AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್

‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್

ಮದನ್​ ಕುಮಾರ್​
|

Updated on: Jun 20, 2025 | 9:18 PM

Share

ವಿಶೇಷ ಕಥಾಹಂದರ ಹೊಂದಿದ್ದ ‘ಪಪ್ಪಿ’ ಚಿತ್ರ ತೆರೆಕಂಡು 50 ದಿನ ಪೂರೈಸಿದೆ. ಈ ಸಂಭ್ರಮದಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದೆ. ಈ ಚಿತ್ರದಲ್ಲಿ ಅಭಿನಯಿಸಿರುವ ಬಾಲ ಕಲಾವಿದರಾದ ಆದಿತ್ಯ ಹಾಗೂ ಜಗದೀಶ್ ಕೂಡ ವೇದಿಕೆಯಲ್ಲಿ ಮಾತನಾಡಿದರು. ಸಿನಿಮಾದ ಡೈಲಾಗ್ ಹೇಳಿ ಎಲ್ಲರನ್ನೂ ನಗಿಸಿದರು.

ವಿಶೇಷ ಕಥಾಹಂದರ ಹೊಂದಿದ್ದ ‘ಪಪ್ಪಿ’ ಸಿನಿಮಾ (Puppy Movie) ಬಿಡುಗಡೆಯಾಗಿ 50 ದಿನ ಪೂರೈಸಿದೆ. ಈ ಖುಷಿಯಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಮಾಡಿದೆ. ಈ ಸಿನಿಮಾದಲ್ಲಿ ನಟಿಸಿರುವ ಬಾಲ ಕಲಾವಿದರಾದ ಆದಿತ್ಯ ಮತ್ತು ಜಗದೀಶ್ ಕೂಡ ವೇದಿಕೆಯಲ್ಲಿ ಮಾತನಾಡಿದರು. ಸಿನಿಮಾದ ಡೈಲಾಗ್ ಹೇಳಿ ಎಲ್ಲರನ್ನೂ ನಗಿಸಿದರು. ಈ ಸಿನಿಮಾಗೆ ಕನ್ನಡ ಚಿತ್ರರಂಗದ ಅನೇಕರು ಬೆಂಬಲ ನೀಡಿದರು. ರಮ್ಯಾ, ಧ್ರುವ ಸರ್ಜಾ (Dhruva Sarja), ಶಿವರಾಜ್​ಕುಮಾರ್, ವಿನಯ್ ರಾಜ್​ಕುಮಾರ್ ಮುಂತಾದವರು ಈ ಸಿನಿಮಾಗೆ ನೀಡಿದ ಬೆಂಬಲಕ್ಕೆ ಚಿತ್ರತಂಡದವರು ಧನ್ಯವಾದಗಳನ್ನು ಅರ್ಪಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.