AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ವಿದ್ಯುತ್ ಶಾಕ್​ನಿಂದ ಬಾಲಕ ಸಾವು; ಅಧಿಕಾರಿ, ಸಿಬ್ಬಂದಿ ಸೇರಿ 8 ಮಂದಿ ಸಸ್ಪೆಂಡ್

ಶಾಲಾ ಆವರಣದಲ್ಲಿ ಇದ್ದ ನೇರಳೆ ಮರದಿಂದ ನೇರಳೆಹಣ್ಣು ಕೀಳಲು ಹೋಗಿದ್ದ ಬಾಲಕ ಮೃತಪಟ್ಟಿದ್ದು ಈ ಪ್ರಕರಣ ಸಂಬಂಧ ಅಧಿಕಾರಿ, ಸಿಬ್ಬಂದಿ ಸೇರಿ 8 ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಸಿಬ್ಬಂದಿ ಬೇಜವಾಬ್ದಾರಿಯಿಂದ ಸಾವು ಎಂದು ಅಮಾನತು ಮಾಡಲಾಗಿದೆ.

ಚಿಕ್ಕಮಗಳೂರು: ವಿದ್ಯುತ್ ಶಾಕ್​ನಿಂದ ಬಾಲಕ ಸಾವು; ಅಧಿಕಾರಿ, ಸಿಬ್ಬಂದಿ ಸೇರಿ 8 ಮಂದಿ ಸಸ್ಪೆಂಡ್
ಸಾಂದರ್ಭಿಕ ಚಿತ್ರ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Jun 16, 2024 | 10:24 AM

Share

ಚಿಕ್ಕಮಗಳೂರು, ಜೂನ್.16: ವಿದ್ಯುತ್ ಶಾಕ್​​ನಿಂದ 7 ನೇ ತರಗತಿ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ಸೇರಿ 8 ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಪ್ರಭಾರ ಪ್ರಾಂಶುಪಾಲ, ನಿಲಯ ಪಾಲಕ ಸೇರಿ 8 ಮಂದಿ ಅಮಾನತುಗೊಳಿಸಿ ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರವೀಣ್ ಬಿ ಬಾಗೇವಾಡಿ (Praveen B Bagewadi) ಅವರು ಆದೇಶ ಹೊರಡಿಸಿದ್ದಾರೆ.

ನಿನ್ನೆ ಶಾಲಾ ಆವರಣದಲ್ಲಿ ಇದ್ದ ನೇರಳೆ ಮರದಿಂದ ನೇರಳೆಹಣ್ಣು ಕೀಳಲು ಆಕಾಶ್ ಮತ್ತು ಆವರ ಸ್ನೇಹಿತರು ಹೋಗಿದ್ದರು. ಈ ವೇಳೆ ವಿದ್ಯುತ್ ಶಾಕ್​ನಿಂದ 13 ವರ್ಷದ ಆಕಾಶ್​ ಎಂಬ ಬಾಲಕ ಸಾವನ್ನಪ್ಪಿದ್ದ. ಬಾಲಕ ಮರದಿಂದ ಬೀಳುವಾಗ ವಿದ್ಯುತ್ ತಂತಿ ಹಿಡಿದು ಶಾಕ್ ಹೊಡೆದಿತ್ತು. ಸಿಬ್ಬಂದಿ ಬೇಜವಾಬ್ದಾರಿಯಿಂದ ಸಾವು ಎಂದು ಅಮಾನತು ಮಾಡಲಾಗಿದೆ.

ಘಟನೆ ನಡೆದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಆಕಾಶ್ ಸಾವನ್ನಪ್ಪಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬಲಿಕೊಡಲು ಹಸುಗಳನ್ನು ಖರೀದಿ ಮಾಡಿದ ಆರೋಪ, ಮದರಸಾ ಮೇಲೆ ಗುಂಪಿನಿಂದ ದಾಳಿ

ರಸ್ತೆಯ ಚರಂಡಿಗೆ ವೆಸ್ಟೆಜ್ ಬಿಟ್ಟವ ಅರೆಸ್ಟ್

ರಸ್ತೆಯ ಚರಂಡಿಗೆ ವೆಸ್ಟೆಜ್ ಬಿಟ್ಟ ಸ್ಯಾನಿಟರಿ ಕ್ಲಿನಿಂಗ್ ವಾಹನವನ್ನ ವಶಕ್ಕೆ ಪಡೆಯಲಾಗಿದೆ. ಸುರೇಶ್ ನಾಯಕ್ ಎಂಬ ಚಾಲಕ ಈ ವಿಕೃತ್ಯ ನಡೆಸಿದ್ದು, ಸದಾಶಿವನಗರ ಸಂಚಾರಿ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ. ಸಂಬಂಧಪಟ್ಟ ಸ್ಥಳಕ್ಕೆ ಹೊಗಿ ವಿಲೇವಾರಿ ಮಾಡದೆ ಬೇಜವಾಬ್ದಾರಿ ತೋರಿ, ಮೇಖ್ರಿ ಸರ್ಕಲ್ ನ ಅಂಡರ್ ಪಾಸ್ ನ ಚರಂಡಿಗೆ ವೇಸ್ಟೆಜ್ ಬಿಟ್ಟು ಅಪಘಾತಕ್ಕೆ ಕಾರಣವಾಗಿದ್ದ.

ಪಾರ್ಕ್​ಗಳಲ್ಲಿ ಇನ್ಮುಂದೆ ರಾತ್ರಿ 10ರವರೆಗೆ ಅವಕಾಶ

ಬೆಂಗಳೂರಿನ ಸಾರ್ವಜನಿಕ ಪಾರ್ಕ್​ಗಳಲ್ಲಿ ಇನ್ಮುಂದೆ ಬೆಳಗ್ಗೆ 5ರಿಂದ ರಾತ್ರಿ 10ರವರೆಗೂ ಅವಕಾಶ ನೀಡಲಾಗಿದೆ. ಈ ಹಿಂದೆ ಪಾರ್ಕ್ ಗಳಲ್ಲಿ ಬೆಳಗ್ಗೆ 5ರಿಂದ 10ರವರೆಗೆ ಮತ್ತು ಸಂಜೆ 4ರಿಂದ 8ರವರೆಗೆ ಅವಕಾಶ ನೀಡಲಾಗಿತ್ತು. ಆದ್ರೆ ಇದೀಗ ರಾತ್ರಿ 10ರವರೆಗೆ ಮುಕ್ತ ಅವಕಾಶ ನೀಡಲಾಗಿದ್ದು, ವಾಯು ವಿಹಾರಿಗಳು, ಸಾರ್ವಜನಿಕರು ಖುಷ್ ಆಗಿದ್ದಾರೆ. ಮತ್ತೊಂದೆಡೆ ಪಾರ್ಕ್ ಗಳಲ್ಲಿ ಸಿಸಿಟಿವಿ, ಪೊಲೀಸ್ ಗಸ್ತು ಹೆಚ್ಚಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ