AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಪ್ಪಿ’ ಸಿನಿಮಾದ ಬಾಲನಟರಿಗೆ ಸೈಕಲ್ ಕೊಡಿಸಿದ ಶ್ವಾನಪ್ರಿಯೆ ರಮ್ಯಾ

ಒಂದಷ್ಟು ಕಾರಣಗಳಿಂದ ‘ಪಪ್ಪಿ’ ಚಿತ್ರ ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕ ಶೈಲಿಯ ಸಂಭಾಷಣೆ ಈ ಚಿತ್ರದಲ್ಲಿದೆ. ರಮ್ಯಾ ಅವರು ಸದ್ಯದಲ್ಲೇ ಸಿನಿಮಾ ವೀಕ್ಷಿಸಲಿದ್ದಾರೆ. ಅದಕ್ಕೂ ಮುನ್ನ ಅವರು ಈ ಸಿನಿಮಾದ ಬಾಲನಟರಿಗೆ ಗಿಫ್ಟ್ ನೀಡಿದ್ದಾರೆ. ಆ ಮೂಲಕ ಮಕ್ಕಳ ಬೆನ್ನು ತಟ್ಟಿದ್ದಾರೆ. ಆಯುಷ್‌ ಮಲ್ಲಿ ಅವರ ನಿರ್ದೇಶನ ಈ ಚಿತ್ರಕ್ಕಿದೆ.

‘ಪಪ್ಪಿ’ ಸಿನಿಮಾದ ಬಾಲನಟರಿಗೆ ಸೈಕಲ್ ಕೊಡಿಸಿದ ಶ್ವಾನಪ್ರಿಯೆ ರಮ್ಯಾ
Ramya Divya Spandana
ಮದನ್​ ಕುಮಾರ್​
|

Updated on: May 01, 2025 | 6:22 PM

Share

ಶ್ವಾನದ ಕಥೆ ಇರುವ ಅನೇಕ ಸಿನಿಮಾಗಳು ಈಗಾಗಲೇ ಜನಮನ ಗೆದ್ದಿವೆ. ಈಗ ಅದೇ ರೀತಿಯ ಕಹಾನಿ ಇರುವ ‘ಪಪ್ಪಿ’ (Puppy) ಸಿನಿಮಾ ಬಿಡುಗಡೆ ಆಗಿದೆ. ಶ್ವಾನಪ್ರಿಯರಿಗೆ ಈ ಸಿನಿಮಾ ಇಷ್ಟ ಆಗುತ್ತಿದೆ. ಖ್ಯಾತ ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಕೂಡ ಶ್ವಾನಪ್ರಿಯೆ ಎಂಬುದು ಎಲ್ಲಿಗೂ ಗೊತ್ತಿದೆ. ಶ್ವಾನಗಳನ್ನು ಅವರು ಮಕ್ಕಳಂತೆ ಪ್ರೀತಿಸುತ್ತಾರೆ. ಆ ಕಾರಣದಿಂದ ಅವರಿಗೆ ‘ಪಪ್ಪಿ’ ಸಿನಿಮಾದ ಕಂಟೆಂಟ್ ತುಂಬ ಇಷ್ಟ ಆಗಿದೆ. ಈ ಚಿತ್ರದಲ್ಲಿ ನಟಿಸಿರುವ ಬಾಲನಟರಿಗೆ ರಮ್ಯಾ (Ramya) ಅವರು ಒಂದು ಉಡುಗೊರೆ ನೀಡಿದ್ದಾರೆ.

‘ಪಪ್ಪಿ’ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದ್ದಾಗಲೇ ನಟಿ ರಮ್ಯಾ ಅವರು ಸಖತ್ ಇಷ್ಟಪಟ್ಟಿದ್ದರು. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಮೆಚ್ಚುಗೆ ಸೂಚಿಸಿದ್ದರು. ಇಂದು (ಮೇ 1) ‘ಪಪ್ಪಿ’ ಸಿನಿಮಾ ಬಿಡುಗಡೆ ಆಗಿದೆ. ಶ್ವಾನ ಸೇರಿದಂತೆ ಈ ಸಿನಿಮಾದಲ್ಲಿ ಅಭಿನಯಿಸಿರುವ ಮಕ್ಕಳ ಪ್ರತಿಭೆಗೆ ರಮ್ಯಾ ಮನ ಸೋತಿದ್ದಾರೆ. ಹಾಗಾಗಿ ಬಾಲನಟರ ಇಷ್ಟದಂತೆ ಅವರಿಗೆ ಸೈಕಲ್‌ ಗಿಫ್ಟ್‌ ಮಾಡಿದ್ದಾರೆ.

ರಮ್ಯಾ ಅವರು ಹೊಸಬರಿಗೆ ಯಾವಾಗಲೂ ಬೆಂಬಲ ನೀಡುತ್ತಾರೆ. ‘ಪಪ್ಪಿ’ ಸಿನಿಮಾದಲ್ಲಿ ಬಾಲ ಕಲಾವಿದರಾದ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು ಅವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವರ ನಟನೆ ರಮ್ಯಾಗೆ ಇಷ್ಟ ಆಗಿದೆ. ಮಕ್ಕಳ ಅಭಿನಯಕ್ಕೆ ಮನಸೋತ ರಮ್ಯಾ ಅವರು ಸ್ವತಃ ತಾವೇ ಬಂದು ಮಕ್ಕಳಿಗೆ ಸೈಕಲ್ ಕೊಡಿಸಿದ್ದಾರೆ.

ಇದನ್ನೂ ಓದಿ
Image
ನನಗೆ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ
Image
ನನಗೆ ಒಂದು ಕೋಟಿ, ಅವರಿಗೆ 5 ಕೋಟಿ: ಚಿತ್ರರಂಗದ ಅಸಮಾನತೆ ಬಗ್ಗೆ ರಮ್ಯಾ ಮಾತು
Image
ಇಂಟರ್​ವಲ್ ತನಕ ಕಥೆ ಕೇಳಿ ಎಕ್ಸ್​ಕ್ಯೂಸ್​ ಮಿ’ ಒಪ್ಪಿಕೊಂಡಿದ್ದ ರಮ್ಯಾ
Image
ಕಲಾವಿದರಿಗೆ ಬೆದರಿಕೆ ಹಾಕಬಾರದು: ಡಿಕೆಶಿ ಮಾತಿಗೆ ರಮ್ಯಾ ಪ್ರತಿಕ್ರಿಯೆ

ಹಲವು ಕಾರಣಗಳಿಂದ ‘ಪಪ್ಪಿ’ ಸಿನಿಮಾ ಗಮನ ಸೆಳೆಯುತ್ತಿದೆ. ಅಪ್ಪಟ ಉತ್ತರ ಕರ್ನಾಟಕದ ಭಾಷೆಯ ಸಂಭಾಷಣೆ ಈ ಸಿನಿಮಾದಲ್ಲಿದೆ. ಕಾಮಿಡಿ ಮತ್ತು ಎಮೋಷನ್​ ಬೆರೆತ ಕಹಾನಿ ಈ ಚಿತ್ರದಲ್ಲಿದೆ. ರಮ್ಯಾ ಅವರು ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಧ್ರುವ ಸರ್ಜಾ ಅರ್ಪಿಸಿರುವ ‘ಪಪ್ಪಿ’ ಚಿತ್ರಕ್ಕೆ ಆಯುಷ್‌ ಮಲ್ಲಿ ಅವರು ನಿರ್ದೇಶನ ಮಾಡಿದ್ದಾರೆ.

ಅಂದಪ್ಪ ಸಂಕನೂರು ಅವರು ‘ಪಪ್ಪಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ಅದೃಷ್ಟ ಸಂಕನೂರು, ದುರುಗಪ್ಪ ಕಾಂಬ್ಳಿ, ಋತ್ವಿಕ್ ಬಳ್ಳಾರಿ, ಆರಾವ ಲೋಹಿತ್ ನಾಗರಾಜ್, ರೇಣುಕಾ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಶ್ರೀಧರ್ ಕಶ್ಯಪ್, ರವಿ ಬಿಲ್ಲೂರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ

ಬಿ. ಸುರೇಶ್‌ ಬಾಬು ಅವರು ‘ಪಪ್ಪಿ’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ವಿಶ್ವ ಎನ್‌.ಎಂ. ಅವರು ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಹಾಸ್ಯದ ಜೊತೆಗೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ‘ಪಪ್ಪಿ’ ಸಿನಿಮಾಗೆ ಶ್ವಾನಪ್ರಿಯರು ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.