Viral Video : ಈ ಚಿಂಪಾಂಜಿಯೊಂದಿಗೆ ಸಮಯ ಕಳೆಯಬೇಕೇ?
Animals : ಪ್ರಾಣಿಗಳು ಮನುಷ್ಯನಷ್ಟೇ ತೀವ್ರವಾದ ಭಾವನೆಗಳನ್ನು ಹೊಂದಿವೆ. ಸ್ಪರ್ಶ, ಪ್ರೀತಿಯಂಥ ಭಾವನೆಯನ್ನು ವ್ಯಕ್ತಪಡಿಸಿ ಪ್ರತಿಸ್ಪಂದನೆ ನಿರೀಕ್ಷಿಸುತ್ತಿರುತ್ತವೆ.
Viral Video : ಜೀನ್ಸ್ ತೊಟ್ಟಿದ್ದ ಚಿಂಪಾಂಜಿಯೊಂದು ಮಹಿಳೆಗೆ ಮುತ್ತಿಕ್ಕುತ್ತಿರುವ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಪ್ರಾಣಿಗಳು ಮನುಷ್ಯನಷ್ಟೇ ತೀವ್ರವಾದ ಭಾವನೆಗಳನ್ನು ಹೊಂದಿವೆ. ಸ್ಪರ್ಶ, ಪ್ರೀತಿಯಂಥ ಭಾವನೆಯನ್ನು ವ್ಯಕ್ತಪಡಿಸಿ ಪ್ರತಿಸ್ಪಂದನೆ ನಿರೀಕ್ಷಿಸುತ್ತಿರುತ್ತವೆ. ಈ ಮಧ್ಯಾಹ್ನದ ಹೊತ್ತಿನಲ್ಲಿ ಕೆಲಸದಲ್ಲಿ ಏಕಾಗ್ರತೆ ಸಾಧಿಸಲಾಗದೆ ಚಡಪಡಿಸುತ್ತಿದ್ದರೆ ನೀವೊಮ್ಮೆ ಈ ವಿಡಿಯೋ ನೋಡಿ, ಮನಸ್ಸು ಉಲ್ಲಸಿತವಾಗುತ್ತದೆ. ಸೌಮ್ಯಾ ಚಂದ್ರಶೇಖರನ್ ಎನ್ನುವವರು ಇತ್ತೀಚೆಗೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ ಸಫಾರಿ ವರ್ಲ್ಡ್‌ಗೆ ಭೇಟಿ ನೀಡಿ, ಅಲ್ಲಿದ್ದ ಚಿಂಪಾಂಜಿಯೊಂದಿಗೆ ಫೋಟೋ ಶೂಟ್ ಮಾಡಿಸಿಕೊಂಡು, ಅದನ್ನು ಇನ್ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪುಟ್ಟ ವಿಡಿಯೋ ಈತನಕ 5.3 ಮಿಲಿಯನ್ ವೀಕ್ಷಣೆ, 255,288 ಲೈಕ್‌ಗಳನ್ನು ಹೊಂದಿದೆ.
ಈ ವೈರಲ್ ವಿಡಿಯೋದಲ್ಲಿ, ಸೌಮ್ಯಾ ಜೋಕಾಲಿಯ ಮೇಲೆ ಕುಳಿತಿದ್ಧಾರೆ. ಪಕ್ಕದಲ್ಲಿ ಜೀನ್ಸ್ ಧರಿಸಿದ ಚಿಂಪಾಂಜಿ ಕತ್ತು ಬಳಸಿ ಮುತ್ತು ಕೂಡ ಕೊಟ್ಟಿದೆ.
View this post on Instagram
ಇದನ್ನು ನೋಡಿದ ನೆಟ್ಟಿಗರು ಸಮರೋಪಾದಿಯಲ್ಲಿ ಕಮೆಂಟ್ ಮಾಡಿದ್ದಾರೆ. ಒಬ್ಬರು, “ಇದು ತುಂಬಾ ಮುದ್ದಾಗಿದೆ” ಎಂದಿದ್ದಾರೆ. ಇನ್ನೊಬ್ಬರು, “ನಗು ನಿಲ್ಲಿಸಲು ಸಾಧ್ಯವೇ ಆಗುತ್ತಿಲ್ಲ” ಎಂದಿದ್ದಾರೆ. ಸಫಾರಿ ವರ್ಲ್ಡ್‌ನ ಏಜೆಂಟ್‌ರ ಮೇಲ್ವಿಚಾರಣೆಯಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ.
ಪ್ರಾಣಿಗಳ ಇಂಥ ವಿಡಿಯೋ ನೋಡುವುದರಿಂದ ಮನಸಿನ ಒತ್ತಡ ಕಡಿಮೆಯಾಗುತ್ತದೆ. ಈಗ ನಿಮಗೇನನ್ನಿಸುತ್ತಿದೆ?
Published On - 1:26 pm, Wed, 3 August 22