ಬೆಂಗಳೂರು: ಕೆಅರ್ ಪುರಂನಲ್ಲಿ ವಿದ್ಯುತ್ ಪ್ರವಹಿಸಿ 10-ವರ್ಷದ ಬಾಲಕನ ದುರಂತ ಅಂತ್ಯ
ಕೇವಲ ಕೆಆರ್ ಪುರಂ ಮಾತ್ರ ಅಲ್ಲ ನಗರದ ನಾನಾ ಭಾಗಗಳ ಲೇಔಟ್ ಗಳಲ್ಲಿ ಹೈಟೆನ್ಷನ್ ಲೈನ್ ಗಳು ಮನೆಗಳ ಮೇಲಿಂದ ಹಾದು ಹೋಗಿವೆ. ಬಹುಮಹಡಿ ಕಟ್ಟಡಗಳನ್ನು ಕಟ್ಟಿಕೊಂಡರೆ ಅಪಾಯ ತಪ್ಪಿದ್ದಲ್ಲ. ಅನಂತ್ ಕೇವಲ 10 ವರ್ಷದ ಬಾಲಕ. ನೀರು ಕಾಯಿಸುವ ಕಾಯಿಲ್ ನ ವೈರನ್ನು ಹೈಟೆನ್ಷನ್ ಲೈನ್ ಮೇಲೆ ಎಸೆಯುವ ಯೋಚನೆ ಅವನಿಗೆ ಬಂದಿದ್ದಾದರೂ ಹೇಗೆ? ಬುದ್ಧಿ ಹೇಳಲು ಮನೆಯಲ್ಲಿ ದೋಡ್ಡೋರು ಯಾರೂ ಇರಲಿಲ್ಲವೇ?
ಬೆಂಗಳೂರು, ಜೂನ್ 20: ನಗರದ ಕೆಆರ್ ಪುರಂನಲ್ಲಿರುವ ಅಯ್ಯಪ್ಪ ನಗರ ಬಡಾವಣೆಯಲ್ಲಿ 10 ವರ್ಷದ ಅನಂತ್ ಹೆಸರಿನ ಬಾಲಕ ವಿದ್ಯುತ್ ಪ್ರವಹಿಸಿ ನಗರದ ವಿಕ್ಟೋರಿಯ ಆಸ್ಪತ್ರೆಯಲ್ಲಿ 5-ದಿನ ಕಾಲ ಜೀವನ್ಮರಣದ ಹೋರಾಟ ನಡೆಸಿ ಇಂದು ಮೃತಪಟ್ಟಿದ್ದಾನೆ. ಅವನ ಸಾವು ದುರಂತ ಅನ್ನಬೇಕೋ ಅಥವಾ ಮನೆಯಲ್ಲಿರುವ ಹಿರಿಯರ ಬೇಜವಾಬ್ದಾರಿತನ ಎನ್ನಬೇಕೋ ಗೊತ್ತಾಗುತ್ತಿಲ್ಲ. ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ ಅನಂತ್ ಸೋಮವಾರ ಸಾಯಂಕಾಲ ಮನೆಯಿಂದ ಹೊರಬಂದು ಮನೆ ಮೇಲಿಂದ ಹಾದು ಹೋಗಿರುವ ಹೈಟೆನ್ಷನ್ ವೈರ್ ಕಡೆ ನೀರು ಕಾಯಿಸುವ ಹೀಟರ್ನ ವೈರ್ ಎಸೆದಿದ್ದಾನೆ. ನಂತರ ನಡೆದಿದ್ದು ಮಾತ್ರ ದುರಂತ. ಅವನ ಮೈಗೆ ಬೆಂಕಿ ಹೊತ್ತಿಕೊಂಡಿತ್ತು, ಮತ್ತು ಗೋಡೆ ಬಿದ್ದು ಕಿಟಕಿ ಪೇನ್ಗಳು ಒಡೆದಿವೆ ಅಂದರೆ ಅವನಿಗೆ ಎಷ್ಟು ಪ್ರಬಲವಾಗಿ ಶಾಕ್ ತಾಕಿತ್ತು ಅನ್ನೋದನ್ನು ಊಹಿಸಬಹುದು.
ಇದನ್ನೂ ಓದಿ: ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮುಗಿಸಿ ಆಟವಾಡ್ತಿದ್ದಾಗ ವಿದ್ಯುತ್ ಪ್ರವಹಿಸಿ ಬಾಲಕ ಸಾವು