AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಬಾಹ್ಯಾಕಾಶದಲ್ಲಿ ಹೂವೊಂದು ಅರಳಿದೆ; ನಾಸಾ ಬಿಡುಗಡೆ ಮಾಡಿದ ಚಿತ್ರವೀಗ ವೈರಲ್

ಬಾಹ್ಯಾಕಾಶದ ಸಂಶೋಧನೆಯಿಂದಾಗಿ ಆಗಾಗ ನಾವು ಅನೇಕ ಅಚ್ಚರಿಗಳನ್ನು ಎದುರುಗೊಳ್ಳುತ್ತಿರುತ್ತೇವೆ. ಈಗಾಗಲೇ ವಿಜ್ಞಾನಿಗಳು ಅಲ್ಲಿ ತರಕಾರಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೀಗ ಈ ಸುಂದರ ಹೂ!

Viral Post: ಬಾಹ್ಯಾಕಾಶದಲ್ಲಿ ಹೂವೊಂದು ಅರಳಿದೆ; ನಾಸಾ ಬಿಡುಗಡೆ ಮಾಡಿದ ಚಿತ್ರವೀಗ ವೈರಲ್
ವೈರಲ್​​ ಫೋಸ್ಟ್​​
ಶ್ರೀದೇವಿ ಕಳಸದ
| Edited By: |

Updated on: Jun 13, 2023 | 5:20 PM

Share

ಬಾಹ್ಯಾಕಾಶ ಮತ್ತು ಬ್ರಹ್ಮಾಂಡ ಅಚ್ಚರಿಗಳ ಸರಮಾಲೆ. ಸಂಶೋಧಕರು, ವಿಜ್ಞಾನಿಗಳು ಈ ವಿಷಯವಾಗಿ ಅದೆಷ್ಟು ಆಸ್ಥೆಯಿಂದ ತೊಡಗಿಕೊಂಡಿದ್ದಾರೆ ಎನ್ನುವುದಕ್ಕೆ ಆಗಾಗ‌‌‌ ನಾಸಾ ಬಿಡುಗಡೆ ಮಾಡುವ ಚಿತ್ರಗಳೇ‌ ಸಾಕ್ಷಿ. ಈ ಹೂವಿನ ಹೆಸರು ಜಿನ್ನಿಯಾ. ತರಕಾರಿಗಳನ್ನು ಬೆಳೆಯುವ ಜಾಗದಲ್ಲಿ ಇದು ಅರಳಿ ನಿಂತಿದ್ದು ಅಂತರ್ಜಾಲಿಗರ ಗಮನ ಸೆಳೆಯುತ್ತಿದೆ.

ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಯುವ ಕುರಿತು 1970ರಿಂದಲೂ ವಿಜ್ಞಾನಿಗಳು ಸಂಶೋಧನೆ ನಡೆಸುತ್ತ ಬಂದಿದ್ದಾರೆ. ಆದರೆ ಗಗನಯಾತ್ರಿ ಕೆಜೆಲ್ ಲಿಂಡ್ ಗ್ರೇನ್ 2015ರಲ್ಲಿ ನಿರ್ದಿಷ್ಟವಾದ ಪ್ರಯೋಗದಲ್ಲಿ ತೊಡಗಿಕೊಂಡರು. ಅಲ್ಲದೆ, ಈ ಪ್ರಯೋಗಗಳೆಲ್ಲ ಪ್ರದರ್ಶನಕ್ಕಲ್ಲ, ಬಾಹ್ಯಾಕಾಶದಲ್ಲಿ ಸಸ್ಯಗಳು ಹೇಗೆ ಅಭಿವೃದ್ಧಿಗೊಳ್ಳುತ್ತವೆ ಎನ್ನುವುದನ್ನು ಅಧ್ಯಯನ ಮಾಡುತ್ತಾ ಹೋದಂತೆ ಭೂಮಿಯ ಮೇಲೆ ಬೆಳೆಗಳನ್ನು ಹೇಗೆ ಬೆಳೆಯಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗಿದೆ‌ ಎನ್ನುತ್ತಾರೆ ವಿಜ್ಞಾನಿಗಳು.

ಈಗಾಗಲೇ ನಾಸಾ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಲೆಟ್ಯೂಸ್, ಟೊಮ್ಯಾಟೊ, ಮೆಣಸಿನಕಾಯಿಗಳನ್ನು ಬೆಳೆದಿದ್ದಾರೆ. ಇತರೇ ತರಕಾರಿಗಳೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಸಸ್ಯಗಳು ಫಲ ಕೊಡಲಿವೆ.

View this post on Instagram

A post shared by NASA (@nasa)

ಇದನ್ನೂ ಓದಿ. Viral Video: ನೀರು ಕುಡಿಸಿ ಒಂಟೆಯ ಜೀವ ಉಳಿಸಿದ ಚಾಲಕನ ವಿಡಿಯೋ ವೈರಲ್

ಈತನಕ ಈ ಪೋಸ್ಟ್ ಅನ್ನು ಐದು ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ. ಆಹಾ ಎಂಥ ಸೌಂದರ್ಯ! ಇದು ಬೆಳೆಯಲು ಎಷ್ಟು ಸಮಯ ತಗುಲಿತು? ಅನುಪಮ ಸೌಂದರ್ಯ. ಮತ್ತಷ್ಟು ಇಂಥ ಖುಷಿಗಾಗಿ ಕಾಯುತ್ತಿದ್ದೇವೆ… ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ.