Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’

Short Story of Hamid Dalwai : ಅವನ ಮನೆಯಿಂದ ಆ ಹೂವಾಡಗಿತ್ತಿಯ ಸಂವಾದ ಕೇಳಿ ಬರುತ್ತಿರಲಿಲ್ಲ. ‘ತಮನ್ನಾ-ಎ-ಮದಿನಾ’ದ ಆರ್ತ ಸ್ವರವೂ ಬರುತ್ತಿರಲಿಲ್ಲ. ಕೆಲ ದಿನ ನಾವು ಅವನ ಮನೆಯತ್ತ ಹಾಯಲೂ ಇಲ್ಲ. ಆದರೂ ನಮಗೆ ಏನೋ, ಕಳೆದು ಕೊಂಡಂತೆ ಅನಿಸತೊಡಗಿತು.

Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
ಮರಾಠಿ ಲೇಖಕ ಹಮೀದ ದಳವಾಯಿ ಮತ್ತು ಅನುವಾದಕ ಚಂದ್ರಕಾಂತ ಪೋಕಳೆ
Follow us
ಶ್ರೀದೇವಿ ಕಳಸದ
|

Updated on:May 20, 2022 | 11:14 AM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಹೀಗವನು ನಾದಬ್ರಹ್ಮದಲ್ಲಿ ತನ್ಮಯಗೊಂಡಿರುವಾಗಲೇ ಒಂದು ದಿನ ಮುಂಬೈನಿಂದ ಅವನ ಅಪ್ಪ ತೀರಿಕೊಂಡ ತಂತಿ ಸಂದೇಶ ಬಂತು. ತಂತಿ ಬಂದಾಗ ನಾವೆಲ್ಲ ಹುಡುಗರು ಅಂಗಳದಲ್ಲಿ ಇದ್ದೆವು. ಬಾಬುಖಾನ ಬಾಗಿಲಿಗೆ ಆತು ನಿಂತಿದ್ದ. ಒಳಗಿನಿಂದ ಗ್ರಾಮೋಫೋನಿನ ಧ್ವನಿ ಕೇಳಿ ಬರಲಾರಂಭಿಸಿತು. ಅಷ್ಟರಲ್ಲಿ ಇಬ್ಬರು ಊರಹಿರಿಯರು ಬಂದರು. ‘ಏಯ್, ಹುಡುಗರಾ, ನೀವಿಲ್ಲೇನು ಮಾಡುತ್ತಿದ್ದೀರಿ?’ ಎಂದವರು ಬೆದರಿಸಿ ಕೇಳಿದರು. ನಾವು ಏನೂ ಉತ್ತರಿಸದೇ ಅಲ್ಲೇ ಕೂತು ಉಳಿದೆವು. ಬಳಿಕ ಬಾಗಿಲಿಗೆ ಆತು ನಿಂತಿರುವ ಬಾಬುಖಾನನಿಗೆ, ಇಂಥ ನಿರುಪದ್ರವಿ ಬಾಬುಖಾನನಿಗೇನೂ ನಾವು ಹೆದರಬೇಕಾಗಿರಲಿಲ್ಲ. ಆದರೆ ಅವನ ಮತ್ತು ನಮ್ಮ ನಡುವಿನ ಅಂತರ ನಮ್ಮನ್ನು ಹೆದರಿಸುತ್ತಿತ್ತು. ಅಲ್ಲದೆ ಅವನು ಸಣಕಲಾಗಿದ್ದರೂ ತೀರ ಎತ್ತರವಾಗಿದ್ದ. ಪ್ರತಿದಿನ ಜಾಗರಣೆ ಮಾಡಿದ್ದರಿಂದಾಗಿ ಅವನ ಕಣ್ಣು ಕೆಂಪಾಗಿರುತ್ತಿತ್ತು. ಕಣ್ಣು ಹಿಗ್ಗಿಸಿ ಅವನು ನಮಗೆ ಆಜ್ಞೆ ಮಾಡುತ್ತಿದ್ದ. ಬಾಬುಖಾನನಿಗೆ ಸತತ ಸೀನುವ ಮತ್ತು ನೀರು ಕುಡಿಯುವ ಅಭ್ಯಾಸವಿತ್ತು. ಸನಿಹದಲ್ಲಿರುವ ಹುಡುಗನಿಗೆ ನೀರು ತರುವಂತೆ ಹೇಳುತ್ತಿದ್ದ. ಬಳಿಕ ಗಟಗಟ ಕುಡಿದು ಗ್ಲಾಸ್ ಖಾಲಿ ಮಾಡುತ್ತಿದ್ದ. ಆ ಗ್ಲಾಸು ಒಳಗೊಯ್ದು ಇಡುವ ಕೆಲಸ ಸಹ ಹುಡುಗರೇ ಮಾಡಬೇಕಾಗುತ್ತಿತ್ತು. ಇಷ್ಟು ಮಾಡಿಯೂ ಅವನ ಗ್ರಾಮೋಫೋನಿನ ಬಳಿ ಸುಳಿಯುವಂತಿರಲಿಲ್ಲ. ಮರಳಿ ನಮ್ಮ ಬಳಿಗೆ ಬಂದು ಬೆಂಚಿನ ಮೇಲೆ ಕೂತಿರಬೇಕಾಗುತ್ತಿತ್ತು.

ಕಥೆ : ಬಾಬುಖಾನನ ಗ್ರಾಮೊಫೋನು | ಮರಾಠಿ : ಹಮೀದ ದಳವಾಯಿ | ಕನ್ನಡಕ್ಕೆ : ಚಂದ್ರಕಾಂತ ಪೋಕಳೆ

(ಭಾಗ 2)

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ: ಚಂದ್ರಕಾಂತ ಪೋಕಳೆ ಅನುವಾದಿಸಿದ ಹಮೀದ ದಳವಾಯಿ ಕಥೆ ‘ಬಾಬುಖಾನನ ಗ್ರಾಮೋಫೋನ್’
Image
Literature: ನೆರೆನಾಡ ನುಡಿಯೊಳಗಾಡಿ: ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ ಅನುವಾದಿಸಿದ ಸಿಂಗರ್​ನ ‘ಮಳ್ಳ ಗಿಂಪೆಲ್’ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ

ಬಾಬುಖಾನನ ಗ್ರಾಮೋಫೋನಿನ ಒಳಗಿನ ನಾಯಿಯ ರಹಸ್ಯ ತಿಳಿಯದೆ ಹೋಗಿ, ಒಂದು ದಿನ ನಾನಪ್ಪನಿಗೆ ಕೇಳಿದೆ. ‘ಬಾಬುಖಾನನ ಆ ನಾಯಿ ಹೇಗೆ ಮಾತಾಡುತ್ತದೆ?’ ‘ಬಾಬುಖಾನನ ನಾಯಿ’ ಅವನ ಬಳಿ ನಾಯಿಯಿದೆಯೆ?

‘ಇಲ್ಲ, ಆ ಫೋನಿನಲ್ಲಿರುವ ನಾಯಿ’

ಅಪ್ಪ ಜೋರು-ಜೋರಾಗಿ ನಗುತ್ತ ‘ಫೋನ್ ನಾಯಿಯೆ? ನಿನಗೆ ಫೋನ್‌ನಲ್ಲಿ ನಾಯಿ ಇರುತ್ತದೆಂದು ಹೇಳಿದವರು ಯಾರು? ಅದೊಂದು ಯಂತ್ರ, ನಾಯಿಯಲ್ಲ. ಕೀಲಿಕೊಟ್ಟರೆ ಸಾಕು, ರೆಕಾರ್ಡ್ ತಿರುಗುತ್ತ ಮಾತಾಡುತ್ತದೆ. ತಿಳಿಯಿತೆ?’

ಅನಂತರ ಅಪ್ಪ ಯಂತ್ರ ಎಂದರೇನು ಎಂಬ ಮಾಹಿತಿ ನೀಡಲಾರಂಭಿಸಿದ. ನನಗದು ಸರಿಯಾಗಿ ಅರ್ಥವಾಗಲಿಲ್ಲ. ಆದರೆ ನನ್ನ ಮನದೊಳಗಿನ ಆ ನಾಯಿಯು ಗ್ರಾಮೋಫೋನಿನಿಂದ ಹೊರಗೆ ಬಂದು ಜಾಹೀರಾತಿನ ಟ್ರೇಡ್‌ಮಾರ್ಕ್‌ನ ಜಾಗಕ್ಕೇ ಬಂದು ನಿಂತಿತು.

ಇಷ್ಟಾದರೂ ಗ್ರಾಮೋಫೋನು ಆಲಿಸುವ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ. ಬಾಬುಖಾನ ಸಂಜೆಗೆ ಗ್ರಾಮೋಫೋನು ಶುರು ಮಾಡಿದಾಗ, ಕೂಡಲೇ ನಾವೆಲ್ಲ ಮಕ್ಕಳು ಅವನ ಮನೆಯತ್ತ ಧಾವಿಸುತ್ತಿದ್ದೆವು. ನಾವು ಹೊರಗೆ ಬೆಂಚಿನ ಮೇಲೆ ಕೂತಲ್ಲಿಂದಲೇ ಗ್ರಾಮೋಫೋನಿನ ಜಾಗ ನೋಡುವ ಪ್ರಯತ್ನ ಮಾಡುತ್ತಿದ್ದೆವು. ಬಾಬುಖಾನ ಆಗಾಗ ನಮಗೆ ‘ಕೆಳಗೆ ಕುಳಿತುಕೊಳ್ಳಿ’ ಎಂದು ಬೆದರಿಸುತ್ತಿದ್ದ. ಆದರೂ ನಾವು ಅವನ ಮಾತು ಲೆಕ್ಕಿಸದೆ ತಿರುಗುವ ಫೋನಿನ ತಟ್ಟೆಯನ್ನು ನೋಡುತ್ತಿದ್ದೆವು.

ಗ್ರಾಮೋಫೋನಿನ ತಟ್ಟೆ ತುಂಬ ಆಗಲವಾಗಿತ್ತು. ಒಮ್ಮೆ ಶುರು ಮಾಡಿದರೆ ಅದು ನಿಲ್ಲುತ್ತಲೇ ಇರಲಿಲ್ಲ. ಕೊನೆಗೆ ಪ್ರತಿಯೊಂದು ತಟ್ಟೆ ತಿರುಗಿದಾಗ ‘ಮೈ ನೇಮ್ ಈಜ್ ಕಾಲೂ ಕವ್ವಾಲ್’ ಎಂದು ಕೂಗುತ್ತಿತ್ತು. ಈ ಧ್ವನಿ ಕೇಳಿದ ಕೂಡಲೇ ನಮಗೆ ಅದು ಮುಗಿಯಿತು ಎಂದು ಅರ್ಥವಾಗುತ್ತಿತ್ತು. ನಮಗೆ ಹಾಡಿನ ಕಡೆಗೆ ಅವರು ಕೇಳಿದರು, ‘ಏ, ಮೊದಲು ಆ ಫೋನ್ ಬಂದ ಮಾಡು’ ಬಾಬುಖಾನ ತಕ್ಷಣ ಒಳಗೆ ಹೋಗಿ ಬಂದ್ ಮಾಡಿದ. ಅಷ್ಟರಲ್ಲಿ ಅವರಿಬ್ಬರು ಪಡಸಾಲೆಯ ಒಳಗಿರುವ ಒಂದು ಬೆಂಚಿನ ಮೇಲೆ ಕೂತರು. ಅವರು ಬಾಬುಖಾನನನ್ನು ಒಳಗೆ ಕರೆದರು. ಅವನು ಆಜ್ಞಾಧಾರಕ ವಿದ್ಯಾರ್ಥಿಯಂತೆ ತಲೆ ತಗ್ಗಿಸಿ ಅವರೆದುರಿಗೆ ಬಂದು ನಿಂತ. ಬಳಿಕ ಅವರಲ್ಲಿ ಒಬ್ಬವನು ಮಾತು ಶುರು ಮಾಡಿದ. ‘ಸುದ್ದಿ ತಿಳಿಯಿತೇನೋ? ಮುಂಬೈಯಿಂದ ತಂತಿ ಬಂದಿದೆಯಂತಲ್ಲ. ನಿನ್ನಪ್ಪ ತೀರಿಹೋದ. ದೇವರು ಅವನಿಗೆ ಸದ್ಧತಿ ನೀಡಲಿ, ಆಮಿನ್’

ಕೆಲಕ್ಷಣಗಳ ಬಳಿಕ ಬಾಬುಖಾನನಿಗೆ ಅವರ ಮಾತಿನ ಅರ್ಥವಾಯಿತು. ಅವನು ಅಸಹಾಯಕನಂತೆ ಅವರ ಮುಖವನ್ನು ದಿಟ್ಟಿಸಿದ. ಬಳಿಕ ತಟ್ಟನೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.

ಇದನ್ನೂ ಓದಿ : Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ’

ಅಂದಿನಿಂದ ಬಾಬುಖಾನನ ಗ್ರಾಮೋಫೋನು ಶಾಶ್ವತವಾಗಿ ಬಂದ್ ಆಯಿತು. ಅವನ ಮನೆಯಿಂದ ಆ ಹೂವಾಡಗಿತ್ತಿಯ ಸಂವಾದ ಕೇಳಿ ಬರುತ್ತಿರಲಿಲ್ಲ. ‘ತಮನ್ನಾ-ಎ-ಮದಿನಾ’ದ ಆರ್ತ ಸ್ವರವೂ ಬರುತ್ತಿರಲಿಲ್ಲ. ಕೆಲ ದಿನ ನಾವು ಅವನ ಮನೆಯತ್ತ ಹಾಯಲೂ ಇಲ್ಲ. ಆದರೂ ನಮಗೆ ಏನೋ, ಕಳೆದು ಕೊಂಡಂತೆ ಅನಿಸತೊಡಗಿತು. ಒಂದು ದಿನ ನಾವು ಅಳುಕುತ್ತಲೇ ಅವನ ಮನೆಯತ್ತ ಹೆಜ್ಜೆ ಹಾಕಿದೆವು, ಬಾಬುಖಾನ ವಿಮನಸ್ಕಗೊಂಡು ಅಂಗಳದಲ್ಲಿ ಕೂತಿದ್ದ. ಆ ದಿನ ಅವನು ನಮ್ಮನ್ನು ಬೆದರಿಸಲಿಲ್ಲ. ಅದರಿಂದ ನಮಗೆ ಧೈರ್ಯ ಬಂದಂತಾಯಿತು. ನಿತ್ಯ ಅವನ ಮನೆಗೆ ಹೋಗಲಾರಂಭಿಸಿದೆವು. ಒಂದು ದಿನ ಅವನಿಗೆ ‘ಖಾನ ಅಣ್ಣಾ, ರಿಕಾರ್ಡ್ ಹಚ್ಚಿ’ ಎಂದೆವು.

ಅವನು ವ್ಯಾಕುಲ ನೋಟವನ್ನು ನಮ್ಮತ್ತ ಬೀರಿ ಹೇಳಿದ- ‘ಈಗಲೇ ರಿಕಾರ್ಡ್ ಹಚ್ಚಬಾರದು. ಇನ್ನೂ ಅಪ್ಪನ ಖತಮು ಮುಗಿದಿಲ್ಲ.’

ಅವರ ಅಪ್ಪನ ಸಾವಿನ ತಿಂಗಳು ಕಳೆದ ಬಳಿಕ ನಮಗೆ ಮತ್ತೆ ಗ್ರಾಮೋಫೋನು ಕೇಳಲು ಸಿಗಬಹುದೆಂಬ ಆಶೆ ಮೂಡಿತು. ಆದರೆ ತಿಂಗಳು ಕಳೆದು ಹೋದರೂ ಬಾಬುಖಾನನು ಗ್ರಾಮೋಫೋನು ಶುರು ಮಾಡುವ ಮಾತೇ ಎತ್ತಲಿಲ್ಲ. ನಾವು ಅದರ ಬಗೆಗೆ ಪ್ರಸ್ತಾಪ ಮಾಡಿದರೂ ಲಕ್ಷಗೊಡಲಿಲ್ಲ.

ಅವನು ಚಿಂತೆಯಲ್ಲಿರುವದು ನಮ್ಮ ಗಮನಕ್ಕೆ ಬಂತು. ಅವನ ಅಪ್ಪನ ಮಾಲೀಕರಿಂದ ನೌಕರಿಗಾಗಿ ಕರೆ ಬಂದಿತ್ತು. ಅವರು ಮುಂಬೈಗೆ ಬರುವಂತೆ ತಿಳಿಸಿದ್ದರು. ಊರು ಬಿಟ್ಟು ಹೋಗಲು ಅವನಿಗೆ ಮನಸ್ಸಿರಲಿಲ್ಲ. ಆದರೆ ನಾವು ಅವನಿಗೆ ಅದರ ಬಗೆಗೆ ಏನೂ ಕೇಳಲಿಲ್ಲ. ಅವನೇ ಒಂದು ದಿನ ಹೇಳಿದ ‘ಹುಡುಗರೆ ನಾನು ಮುಂಬೈಗೆ ಹೊರಟಿದ್ದೇನೆ.’

‘ಯಾವಾಗ’ ನಾವೆಲ್ಲ ಹುಡುಗರು ಗದ್ದಲ ಹಾಕಲಾರಂಭಿಸಿದೆವು.

‘ನಾಳೆ ನನಗೆ ವಿದಾಯ ಹೇಳಲು ಅಗಸೆಗೆ ಬನ್ನಿ’ ಎಂದ.

‘ಹಾಗಾದರೆ ಫೋನು ಏನು ಮಾಡ್ತೀಯಾ?’ ನಾವು ಕೇಳಿದೆವು. ನಮಗೆಲ್ಲ ಅವನಿಗಿಂತ ಅವನ ಗ್ರಾಮೋಫೋನಿನ ಚಿಂತೆ ಸತಾಯಿಸುತ್ತಿತ್ತು.

‘ಫೋನೂ ಜೊತೆಗೆ ಒಯ್ಯುತ್ತೇನೆ’ ಎಂದವನು ಹೇಳಿದ. ನಮಗೆಲ್ಲ ತೀರ ಕೆಡಕೆನಿಸಿತು. ಅವನು ತನ್ನ ಗ್ರಾಮೋಫೋನನ್ನು ನಮಗೆ ಕೊಟ್ಟು ಹೋಗಬೇಕೆಂಬ ಹುಚ್ಚು ಕಲ್ಪನೆ ನಮ್ಮ ಮನದೊಳಗೆ ಮೂಡಿ ಮಾಯವಾಯಿತು. ಆದರೆ ಅವನಿಗೆ ಹೇಳುವ ಧೈರ್ಯ ನಮಗಾಗಲಿಲ್ಲ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ

ಇದಾದ ಕೆಲವೇ ದಿನಗಳಲ್ಲಿ ಬಾಬುಖಾನ ಮುಂಬೈಗೆ ಹೊರಟುಹೋದ. ಹೋಗುವಾಗ ನಾವೆಲ್ಲ ಅಗಸೆ ಬಾಗಿಲ ವರೆಗೂ ಹೋದೆವು. ಅಗಸೆ ದಾಟಿದ ಬಳಿಕ ಅವನು ಕ್ಷಣಕಾಲ ನಿಂತು ಕೊಡೆ ಅಲುಗಿಸಿದ. ಬಳಿಕ ಅವನು ಆಗಾಗ ಹೊರಳಿ ನೋಡುತ್ತ ಮುಂದಡಿ ಇಡಲಾರಂಭಿಸಿದ.

ಅವನು ಹೋದ ಕೆಲ ದಿನಗಳಲ್ಲಿ ಅವನ ಅಮ್ಮನೂ ಅವನ ಜೊತೆಗಿರಲು ಹೋದಳು. ಎಷ್ಟೋ ದಿನ ಅವನ ಯಾವ ಸುಳಿಯೂ ನಮಗೆ ಗೊತ್ತಾಗಲಿಲ್ಲ. ಬಳಿಕ ಅವನು ಅಲ್ಲಿಂದ ಇಂದೂರಿಗೆ ಹೋಗಿದ್ದು ತಿಳಿದು ಬಂತು. ಅವನ ಮಾಲೀಕ ಇಂದೂರಿನಲ್ಲಿ ಬೇರೊಂದು ಕಾಂಟ್ರಾಕ್ಟ್ ಹಿಡಿದಿದ್ದರಿಂದ ಅವನನ್ನು ಅಲ್ಲಿಗೆ ಕಳಿಸಲಾಗಿತ್ತು. ಎಂದೂ ಮನೆಯಿಂದ ಹೊರಬೀಳದ ಬಾಬುಖಾನ, ಒಮ್ಮೆ ಹೊರಬಿದ್ದವನು ಮತ್ತೆಂದೂ ತಿರುಗಿ ಊರಿಗೆ ಮರಳಲಿಲ್ಲ. ಇಂದೂರಲ್ಲೇ ಉಳಿದುಕೊಂಡ. ಅಲ್ಲೇ ಮದುವೆಯನ್ನೂ ಮಾಡಿಕೊಂಡ. ಬಂಧುಬಳಗದವರಿಗೆ ಔಪಚಾರಿಕವಾಗಿ ನಾಲ್ಕು ಸಾಲು ಬರೆದು ಆಮಂತ್ರಣ ನೀಡಿದ್ದನಂತೆ. ‘ಬಾಬುಖಾನ ಊರಿಗೆ ಬೇಸತ್ತು ಹೋದ’ ಎಂದರು ಜನ. ಕ್ರಮೇಣ ನಾವೂ ಬಾಬುಖಾನನನ್ನು ಮರೆತೆವು. ಕೆಲದಿನಗಳ ಬಳಿಕ ಊರಲ್ಲಿ ಬೇರೆ ಯಾರೊ, ಗ್ರಾಮೋಫೋನು ತಂದರು. ಅನಂತರ ನಾವು ಬೆಳೆದಂತೆ ಗ್ರಾಮೋಫೋನಿನ ಬೇರೆ ಬೇರೆ ಮಾಡೆಲ್‌ಗಳು ನಮಗೆ ಊರಲ್ಲಿ ಕಾಣಲಾರಂಭಿಸಿದವು. ಗ್ರಾಮೋಫೋನಿನ ಬಗೆಗಿನ ಮೊದಲಿನ ಅದ್ಭುತ ಕುತೂಹಲವೂ ಲಯಗೊಂಡಿತು.

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಕಥೆಯ ಎಲ್ಲಾ ಭಾಗ ಮತ್ತು ಅಂಕಣದ ಇನ್ನಿತರ ಅನುವಾದಿತ ಕಥೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:10 am, Fri, 20 May 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ