ರಾಜಣ್ಣ 75ನೇ ಹುಟ್ಟುಹಬ್ಬ ನಿಮಿತ್ತ ತುಮಕೂರಲ್ಲಿ ನಾಳೆ ಅದ್ದೂರಿ ಕಾರ್ಯಕ್ರಮ, ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
ಹೊರಗಿನಿಂದ 2,000 ಬಸ್ ಸೇರಿದಂತೆ ಸುಮಾರು 4,000 ವಾಹನಗಳಲ್ಲಿ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರುತ್ತಿದ್ದಾರೆ, ಟ್ರಾಫಿಕ್ ಸಮಸ್ಯೆ ಎದುರಾಗುವ ಸಮಸ್ಯೆ ಇರೋದ್ರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಎಸ್ಪಿ ಅಶೋಕ್ ಮನವಿ ಮಾಡಿದರು. 14 ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಮತ್ತು ರೂಟ್ ಮ್ಯಾಪ್ ಸಹ ಸಾಮಾಜಿಕ ಜಾಲತಾಣಗಗಳಲ್ಲಿ ಶೇರ್ ಮಾಡಲಾಗಿದೆ ಎಂದು ಅವರು ಹೇಳಿದರು.
ತುಮಕೂರು, ಜೂನ್ 20: ಸಹಕಾರ ಸಚಿವ ಕೆಎನ್ ರಾಜಣ್ಣ ಅವರ 75ನೇ ಹುಟ್ಟುಹಬ್ಬದ ನಿಮಿತ್ತ ನಾಳೆ ನಗರದಲ್ಲಿ ಅಮೃತ ಮಹೋತ್ಸವ (platinum jubilee) ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ15 ಸಚಿವರು ಭಾಗವಹಿಸುತ್ತಿದ್ದಾರೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆವಿ ಹೇಳಿದರು. ಕಾರ್ಯಕ್ರಮ ಭಾರೀ ಪ್ರಮಾಣದಲ್ಲಿ ನಡೆಯಲಿರುವುದರಿಂದ ಭದ್ರತೆಗಾಗಿ ಸುಮಾರು 1,600 ಪೊಲೀಸ್ ಸಿಬ್ಬಂದಿ, 5 ಡಿಅರ್ ತುಕಡಿ ಮತ್ತು ಕೆಎಸ್ಆರ್ಪಿಯ 10 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: ರಾಜಣ್ಣ ಮನವಿ ನೀಡಿದ್ದಾರೆ, ಸಿಎಂ ಜೊತೆ ಚರ್ಚೆ ನಡೆಸಿ ಯಾವ ತನಿಖೆ ನಡೆಸಬೇಕೆಂದು ತೀರ್ಮಾನ: ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ