Viral Video : 35 ಕೆ.ಜಿ ಹೆಬ್ಬಾವಿನ ಈ ಖಾದ್ಯ ತಯಾರಿಸಿದ್ದು ಇಂಡೋನೇಷಿಯಾದಲ್ಲಿ

Python Cooking : ಈ ವಿಡಿಯೋ 2 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಗೊಳಪಟ್ಟಿದೆ. 1,67,000 ಲೈಕ್​ ಮತ್ತು 7,000 ಹಂಚಿಕೆಯಾಗಿದೆ. ಇದನ್ನು ನೋಡಿ ನೀವೇನಾದರೂ ಇಂಥ ಖಾದ್ಯ ತಯಾರಿಸಲು ಹೊರಟರೆ ಜೈಲು ಗ್ಯಾರಂಟಿ!

Viral Video : 35 ಕೆ.ಜಿ ಹೆಬ್ಬಾವಿನ ಈ ಖಾದ್ಯ ತಯಾರಿಸಿದ್ದು ಇಂಡೋನೇಷಿಯಾದಲ್ಲಿ
ಹೆಬ್ಬಾವಿನ ಖಾದ್ಯ ತಯಾರಿಕೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 02, 2022 | 2:54 PM

Viral Video : ಇಂಡೋನೇಷಿಯಾದಲ್ಲಿ 35 ಕೆ.ಜಿ. ಹೆಬ್ಬಾವನ್ನು ಬೇಯಿಸಿ ಖಾದ್ಯ ತಯಾರಿಸುತ್ತಿದ್ದ ವಿಡಿಯೋವನ್ನು ಕೇರಳದ ಯೂಟ್ಯೂಬರ್ ಫಿರೋಝ್ ಚುಟ್ಟಿಪ್ಪಾರ್ (Firoze Chuttipara) ಯೂಟ್ಯೂಬ್​ನಲ್ಲಿ ಅಪ್​​ಲೋಡ್ ಮಾಡಿದ್ಧಾರೆ. ಇದು ನೋಡುಗರನ್ನು ತೀವ್ರ ಅಸಮಾಧಾನಕ್ಕೆ ಗುರಿಮಾಡಿದೆ. ಇದೇನಾದರೂ ಭಾರತದಲ್ಲಿ ನಡೆದಿದ್ದರೆ ಇದರಲ್ಲಿ ಭಾಗಿಯಾದವರು ಜೈಲಿನಲ್ಲಿರಬೇಕಾಗುತ್ತಿತ್ತು. ಏಕೆಂದರೆ ಭಾರತದಲ್ಲಿ ಕಾಡುಪ್ರಾಣಿಗಳನ್ನು ಕೊಲ್ಲುವುದು ಅಪರಾಧ. ರಾಜಕೀಯ ಮತ್ತು ಸಿನೆಮಾಕ್ಕೆ ಸಂಬಂಧಿಸಿದ ವಿಡಿಯೋಗಳಿಗಿಂತ ಖಾದ್ಯ ತಯಾರಿಕೆ ವಿಡಿಯೋಗಳು ಹೆಚ್ಚು ಜನಪ್ರಿಯಗೊಳ್ಳುತ್ತವೆಯಾದ್ದರಿಂದ ಹೆಚ್ಚು ವೀಕ್ಷಣೆ ಗಳಿಸಲೆಂದೇ ಯೂಟ್ಯೂಬರ್​ಗಳು ಖಾದ್ಯ ತಯಾರಿಕೆ ವಿಡಿಯೋಗಳನ್ನು ಅಪ್​ಲೋಡ್ ಮಾಡಿ ಗಮನ ಸೆಳೆಯುತ್ತಿರುತ್ತಾರೆ. ಈ ಪೈಕಿ ಪ್ರಸ್ತುತ ವಿಡಿಯೋ ನೆಟ್ಟಿಗರನ್ನು ಬಹುವಾಗಿ ಸೆಳೆದಿದ್ದಲ್ಲದೇ ಟೀಕೆಗೂ ಒಳಪಟ್ಟಿದೆ.

ಕುಕ್ಕಿಂಗ್ ವ್ಲಾಗರ್ ಫಿರೋಝ್ ಈಗಾಗಲೇ ಯೂಟ್ಯೂಬ್​ನಲ್ಲಿ ಜನಪ್ರಿಯತೆ ಗಳಿಸಿದವರು. ಇಂಡೋನೇಷಿಯಾಗೆ ಹೋದಾಗ 35 ಕೇಜಿ ಹೆಬ್ಬಾವನ್ನು ಕತ್ತರಿಸಿ ಭಾರತೀಯ ಮಸಾಲೆ ಪದಾರ್ಥಗಳೊಂದಿಗೆ ಗ್ರಿಲ್ ಮಾಡುವ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ಖಾದ್ಯ ತಯಾರಿಕೆಯ ವಿಡಿಯೋ ಪ್ರಸಾರ ಮಾಡುವ ಮೊದಲು ಫಿರೋಝ್, ‘ಈ ವಿಡಿಯೋ ಇಂಡೋನೇಷಿಯಾದಲ್ಲಿ ಚಿತ್ರೀಕರಿಸಿದ್ದು. ನಿಮ್ಮ ಮನೆಗಳಲ್ಲಿ ಇದನ್ನು ಪ್ರಯೋಗಿಸಬೇಡಿ. ಭಾರದಲ್ಲಿ ವನ್ಯಪ್ರಾಣಿಗಳಿಂದ ಖಾದ್ಯ ತಯಾರಿಸುವುದು ಅಪರಾಧ’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Image
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ವಿಡಿಯೋದಲ್ಲಿ ಪ್ಲಾಸ್ಟಿಕ್ ಬಾಸ್ಕೆಟ್​ನಲ್ಲಿ ದೊಡ್ಡ ಹೆಬ್ಬಾವನ್ನು ಹಿಡಿದು ತರಲಾಗುತ್ತದೆ. ನಂತರ ಈ ಹೆಬ್ಬಾವನ್ನು ಕತ್ತರಿಸಲಾಗುತ್ತದೆ. ಆಮೇಲೆ ಅದರ ಚರ್ಮವನ್ನು ಸುಲಿದು ಭಾರತೀಯ ಮಸಾಲೆಗಳಿಂದ ಆ ತುಂಡುಗಳಿಗೆ ಉಜ್ಜಿ ಲೇಪಿಸಿ ಕೊನೆಯಲ್ಲಿ ಬೆಂಕಿಯಲ್ಲಿ ಆ ತುಂಡುಗಳನ್ನು ಗ್ರಿಲ್ ಮಾಡಲಾಗುತ್ತದೆ. ನಂತರ ದೊಡ್ಡ ಬಾಳೆ ಎಲೆಮೇಲೆ ಬೇಯಿಸಿದ ಖಾದ್ಯವನ್ನು ಹರವುತ್ತಾರೆ. ಇದನ್ನು ತಿಂದ ಇಂಡೋನೇಷಿಯನ್ನರು ಮತ್ತು ಕೆಲ ಭಾರತೀಯರು ಬಹಳ ರುಚಿಕಟ್ಟಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ವಿಡಿಯೋ 2 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಗೊಳಪಟ್ಟಿದೆ. 1,67,000 ಲೈಕ್​ ಮತ್ತು 7,000 ಹಂಚಿಕೆಯಾಗಿದೆ.

ಈ ವಿಡಿಯೋ ಖಾದ್ಯತಯಾರಿಕೆಯಲ್ಲಿ ಆಸಕ್ತಿ ಇರುವವರನ್ನು ಬಹುವಾಗಿ ಸೆಳೆದಿದೆ. ನಾನಾರೀತಿಯ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಆದರೆ, ಭಾರತದಲ್ಲಿ ಈ ದುಃಸ್ಸಾಹಸ ಮಾಡಿದರೆ ಪರಿಣಾಮ ಗೊತ್ತಲ್ಲವೆ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್