Viral Video : ‘ಯಾಕೆ ಗೊತ್ತಾ ನಾನು ಅಡುಗೆಮನೆ ಬಳಿ ಬಂದು ಕುಳಿತುಕೊಳ್ಳೋದು?’
Dog Love : 'ನಮ್ಮಮ್ಮ ನನಗೆಂದೇ ಇನ್ಸ್ಟಾಗ್ರಾಮ್ ಪೇಜ್ ಓಪನ್ ಮಾಡಿದ್ದಾರೆ. ಎಷ್ಟೋಂದ್ ಜನ ಫಾಲೋವರ್ಸ್ ಇದಾರೆ. ಈಗ ಯಾವ ವಿಡಿಯೋ ಅಪ್ಲೋಡ್ ಮಾಡಿದಾರೆ ನೋಡಿ...’
Viral Video : ಸಾಕುಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಬಾಂಧವ್ಯದ ಮಧ್ಯೆ ಮಾತುಗಳೇ ಬೇಕಿಲ್ಲ. ಮಾತನಾಡದೆಯೇ ಅರ್ಥವಾಗುವಂಥ ಸಂಬಂಧ ಅದು. ಇಲ್ಲಿರುವ ವಿಡಿಯೋದಲ್ಲಿ ಗೋಲ್ಡನ್ ರಿಟ್ರೈವರ್ ನಾಯಿಯು ಅಡುಗೆಮನೆಯ ಬಳಿ ಕುಳಿತು ತನ್ನ ತಾಯಿಗಾಗಿ ಕಾಯುತ್ತಿದೆ. ‘ಮೊದಲಿಗೆ, ಇವನು ಕೇವಲ ಊಟಕ್ಕಾಗಿ ಕಾಯುತ್ತ ಕುಳಿತುಕೊಳ್ಳುತ್ತಾನೆ ಎಂದು ಭಾವಿಸುತ್ತಿದ್ದೆ. ಆದರೆ ಅವನು ಬೆಳೆಯುತ್ತ ಹೋದಂತೆ ಅರ್ಥವಾಗುತ್ತಾ ಹೋಗುತ್ತಿದ್ದಾನೆ. ಹೀಗೆ ನಾವು ಪರಸ್ಪರ ಭಾವನೆಗಳನ್ನು ಗ್ರಹಿಸುತ್ತಿದ್ದೇವೆ, ತಿಳಿವಳಿಕೆ ಹೆಚ್ಚಿಸಿಕೊಳ್ಳುತ್ತಿದ್ದೇವೆ. ಅವನು ಯಾವಾಗಲೂ ನನ್ನ ಹತ್ತಿರವೇ ಬಂದು ಕುಳಿತುಕೊಳ್ಳುತ್ತಾನೆ. ನಾನಾಗಿಯೇ ಅವನನ್ನು ಕರೆಯುವವರೆಗೂ ಅವನು ಎಂದಿಗೂ ಅಡುಗೆಮನೆಯ ಗೆರೆಯನ್ನು ದಾಟುವುದಿಲ್ಲ. ಬಹಳ ಮುದ್ದಾದ ಹುಡುಗನಿವ’ ಎಂಬ ಒಕ್ಕಣೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ ‘ಓರಿಯೋನ ತಾಯಿ’.
ಓರಿಯೊ ಹೆಸರಿನ ಗೋಲ್ಡನ್ ರಿಟ್ರೈವರ್ ನಾಯಿಗೆಂದೇ ಮೀಸಲಾಗಿರುವ ಇನ್ಸ್ಟಾಗ್ರಾಂ ಪೇಜಿನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಓರಿಯೋ ದಿ ಫ್ಲಫಿ ಬಾಯ್ ಎಂಬ ಹೆಸರಿನ ಪೇಜಿನಲ್ಲಿ 16,500 ಫಾಲೋವರ್ಸ್ಗಳಿದ್ದಾರೆ. ಓರಿಯೋನ ದೈನಂದಿನ ಸಾಹಸಗಳು, ಚಟುವಟಿಕೆಗಳನ್ನು ನಿಯಮಿತವಾಗಿ ಇಲ್ಲಿ ಹಂಚಿಕೊಳ್ಳಲಾಗುತ್ತದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ವ್ಯಕ್ತಿ, “ಅವನು ಸೂಪರ್ ಕ್ಯೂಟ್ ಆಗಿದ್ದಾನೆ…” ಎಂದು ಪ್ರತಿಕ್ರಿಯಿಸಿದ್ಧಾರೆ. ಇನ್ನೊಬ್ಬರು, “ನನ್ನ ತಾಯಿಯ ಬೆಕ್ಕಿನಂತೆಯೇ ಇವನೂ ಕೂಡ. ನನ್ನ ತಾಯಿಯೂ ಹೀಗೆಯೇ ತನ್ನ ಬೆಕ್ಕನ್ನು ಪ್ರೀತಿಸುತ್ತಾಳೆ, ಅದೇ ಅವಳ ನಿಜವಾದ ಮಗುವೇನೋ ಎಂಬಷ್ಟು! ಮನೆಗೆಲಸ ಮುಗಿಸಿ ಮಲಗಲು ತಡವಾದಾಗ ಮಿಯಾಂವ್ ಮಿಯಾಂವ್ ಎಂದು ಅವಳನ್ನು ಸುತ್ತುತ್ತಲೇ ಇರುತ್ತಾಳೆ. ನನ್ನ ತಾಯಿ ಅವಳನ್ನು ಬಿಟ್ಟುಹೋದರೆ ಬಹಳ ಬೇಸರಿಸಿಕೊಳ್ಳುತ್ತಾಳೆ” ಎಂದಿದ್ದಾರೆ. ಮತ್ತೊಬ್ಬರು, “ಅಮ್ಮನಿಗೆ ತುಂಬಾ ಮುದ್ದಾದ ಕಂಪನಿ… ಮುಖವನ್ನು ನೋಡಿ… ಎಂಥ ಸುಂದರ ರೋಮ. ಅಡುಗೆ ಮಾಡುವುದನ್ನು ನೋಡುತ್ತ ಹೇಗೆ ಆಂದಿಸುತ್ತಿದೆ.’ ಎಂದಿದ್ದಾರೆ.
Published On - 11:22 am, Wed, 3 August 22