Trending : ಸುಖದ ಮತ್ತಿಗಾಗಿ ಹುಚ್ಚುಸಾಹಸಕ್ಕೆ ಬೀಳುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ
UTI : 45 ವರ್ಷದ ಮಹಿಳೆ ಮೂತ್ರಕೋಶದ ಸೋಂಕೆಂದು ವೈದ್ಯರಲ್ಲಿಗೆ ಬಂದರು. ಸ್ಕ್ಯಾನಿಂಗ್ ಮಾಡಿದಾಗ ಮೂತ್ರಕೋಶದಲ್ಲಿ ಪತ್ತೆಯಾಗಿದ್ದು 8 ಸೆ.ಮೀ. ಉದ್ದದ ಗಾಜಿನ ಲೋಟ!
Trending : ಟ್ಯುನೀಷಿಯಾ ಮೂಲದ ಮಹಿಳೆಯೊಬ್ಬರು ಮೂತ್ರನಾಳದ ಸೋಂಕಿನ ಗುಣಲಕ್ಷಣಗಳನ್ನು ಮನಗಂಡು (UTI) ಇತ್ತೀಚೆಗೆ ವೈದ್ಯರನ್ನು ಸಂಪರ್ಕಿಸಿದರು. ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸ್ಕ್ಯಾನಿಂಗ್ಗೆ ಒಳಪಟ್ಟರು. ವೈದ್ಯರು ಆಕೆಯೊಂದಿಗೆ ಮತ್ತಷ್ಟು ಮಾತನಾಡುತ್ತಾ ಹೋದಾಗ ಸತ್ಯ ಹೊರಬಂದಿತು! 45 ವರ್ಷದ ಈಕೆ 4 ವರ್ಷಗಳ ಹಿಂದೆ ಲೈಂಗಿಕ ಸುಖಕ್ಕಾಗಿ ಗಾಜಿನ ಲೋಟವನ್ನು ಯೋನಿಯಲ್ಲಿ ತೂರಿಸಿಕೊಂಡಿದ್ದನ್ನು ಸ್ವತಃ ಬಹಿರಂಗಪಡಿಸಿದರು. ಗಾಜಿನ ಲೋಟದ ಉದ್ದ ಬರೋಬ್ಬರಿ 8 ಸೆಂ.ಮೀ! ಈ ಪ್ರಕರಣವನ್ನು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸೈನ್ಸ್ ಡೈರೆಕ್ಟ್ ಜರ್ನಲ್ನಲ್ಲಿ ಪ್ರಕಟವಾದ ವರದಿಯಲ್ಲಿ, ‘ಈ ವಿಚಿತ್ರ ಪ್ರಕರಣದಲ್ಲಿ ಮಹಿಳೆಯು ಲೈಂಗಿಕ ಪ್ರಚೋದನೆಗಾಗಿ ಸಾಂಪ್ರದಾಯಿಕ ಅಭ್ಯಾಸವನ್ನು ರೂಢಿಸಿಕೊಂಡಿದ್ದರು. ಯೋನಿಯಲ್ಲಿ ತೂರಿಸಿಕೊಂಡ ಗ್ಲಾಸ್ ಅಚಾತುರ್ಯದಿಂದ ಮೂತ್ರನಾಳದ ಮಾರ್ಗವನ್ನು ಸೇರಿದೆ’ ಎಂದು ಉಲ್ಲೇಖಿಸಲಾಗಿದೆ.
ಈ ಮಹಿಳೆಯು ಅನಿಯಂತ್ರಿತ ಮೂತ್ರ ಸಮಸ್ಯೆಯಿಂದಾಗಿ ಕಳೆದ ವರ್ಷವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡಿದ್ದರು. ಈಗ ತುರ್ತುಚಿಕಿತ್ಸಾ ಘಟಕಕ್ಕೆ ದಾಖಲಾಗಿದ್ದರಿಂದ ಸ್ಕ್ಯಾನಿಂಗ್ ಮೂಲಕ ಸಮಸ್ಯೆಗೆ ನಿಖರ ಉತ್ತರ ಕಂಡುಕೊಳ್ಳಲು ಸಾಧ್ಯವಾಯಿತು.
ಬಹಳಷ್ಟು ರೋಗಿಗಳು ಮೂತ್ರಕೋಶದ ಸಮಸ್ಯೆ ಎಂದು ವೈದ್ಯರಲ್ಲಿಗೆ ತೆರಳುತ್ತಾರೆ. ಆದರೆ ಕೆಲವರಲ್ಲಿ ನಿಜವಾದ ಕಾರಣ ಬೇರೆಯೇ ಇರುತ್ತದೆ. ಲೈಂಗಿಕ ಸುಖದ ಪ್ರಚೋದನೆಗೆ ಒಳಪಡಲು ಇಂಥ ವಿವಿಧ ವಸ್ತುಗಳ ಮೊರೆ ಹೋಗಿರುತ್ತಾರೆ. ಅಚಾತುರ್ಯದಿಂದ ಇಂಥ ವಸ್ತುಗಳು ಮೂತ್ರಕೋಶವನ್ನು ಸೇರಿರುತ್ತವೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಲು ಮುಜುಗರ ಪಟ್ಟು ಹಿಂದೇಟು ಹಾಕಿರುತ್ತಾರೆ. ಆಗ ಇಂಥ ಅವಘಡಗಳು ಸಂಭವಿಸುತ್ತವೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊನೆಗೂ ಹಬೀಬ್ ಬೌರ್ಗುಯ್ಬಾ ವಿಶ್ವವಿದ್ಯಾಲಯದ ವೈದ್ಯರು ಸಿಸ್ಟೋಲಿಥೋಟಮಿ ಶಸ್ತ್ರಚಿಕಿತ್ಸೆ ಮೂಲಕ ಗಾಜಿನ ಲೋಟವನ್ನು ಹೊರತೆಗೆದು ಈಕೆಯ ಜೀವ ಉಳಿಸಿದ್ದಾರೆ.
Published On - 4:03 pm, Wed, 3 August 22