Viral Video: ಆಸ್ಟ್ರೇಲಿಯಾದ ಮನೆಯೊಂದರಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆ

Australia : ಆಹಾ ಇದರ ಸೌಂದರ್ಯ ನೋಡಲು ಕಣ್ಣುಗಳೆರಡು ಸಾಲವು. ಪಾಪ, ವಾಸಕ್ಕೆ ಮನೆ ಹುಡುಕುತ್ತಿದೆ ಅಂತೆಲ್ಲ ಪ್ರತಿಕ್ರಿಯಿಸುವರೆದುರು ಇದು ಪ್ರತ್ಯಕ್ಷವಾಗಿದ್ದರೆ ಎತ್ತಿ ಮುದ್ದಾಡುತ್ತಿದ್ದರೆ, ತಮ್ಮ ಮನೆಯನ್ನು ಬಿಟ್ಟುಕೊಡುತ್ತಿದ್ದರೆ?

Viral Video: ಆಸ್ಟ್ರೇಲಿಯಾದ ಮನೆಯೊಂದರಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆ
ಆಸ್ಟ್ರೇಲಿಯಾದ ಮನೆಯೊಂದರಲ್ಲಿ ಪತ್ತೆಯಾದ 8 ಅಡಿ ಹೆಬ್ಭಾವು
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 14, 2023 | 10:27 AM

Python: ಹೇಳಿಕೇಳಿ ಹಾವು! ಕಣ್ಮುಂದೆ ಪ್ರತ್ಯಕ್ಷವಾದಾಗಲೇ ಅವುಗಳ ಇರುವಿಕೆ ಅರಿವಿಗೆ ಬರುವುದು. ಸಾಮಾನ್ಯರಿಗೆ ಮೊದಲು ಆಗುವುದೇ ಭಯ. ಇನ್ನು ಹಾವುಪ್ರಿಯರಿಗೆ ಅದರ ಸೌಂದರ್ಯ ಗಮನಿಸುವ ಸಂಭ್ರಮ. ಹಾವು ಹಿಡಿಯುವವರಿಗೆ ಸವಾಲು. ಇದೀಗ ಈ  ದೊಡ್ಡ ಗಾತ್ರದ, ಆಕರ್ಷಕ ವಿನ್ಯಾಸದ ಮತ್ತು ಶಕ್ತಿಶಾಲಿಯಾದ ಹೆಬ್ಬಾವಿನ ಛಾಯಾಚಿತ್ರವೊಂದು ವೈರಲ್ ಆಗುತ್ತಿದೆ. ಕಾಡು ಬಿಟ್ಟು ಆಸ್ಟ್ರೇಲಿಯಾದ ಮನೆಯೊಂದರ ಒಳಹೊಕ್ಕು, ತನ್ನ ಅಸ್ತಿತ್ವವನ್ನು ನೆನಪಿಸಲು ಇದು ಬಂದಂತಿದೆ. ಆ ಮನೆಯವರು ತಕ್ಷಣವೇ ಹಾವುಹಿಡಿಯುವವರನ್ನು ಸಂಪರ್ಕಿಸಿ ಇದನ್ನು ರಕ್ಷಿಸಿದ್ದಾರೆ.

Jeremy’s Reptile Relocations Townsville ಇದನ್ನು ಪೋಸ್ಟ್ ಮಾಡಿದ್ದು 1,500ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸುಮಾರು 300 ಜನರು ಈ ಪೋಸ್ಟ್​ ಮರುಹಂಚಿಕೆ ಮಾಡಿಕೊಂಡಿದ್ದಾರೆ. ಅನೇಕರು ಭಯ ಮತ್ತು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ಧಾರೆ. ನಮ್ಮ ಮನೆಗೇನಾದರೂ ಇದು ಬಂದಿದ್ದರೆ ನಾನೇ ಮನೆಯಿಂದ ಹೊರಗೋಡುತ್ತಿದ್ದೆ  ಅಂಥ ಭಯಾನಕವಾಗಿದೆ ಎಂದು ಒಬ್ಬರು. ಆಹಾ ಇದರ ಸೌಂದರ್ಯ ವರ್ಣನಾತೀತ ಎಂದು ಮತ್ತೊಬ್ಬರು.  ಈ ಫೋಟೋ ನೋಡಿದರೆ ಇದು 4 ಮೀಟರ್​ ಉದ್ದವಿರಬಹುದು ಎನ್ನಿಸುತ್ತಿದೆ ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Post: ಬಾಹ್ಯಾಕಾಶದಲ್ಲಿ ಹೂವೊಂದು ಅರಳಿದೆ; ನಾಸಾ ಬಿಡುಗಡೆ ಮಾಡಿದ ಚಿತ್ರವೀಗ ವೈರಲ್

ಈತನಕ ಸುಮಾರು 500 ಜನರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ- ಅದ್ಭುತವಾದ ಪ್ರಾಣಿ, ನಾನಿದನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಈ ಹೆಬ್ಬಾವು ಅತ್ಯಂತ ಸುಂದರವಾಗಿದೆ. ಆಹಾ ಇದರ ಸೌಂದರ್ಯ ನೋಡಲು ಎರಡು ಕಣ್ಣುಗಳು ಸಾಲವು ಅಂತೆಲ್ಲ. ಹೆಬ್ಬಾವು ಎದುರಿಗೆ ಇದ್ದರೆ ಹೀಗೆ ಹೇಳುತ್ತ ಕುಳಿತುಕೊಳ್ಳುತ್ತಿದ್ದರೆ? ಇದು ತನಗಾಗಿ ಮನೆಯೊಂದನ್ನು ಹುಡುಕುತ್ತಿದೆ. ಪಾಪ ಇದಕ್ಕೂ ನಮ್ಮಂತೆ ವಾಸಿಸಲು ಮನೆಯೊಂದು ಬೇಕಿದೆ ಎಂದು ಮತ್ತಷ್ಟು ಜನ ಹೇಳಿದ್ದಾರೆ. ಅವರುಗಳ ಮನೆಗೆ ಬಂದಿದ್ದರೆ ಮನೆಯನ್ನೇ ಇದಕ್ಕೆ ಬಿಟ್ಟುಕೊಡುತ್ತಿದ್ದರೆ?

ಏನಂತೀರಿ ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ