ್ಟ ಬಾಲಕನೊಬ್ಬ ಟ್ರಾಫಿಕ್ ಸಿಗ್ನಲ್​​​ನ ಪಕ್ಕದಲ್ಲಿನ ಫುಟ್ಬಾತ್​​​ನಲ್ಲಿ ಕೀಚೈನ್​​​ಗಳನ್ನು ಮಾರಾಟ ಮಾಡುತ್ತಿರುವ ದೃಶ್ಯಾವಳಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವನಕಲಕುವ ದೃಶ್ಯ ಎಂತಹ ಕಲ್ಲು ಮನಸ್ಸನ್ನು ಕೂಡಾ ಕರಗಿಸುವಂತಿದೆ.

Viral Video: ಈತನಿಂದ ಕಲಿಯಬೇಕು ಬದುಕಿನ ಪಾಠ, ಕಾಲಿಗೆ ಗಾಯವಾಗಿದ್ದರೂ ರಸ್ತೆ ಬದಿಯಲ್ಲಿ ಕೀಚೈನ್ ಮಾರಾಟ ಮಾಡಿದ ಪುಟ್ಟ ಬಾಲಕ
ವೈರಲ್​​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 23, 2023 | 3:08 PM

ಕೆಲವೊಬ್ಬರಿಗೆ ಜವಾಬ್ದಾರಿ ಎನ್ನುವಂತಹದ್ದು, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಬೆನ್ನೇರಿಬಿಡುತ್ತದೆ. ಕುಟುಂಬವನ್ನು ಸಾಕುವ ಸಲುವಾಗಿ ಆ ಪುಟ್ಟ ಜೀವಗಳು ಶಿಕ್ಷಣ ಮತ್ತು ತಮ್ಮ ಭವಿಷ್ಯದ ಕನಸನ್ನು ಮೂಟೆಕಟ್ಟಿ ಬದಿಗಿಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕುಟುಂಬವನ್ನು ಸಾಕುವ ಸಲುವಾಗಿ ಶಿಕ್ಷಣದಿಂದ ವಂಚಿತರಾಗಿ ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಅದೆಷ್ಟೋ ಮಕ್ಕಳು ಇಂದಿಗೂ ಇದ್ದಾರೆ. ಇಂತಹದ್ದೇ ಒಂದು ಮನಕಲಕುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತನ್ನ ಜೀವನೋಪಾಯಕ್ಕಾಗಿ ಕಾಲಿಗೆ ಗಾಯವಾಗಿದ್ದರೂ, ಅದನ್ನು ಲೆಕ್ಕಿಸದೆ ಫುಟ್ಬಾತ್​​ನಲ್ಲಿ ಪುಟ್ಟ ಬಾಲಕನೊಬ್ಬ ಕೀಚೈನ್​​​ಗಳನ್ನು ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ಪುಟ್ಟ ಬಾಲಕನ ಈ ಪರಿಸ್ಥಿತಿಯನ್ನು ಕಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ಆತನಿಗೆ ಸಹಾಯಾಸ್ತವನ್ನು ನೀಡಲು ಮುಂದಾಗಿದ್ದಾರೆ.

ಈ ಘಟನೆ ಗುಜರಾತ್​​​ನಲ್ಲಿ ನಡೆದಿದ್ದು, ಸಾಕ್ಷಿ ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾಲಕನೊಬ್ಬ ಫುಟ್ಬಾತ್ ಮೇಲೆ ಕುಳಿತು ಅವನು ಆ ದಿನದಲ್ಲಿ ಮಾರಬೇಕಿದ್ದ ಕೀಚೈನ್​​​ಗಳನ್ನು ಜೋಡಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

ಪುಟ್ಟ ಹುಡುಗ ಫುಟ್ಬಾತ್ ಮೇಲೆ ಕುಳಿತು ಕೀಚೈನ್​​​ಗಳನ್ನು ಜೋಡಿಸುತ್ತಿರುವುದನ್ನು ಟ್ರಾಫಿಕ್ ಸಿಗ್ನಲ್​​​ನಲ್ಲಿ ನಿಂತಿದ್ದ ವಾಹನ ಸವಾರರೊಬ್ಬರು ಗಮನಿಸಿದ್ದರೆ, ತಕ್ಷಣ ಅವರು ವೀಡಿಯೋ ರೆಕಾರ್ಡ್ ಮಾಡುತ್ತಾರೆ. ನಂತರ ಅವರ ಬಳಿಗೆ ಆ ಪುಟ್ಟ ಬಾಲಕ ಬಂದು ಕೀಚೈನ್ ತೆಗೆದುಕೊಳ್ಳುವಂತೆ ಕೇಳಿಕೊಳ್ಳುವುದನ್ನು ವೀಡಿಯೋ ದೃಶ್ಯಾವಳಿಯಲ್ಲಿ ಕಾಣಬಹುದು. ಅಲ್ಲದೆ ಬಾಲಕನ ಬಲಗಾಲು ಗಾಯಗೊಂಡಿರುವುದನ್ನು ಕೂಡಾ ಕಾಣಬಹುದು. ಗಾಯಗೊಂಡ ಕಾಲಿಗೆ ಯಾವುದೇ ಹಾನಿಯಾಗಬಾರದೆಂದು ಅದನ್ನು ಬಟ್ಟೆಯಿಂದ ಕಟ್ಟಿ ಅದರ ಮೇಲೆ ಪ್ಲಾಸಿಕ್ ಚೀಲವನ್ನು ಸುತ್ತುಲಾಗಿತ್ತು. ಈ ಜವಬ್ದಾರಿಯೆಂಬ ಹೊರೆಯಿಂದ ನೋವಿನ ನಡುವಲ್ಲೂ ಬಾಲಕ ಕೀಚೈನ್​​​ಗಳನ್ನು ಮಾರಾಟ ಮಾಡುತ್ತಾ, ಒಂದು ದಿನದ ಕೂಲಿಗಾಗಿ ಕಷ್ಟ ಪಡುತ್ತಿರುವ ಪರಿಸ್ಥಿತಿ ಎಂತಹ ಕಲ್ಲು ಮನಸ್ಸನ್ನು ಕೂಡಾ ಕರಗಿಸುವಂತಿದೆ.

ಇದನ್ನೂ ಓದಿ: Viral News: ಗಡ್ಡೆಯೆಂದು ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದ್ರೆ ಹೊಟ್ಟೆಯೊಳಗೆ ಅವಳಿ ಮೃತ ಭ್ರೂಣ ಪತ್ತೆ

ಈ ಹುಡುಗನಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಬೇಕು ಇಲ್ಲದಿದ್ದರೆ ಗಾಯವು ಗ್ಯಾಂಗ್ರೀನ್ ಗೆ ಕಾರಣವಾಗಬಹುದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಳಜಿ ತೋರಿದ್ದಾರೆ. ಅಲ್ಲದೆ ಹಲವರು ಈ ಹುಡುಗನ ಪರಿಸ್ಥಿತಿಯನ್ನು ಕಂಡು ಮರುಗಿ ಅವನಿಗೆ ಸಹಾಯಸ್ತವನ್ನು ನೀಡುವ ಸಲುವಾಗಿ ಆತನ ವಿಳಾಸವನ್ನು ಕೇಳಿದ್ದಾರೆ.

ಜೂನ್ 7ರಂದು ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ 7.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಲವರು ಈ ಹುಡುಗನ ಪರಿಸ್ಥಿತಿಯನ್ನು ಕಂಡು ಸಾಧ್ಯವಾದರೆ ದಯವಿಟ್ಟು ಆ ಹುಡುಗನ ವಿಳಾಸವನ್ನು ಹಂಚಿಕೊಳ್ಳಿ, ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ ಎಂದು ಕೇಳಿಕೊಂಡಿದ್ದಾರೆ. ಒಬ್ಬ ಬಳಕೆದಾರರು ‘ದೇವರು ಈ ಮಗುವಿಗೆ ಆತ ಬಯಸಿದ ಎಲ್ಲವನ್ನೂ ನೀಡಲಿ’ ಎಂದು ಆಶಿರ್ವದಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಜಗತ್ತನ್ನು ಎದುರಿಸುವುದು ತುಂಬಾ ಕಠಿಣವಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಈ ಮಗುವನ್ನು ನಾನು ದತ್ತು ತೆಗೆದುಕೊಳ್ಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ