Viral News: ಗಡ್ಡೆಯೆಂದು ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದ್ರೆ ಹೊಟ್ಟೆಯೊಳಗೆ ಅವಳಿ ಮೃತ ಭ್ರೂಣ ಪತ್ತೆ

ಹೊಟ್ಟೆ ಊದಿಗೊಂಡು ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾದಾಗ ಹೊಟ್ಟೆಯಲ್ಲಿ ಗಡ್ಡೆಯಿರಬಹುದು ಎಂದು ವೈದ್ಯರು ಆತನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುತ್ತಾರೆ. ಆದರೆ ಆ ವ್ಯಕ್ತಿಯ ಹೊಟ್ಟೆಯಲ್ಲಿ ಗಡ್ಡೆಯ ಬದಲಿಗೆ ಅವಳಿ ಮೃತ ಭ್ರೂಣಗಳಿದ್ದವು. ಈ ಘಟನೆ ವೈದ್ಯಕೀಯ ಲೋಕವನ್ನೇ ದಿಗ್ಬ್ರಾಂತಗೊಳಿಸಿದೆ.

Viral News: ಗಡ್ಡೆಯೆಂದು ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದ್ರೆ ಹೊಟ್ಟೆಯೊಳಗೆ ಅವಳಿ ಮೃತ ಭ್ರೂಣ ಪತ್ತೆ
ವೈರಲ್ ನ್ಯೂಸ್​​
Follow us
ಅಕ್ಷಯ್​ ಪಲ್ಲಮಜಲು​​
|

Updated on: Jun 22, 2023 | 6:31 PM

ವಿಶ್ವದಲ್ಲಿ ಹಲವಾರು ನಿಗೂಢ ಹಾಗೂ ಆಶ್ಚರ್ಯಕರ ವೈದ್ಯಕೀಯ ಸಂಬಂಧಿತ ಪ್ರಕರಣಗಳು ಬೆಳಕಿಗೆ ಬಂದಿವೆ. ವೈದ್ಯಕೀಯ ಲೋಕಕ್ಕೆ ಸವಾಲು ಹಾಕುವಂತಹ ಇಂತಹ ಪ್ರಕರಣಗಳ ಸುದ್ದಿಗಳು ಜನರನ್ನು ಬೆಚ್ಚಿ ಬೀಳಿಸುತ್ತವೆ. ಅಂತಹದ್ದೆ ಒಂದು ವೈದ್ಯಕೀಯ ಲೋಕಕ್ಕೆ ಸವಾಲೊಡ್ಡುವ ಪ್ರಕರಣವೊಂದು ಭಾರತದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರಬಹುದು ಎಂದು ವ್ಯಕ್ತಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ ಆತನ ಹೊಟ್ಟೆಯಲ್ಲಿ ಅವಳಿ ಭ್ರೂಣಗಳು ಪತ್ತೆಯಾಗಿದೆ.

ವರದಿಗಳ ಪ್ರಕಾರ ಈ ಘಟನೆಯು 1999ರಲ್ಲಿ ನಡೆದಿದ್ದು, ನಾಗ್ಪುರದ ಸಂಜು ಭಗತ್ ಎಂಬ ವ್ಯಕ್ತಿಯಲ್ಲಿ ಈ ಸಮಸ್ಯೆ ಕಂಡುಬಂದಿದೆ. ಸಂಜು ಭಗತ್ ಅವರು ಬಾಲ್ಯದಿಂದಲೇ ಉಬ್ಬಿದ ಹೊಟ್ಟೆಯ ಸಮಸ್ಯೆಯನ್ನು ಎದುರಿಸುತ್ತಿದ್ದು, ಇತರ ಮಕ್ಕಳಿಗಿಂದ ಹೆಚ್ಚಿನ ಉಬ್ಬಿದ ಹೊಟ್ಟೆಯನ್ನು ಹೊಂದಿದ್ದರು. ಆದರೆ ಇದರ ಬಗ್ಗೆ ಅವರು ಅಷ್ಟಾಗಿ ಗಮನವನ್ನು ಹರಿಸಲಿಲ್ಲ. ಆದರೆ ಈ ಹೊಟ್ಟೆ ಉಬ್ಬುವಿಕೆ ಕ್ರಮೇಣ ಹೆಚ್ಚಾದಾದ, ಕುಟುಂಬದ ಸದಸ್ಯರು ಇದರ ಬಗ್ಗೆ ಚಿಂತಿಸತೊಡಗಿದರು. ಸಂಜುವಿನ ಬೆಳೆಯುತ್ತಿರುವ ಹೊಟ್ಟೆಯನ್ನು ನೋಡಿದ ಜನ ಅವರನ್ನು ‘ಗರ್ಭಿಣಿ’ ಎಂದು ಚುಡಾಯಿಸುತ್ತಿದ್ದರು.

ಸಂಜು ಭಗತ್​​​ಗೆ 36 ವರ್ಷ ವಯಸ್ಸಾಗುವಾಗ ಅಂದರೆ ಸುಮಾರು 1999ರ ವೇಳೆಯಲ್ಲಿ ಒಂದು ದಿನ ಅವರಿಗೆ ಉಸಿರಾಟದ ಸಮಸ್ಯೆ ಮತ್ತು ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನೀಡಿದ ವೈದ್ಯರು ಆರಂಭದಲ್ಲಿ ಸಂಜು ಹೊಟ್ಟೆಯಲ್ಲಿ ದೊಡ್ಡ ಗಡ್ಡೆ ಇದೆಯೆಂದು ಭಾವಿಸಿದ್ದರು. ಗಡ್ಡೆಯನ್ನು ತೆಗೆಯುವ ಸಲುವಾಗಿ ಡಾ. ಅಜಯ್ ಮೆಹ್ತಾ ಮತ್ತು ಇನ್ನಿತರ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಹೊಟ್ಟೆಯನ್ನು ಸೀಳಿ ಗಡ್ಡೆಯನ್ನು ಹೊರ ತೆಗೆಯಬೇಕು ಎಂದುಕೊಂಡಿದ್ದ ವೈದ್ಯರಿಗೆ ಅಲ್ಲಿ ಶಾಕ್ ಕಾದಿತ್ತು. ಸಂಜು ಹೊಟ್ಟೆಯಲ್ಲಿ ಗೆಡ್ಡೆಯ ಬದಲಿಗೆ ಭ್ರೂಣದ ಅಂಗಾಗಳು ಪತ್ತೆಯಾದವು. ಹಾಗೂ ಹೊಟ್ಟೆಯೊಳಗೆ ಕೈಹಾಕಿದಾದ ಅನೇಕ ಮೂಳೆಗಳು, ಕೈ, ಕಾಲು, ಕೂದಲು ಕಂಡುಬಂದಿವೆ. ಮೂಲತಃ ಭ್ರೂಣಗಳ ಅಂಗಾಗಳು ಅವರ ಅವಳಿಯದ್ದಾಗಿದೆ. ಈ ಕಾರಣದಿಂದಾಗಿ ಅವರ ಹೊಟ್ಟೆಯ ಗಾತ್ರವು ಹೆಚ್ಚಾಗತೊಡಗಿದ್ದು. ಸದ್ಯ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರ ತಂಡ 36 ವರ್ಷಗಳ ಕಾಲ ಸಂಜು ಅವರ ಹೊಟ್ಟೆಯಲ್ಲಿದ್ದ ಮೃತ ಭ್ರೂಣಗಳನ್ನು ಹೊರತೆಗೆದಿದ್ದಾರೆ. ಹಾಗೂ ಸಂಜು ಆರೋಗ್ಯವಂತರಾಗಿ ಎಲ್ಲರಂತೆ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: Viral Post: ಅಂತರಾಷ್ಟ್ರೀಯ ಯೋಗದಿನದಂದು ಅಂತರಿಕ್ಷದಲ್ಲಿ ಯೋಗಾಭ್ಯಾಸ ಮಾಡಿದ ಗಗನಯಾತ್ರಿ

ವೈದ್ಯರು ಈ ಪ್ರಕರಣವನ್ನು ‘ವ್ಯಾನಿಶಿಂಗ್ ಟ್ವಿನ್ ಸಿಂಡ್ರೋಮ್’ ಎಂದು ಕರೆದಿದ್ದಾರೆ. ಅಂದರೆ ತಾಯಿಯ ಹೊಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳ ಬೆಳೆಯುತ್ತಿರುವಾಗ, ಕೆಲವು ಸಂದರ್ಭಗಳಲ್ಲಿ ಒಂದು ಭ್ರೂಣವು ಇನ್ನೊಂದು ಮಗುವಿನೊಳಗೆ ಬೆಳೆಯಲು ಪ್ರಾರಂಭಿಸುತ್ತದೆ. ಒಂದು ಭ್ರೂಣದ ಹೊಟ್ಟೆಯೊಳಗೆ ಬೆಳೆಯುತ್ತಿರುವ ಇನ್ನೊಂದು ಭ್ರೂಣ ವಾಸ್ತವವಾಗಿ ಅದರ ಅವಳಿಯಾಗಿರುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಇದು ಅತ್ಯಂತ ಅಪರೂಪದ ವೈದ್ಯಕೀಯ ಪರಿಸ್ಥಿತಿಯಾಗಿದ್ದು, ಇದು ಐದು ಲಕ್ಷ ಜನರಲ್ಲಿ ಒಬ್ಬರಲ್ಲಿ ಕಂಡುಬರುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ