Viral Video : ‘ಅವನು ಹತ್ತು ಅಡಿ ಎತ್ತರದ ಅದೃಶ್ಯ ಪ್ರೇತ’

TV9 Digital Desk

| Edited By: ಶ್ರೀದೇವಿ ಕಳಸದ

Updated on:Aug 02, 2022 | 4:30 PM

Canada News : ಡೈಲಿ ಸ್ಟಾರ್ ಪ್ರಕಾರ, ಆಸ್ತಿಯ ಮಾಲಿಕ ಜಿಯೋರ್ಡಿ, ನ್ಯೂಲ್ಯಾಂಡ್ಸ್ ಕಟ್ಟಡಕ್ಕೆ ಹಾನಿಯಾದ ಬಗ್ಗೆ ದೃಢಪಡಿಸಿದ್ದಾರೆ. ಇದಕ್ಕೆ ಕಾರಣನಾದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

Viral Video : ‘ಅವನು ಹತ್ತು ಅಡಿ ಎತ್ತರದ ಅದೃಶ್ಯ ಪ್ರೇತ’
ಕಟ್ಟದ ಧ್ವಂಸಗೊಳಿಸುತ್ತಿರುವ ದೃಶ್ಯ

ಕೋಪಗೊಂಡ ವ್ಯಕ್ತಿಯೊಬ್ಬ ಇತ್ತೀಚೆಗೆ ಅಗೆಯುವ ಯಂತ್ರದಿಂದ ಸರೋವರದ ಬದಿಯಲ್ಲಿರುವ ಕಟ್ಟಡವನ್ನು ನಾಶಪಡಿಸುವ ವಿಡಿಯೋ ವೈರಲ್ ಆಗಿದೆ. ಕೆನಡಾದ ಕ್ಯಾಲ್ಗರಿಯೊಲ್ಲಿ ನಡೆದ ಈ ಘಟನೆಗೆ ಕಾರಣ ಅತೃಪ್ತ ಮಾಜಿ ಉದ್ಯೋಗಿ. ಆ ವ್ಯಕ್ತಿಯನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತಲುಪುವ ಮುನ್ನವೇ ಬೆಚ್ಚಿಬಿದ್ದ ನೆರೆಹೊರೆಯವರು ಕ್ಯಾಮರಾದಲ್ಲಿ ಈ ದೃಶ್ಯಾವಳಿಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಒಂದು ಪೋಸ್ಟ್‌ನ ಶೀರ್ಷಿಕೆಯು, ‘ಇದನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಸರೋವರದ ಬಳಿ ಇರುವ ಈ ಕಟ್ಟಡವನ್ನು ಕೆಲಸದಿಂದ ವಜಾಗೊಂಡ ಅತೃಪ್ತ ಉದ್ಯೋಗಿಯೊಬ್ಬರು ನಾಶಪಡಿಸಿದ್ದಾರೆ’ ಎಂದಿದೆ. ಈ ವಿಡಿಯೋ ಈತನಕ ಸುಮಾರು 27,20,00 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. 5,000ಕ್ಕೂ ಹೆಚ್ಚು ಲೈಕ್​ ಹೊಂದಿದ್ದು, ಸಾವಿರಾರು ಜನರು ಈ ವಿಡಿಯೋ ನೋಡಿ ತಮ್ಮ ಅನಿಸಿಕೆ, ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಒಂದು ಪೋಸ್ಟ್​ನಲ್ಲಿ, ‘ಅಂತಿಮವಾಗಿ ಕಾರ್ಮಿಕ ವರ್ಗವು ಬಲಗೊಳ್ಳಲು ಪ್ರಾರಂಭಿಸಿದೆ’ ಎಂದು ತಮಾಷೆ ಮಾಡಲಾಗಿದೆ. ‘ನೀವು ಈ ವ್ಯಕ್ತಿಯ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿಯನ್ನು ಹೊಂದಿದ್ದರೆ ನೀಡಬೇಡಿ’ ಎಂದು ಇನ್ನೊಂದು ಪೋಸ್ಟ್​ನಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದು ಪೋಸ್ಟ್​ನಲ್ಲಿ ‘ಅವನು ಹತ್ತು ಅಡಿ ಎತ್ತರದ ಅದೃಶ್ಯ ಪ್ರೇತ ಮತ್ತು ಟ್ರೆಂಚ್ ಕೋಟ್‌ನಲ್ಲಿರುವ ನಲವತ್ತು ಪಕ್ಷಿಗಳು ಎಂದು ನಾನು ಕೇಳಲ್ಪಟ್ಟಿದ್ದೇನೆ. ಮಾಹಿತಿಯೊಂದಿಗೆ ಟಿಪ್​ ಲೈನ್​ಗೆ ಕರೆ ಮಾಡುವುದು ಉತ್ತಮ’ ಎಂದಿದೆ.

ಇದನ್ನೂ ಓದಿ

ಈ ಮಧ್ಯೆ ಡೈಲಿ ಸ್ಟಾರ್ ಪ್ರಕಾರ, ಆಸ್ತಿಯ ಮಾಲಿಕ ಜಿಯೋರ್ಡಿ ನ್ಯೂಲ್ಯಾಂಡ್ಸ್, ತಮ್ಮ ಕಟ್ಟಡಕ್ಕೆ ಹಾನಿಯಾದ ಬಗ್ಗೆ ದೃಢಪಡಿಸಿದ್ದಾರೆ. ಇದಕ್ಕೆ ಕಾರಣನಾದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಜಿಯೋರ್ಡಿಯ ಒಡೆತನದಲ್ಲಿರುವ ಈ ಕಟ್ಟಡದಲ್ಲಿ ಮಾಜಿ ಉದ್ಯೋಗಿಯಾಗಿದ್ದ. ಈತನ ಹೆಸರಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಅದೃಷ್ಟವಶಾತ್ ಯಾರಿಗೂ ನೋವು ಹಾನಿ ಸಂಭವಿಸಿಲ್ಲ

ಆಘಾತಕಾರಿ ಘಟನೆಯಿಂದ ಜನರು ಕಂಗಾಲಾಗಿದ್ದಾರೆ. ದುರಸ್ತಿಗೆ ಲಕ್ಷಾಂತರ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಆರೋಪಿಯು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada