AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿನಾಡಲ್ಲೊಂದು ಮಾತನಾಡುವ ಕೆರೆ, ಕೊಟ್ಟ ಮಾತು ತಪ್ಪಿದ್ದಕ್ಕೆ ಮನನೊಂದ ಕೆರೆ

ಕೊಪ್ಪ ತಾಲೂಕಿನ ಹರಂದೂರು ಸಮೀಪದ ವಡ್ಡನಮಕ್ಕಿ ಕೆರೆಯ ಅವ್ಯವಸ್ಥೆ ಕಂಡ ಗ್ರಾಮಸ್ಥರು ಕೆರೆ ಮುಂದೆ ಬ್ಯಾನರ್ ಹಾಕಿದ್ದಾರೆ. ಕೆರೆಯೇ ತನ್ನ ನೋವನ್ನು ಹೇಳಿಕೊಳ್ಳುವಂತೆ ಬ್ಯಾನರ್ ಹಾಕಿದ್ದಾರೆ. ನನ್ನ ಅಭಿವೃದ್ಧಿಗೆಂದು 3.70 ಸಾವಿರ ಹಣವನ್ನ ಬಿಡುಗಡೆ ಮಾಡಿಕೊಂಡಿದ್ದಾರೆ. ಆದರೆ ನನ್ನ ಒಡಲಾಳದಲ್ಲಿ ಇದ್ದ ಹೂಳನ್ನ ಸಮರ್ಪಕವಾಗಿ ತೆಗೆದಿಲ್ಲ ಎಂದಿದೆ.

ಕಾಫಿನಾಡಲ್ಲೊಂದು ಮಾತನಾಡುವ ಕೆರೆ, ಕೊಟ್ಟ ಮಾತು ತಪ್ಪಿದ್ದಕ್ಕೆ ಮನನೊಂದ ಕೆರೆ
ವಡ್ಡನಮಕ್ಕಿ ಕೆರೆ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Jun 16, 2024 | 12:31 PM

Share

ಚಿಕ್ಕಮಗಳೂರು, ಜೂನ್.16: ಇಂಜಿನಿಯರ್​ನಿಂದ ತನಗಾದ ಮೋಸವನ್ನು ಕೆರೆಯೊಂದು (Lake) ತಾನೇ ತನ್ನ ನೋವನ್ನ ಹೇಳಿಕೊಳ್ತಿರೋ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಹರಂದೂರು ಸಮೀಪದ ವಡ್ಡನಮಕ್ಕಿ ಕೆರೆ ಅಭಿವೃದ್ಧಿಗೆಂದು 3 ಲಕ್ಷದ 79 ಸಾವಿರ ಬಿಡುಗಡೆಯಾಗಿತ್ತು. ಕೆಲಸ ಆಗಿದೆ ಎಂದು ಇಂಜಿನಿಯರ್ ಹಣವನ್ನ ಸಹ ಬಿಡುಗೊಡಿ ಮಾಡಿಕೊಂಡಿದ್ದಾರೆ. ಆದರೆ, ಈಗ ಕೆರೆ ತನ್ನ ನೋವನ್ನ ತಾನೇ ಹೇಳಿಕೊಳ್ತಿದೆ. ನನ್ನ ಅಭಿವೃದ್ಧಿಗೆಂದು 3.70 ಸಾವಿರ ಹಣವನ್ನ ಬಿಡುಗಡೆ ಮಾಡಿಕೊಂಡಿದ್ದಾರೆ. ಆದರೆ ನನ್ನ ಒಡಲಾಳದಲ್ಲಿ ಇದ್ದ ಹೂಳನ್ನ ಸಮರ್ಪಕವಾಗಿ ತೆಗೆದಿಲ್ಲ ಎಂದಿದೆ.

ಅಂದಾಜು ಕೇವಲ ಅರವತ್ತು ಸಾವಿರದಷ್ಟು ಹಣವನ್ನು ಮಾತ್ರ ನನ್ನ ಅಭಿವೃದ್ಧಿಗೆಂದು ಬಳಕೆ ಮಾಡಿ ಉಳಿದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಾನು ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಶುದ್ಧ ಕುಡಿಯುವ ನೀರು ಕೊಡುತ್ತೇನೆ ಎಂದು ನಂಬಿದ್ದೆ. ಆದರೆ, ಇಂದು ಅಧಿಕಾರಿಗಳ ಕಣ್ಣ ಮುಚ್ಚಾಲೆ ಆಟಕ್ಕೆ ನಾನು ಬಲಿಯಾಗಿದ್ದು ಹಳ್ಳಿಗಳಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳಲಾಗುತ್ತಿಲ್ಲ ಎಂದು ಕೆರೆ ಸರ್ಕಾರ ಹಾಗೂ ಇಂಜಿನಿಯರ್ ವಿರುದ್ಧ ಅಸಮಾಧಾನ ಹೊರಹಾಕಿದೆ. ಕೆರೆಯೇ ತನ್ನ ನೋವನ್ನ ತಾನೇ ಹೇಳಿಕೊಳ್ತಿರುವಂತೆ ಸ್ಥಳೀಯರು ಕೆರೆ ಬಳಿ ಬ್ಯಾನರ್ ಮಾಡಿಸಿ ಹಾಕಿ ಸರ್ಕಾರ ಹಾಗೂ ಇಂಜಿನಿಯರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕಷ್ಟದಲ್ಲಿರುವ ಜನರಿಗೆ ಸರ್ಕಾರ ಬರೆ ಹಾಕಿದೆ, ಜನವಿರೋಧಿ ಸರ್ಕಾರ ಎನ್ನಲು ಮತ್ತಾವ್ಯ ಸರ್ಟಿಫಿಕೇಟ್​ ಬೇಕಿಲ್ಲ -ಸಿ.ಟಿ.ರವಿ

ಕೆರೆ ಅಭಿವೃದ್ಧಿಯೋ… ಅಥವ ಎಂಜಿನಿಯರ್ ಅಭಿವೃದ್ಧಿಯೋ… ಎಂದು ಬ್ಯಾನರ್ ಹಾಕಿ ಪ್ರಶ್ನಿಸಲಾಗಿದೆ. 3,79,384 ಮೊತ್ತವನ್ನು ಬಿಲ್ ಮಾಡಲಾಗಿದ್ದು, ಕನಿಷ್ಠ ರೂ.60 ಸಾವಿರ ಮೊತ್ತದಷ್ಟು ಕೂಡ ಕೆಲಸ ಮಾಡಿಲ್ಲ. ಪ್ರಜ್ಞಾವಂತ ಊರಿನ ಹಿರಿಯರು, ಚುನಾಯಿತ ಪ್ರತಿನಿಧಿಗಳು ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ಹೂಳನ್ನು ತೆಗೆಯಲು ಕೊಪ್ಪದ ಬಾಳಗಡಿಯಲ್ಲಿನ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ಕಚೇರಿಯಲ್ಲಿನ ಎಂಜಿನಿಯರ್ ನೀಡಿದ ಭರವಸೆಯನ್ನು ನಂಬಿ ಗ್ರಾಮದ ಜನರಿಗೆ ಉತ್ತಮ ನೀರು ಕೊಡಲು ಒಪ್ಪಿಕೊಂಡೆ. ಆದರೆ, ಬಿಲ್ ಮಾಡಿ ಹಣ ಪಡೆದಿದ್ದಾನೆ. ಇದರಿಂದ ನನಗೆ ನನ್ನ ಗ್ರಾಮದ ಜನರಿಗೆ ಅನ್ಯಾಯವಾಗಿದೆ ಎಂಬುದಾಗಿ ವಡ್ಡನಮಕ್ಕಿ ಕೆರೆಯೇ ಪ್ರಶ್ನಿಸುತ್ತಿರುವಂತೆ ಸ್ಥಳಿಯರು ಬ್ಯಾನರ್ ಅಳವಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ