AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮುಗಿಸಿ ಆಟವಾಡ್ತಿದ್ದಾಗ ವಿದ್ಯುತ್ ಪ್ರವಹಿಸಿ ಬಾಲಕ ಸಾವು

ಪೋಷಕರು ಆದಷ್ಟು ನಿಮ್ಮ ಮಕ್ಕಳ ಬಗ್ಗೆ ಗಮನಹರಿಸಿ, ಇಲ್ಲದಿದ್ದರೆ ಅನಾಹುತವಾಗಬಹುದು. ತುಮಕೂರು(Tumakuru) ಜಿಲ್ಲೆಯ ಶಿರಾ ತಾಲೂಕಿನ ಹೆಚ್.ಕಾವಲ್ ಗ್ರಾಮದಲ್ಲಿ  ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮುಗಿಸಿ ಆಟವಾಡುತ್ತಿದ್ದಾಗ ಕಂಬದಿಂದ ವಿದ್ಯುತ್ ಪ್ರವಹಿಸಿ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮುಗಿಸಿ ಆಟವಾಡ್ತಿದ್ದಾಗ ವಿದ್ಯುತ್ ಪ್ರವಹಿಸಿ ಬಾಲಕ ಸಾವು
ವಿದ್ಯುತ್ ಪ್ರವಹಿಸಿ ಬಾಲಕ ಸಾವು
ಮಹೇಶ್ ಇ, ಭೂಮನಹಳ್ಳಿ
| Edited By: |

Updated on: Aug 15, 2024 | 4:53 PM

Share

ತುಮಕೂರು, ಆ.15: ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮುಗಿಸಿ ಆಟವಾಡುತ್ತಿದ್ದಾಗ ಕಂಬದಿಂದ ವಿದ್ಯುತ್ ಪ್ರವಹಿಸಿ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ತುಮಕೂರು(Tumakuru) ಜಿಲ್ಲೆಯ ಶಿರಾ ತಾಲೂಕಿನ ಹೆಚ್.ಕಾವಲ್ ಗ್ರಾಮದಲ್ಲಿ ನಡೆದಿದೆ. ಹೇಮಂತ್(8) ಮೃತ ವಿದ್ಯಾರ್ಥಿ. ಆಟವಾಡುವಾಗ ವಿದ್ಯುತ್ ಕಂಬದಿಂದ ಗಯಾ ವೈರ್​ಗೆ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ. ಕೆಇಬಿ ಇಲಾಖೆ ನಿರ್ಲಕ್ಷ್ಯ, ಬೇಜಾವ್ದಾರಿಗೆ ಹೇಮಂತ್ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿದ್ಯುತ್ ಶಾಕ್​ನಿಂದ ಯುವ ಇಂಜಿನಿಯರ್ ಸಾವು

ಬೆಂಗಳೂರು: ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದ ಯಸ್ಕಾವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ವಿದ್ಯುತ್ ಪ್ರವಹಿಸಿ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ನಿವಾಸಿ ​ ಕೌಶಿಕ್(27) ಮೃತ ರ್ದುದೈವಿ. ಪ್ಯಾನಲ್ ಬೋರ್ಡ್ ತಯಾರಿ ವೇಳೆ ಕೌಶಿಕ್​ಗೆ ಕರೆಂಟ್ ಶಾಕ್​ ಹೊಡೆದಿತ್ತು. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಕೌಶಿಕ್ ಕೊನೆಯುಸಿರೆಳೆದಿದ್ದಾರೆ. ಸುರಕ್ಷತಾ ಕ್ರಮಕೈಗೊಳ್ಳದಿದ್ದರಿಂದ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು: ವಿದ್ಯುತ್ ಶಾಕ್​ನಿಂದ ಬಾಲಕ ಸಾವು; ಅಧಿಕಾರಿ, ಸಿಬ್ಬಂದಿ ಸೇರಿ 8 ಮಂದಿ ಸಸ್ಪೆಂಡ್

ಕಣ್ಣೀರು ಹಾಕ್ತಿರುವ ಮೃತನ ತಾಯಿ

ಇನ್ನು ಘಟನೆ ಕುರಿತು ಮಾತನಾಡಿದ ಮೃತನ ತಾಯಿ ಸುಜಾತ, ‘ಕಳೆದ ಮೂರು ತಿಂಗಳಿನಿಂದ ವರ್ಕ್ ಪ್ರೆಷರ್ ಜಾಸ್ತಿ ಇತ್ತು. ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋದರೆ ರಾತ್ರಿ 12 ವರೆಗೆ ಕೆಲಸ ಮಾಡುತ್ತಿದ್ದ. ವರ್ಕ್ ಲೋಡ್ ಜಾಸ್ತಿ ಇದ್ದು, ವಿಶ್ರಾಂತಿ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದ. ನಿನ್ನೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋದ ಮಗ ಹೆಣವಾಗಿದ್ದಾನೆ. ರಾತ್ರಿ 10 ಗಂಟೆಗೆ ಪೋನ್ ಮಾಡಿದಾಗ ತಡವಾಗುತ್ತೆ ಬರುತ್ತೆನೆ ಎಂದಿದ್ದ. 11:30 ರ ಸುಮಾರಿಗೆ ಸಂಬಂಧಿಕರು ಆಸ್ಪತ್ರೆ ಬಳಿ ಕರೆ ತಂದರು. ನನಗೆ ನನ್ನ ಮಗ ಬೇಕು, ವಾಪಸ್ ತಂದು ಕೊಡಿ ಎಂದು ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ