AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಎಂದಿದ್ದ ಸೋನು ನಿಗಮ್

ಸೋನು ನಿಗಮ್ ಅವರು ಕನ್ನಡದ ಬಗ್ಗೆ ತಮ್ಮ ಪ್ರೀತಿಯನ್ನು ಹಲವಾರು ಬಾರಿ ವ್ಯಕ್ತಪಡಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ನೀಡಿದ ‘ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯಿತು’ ಎಂಬ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.ಅವರ ಹೇಳಿಕೆಗೆ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿದೆ ಮತ್ತು ಅವರ ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಎಂದಿದ್ದ ಸೋನು ನಿಗಮ್
ಸೋನು ನಿಗಮ್
 ಶ್ರೀಲಕ್ಷ್ಮೀ ಎಚ್
| Edited By: |

Updated on:May 02, 2025 | 11:20 AM

Share

ಸೋನು ನಿಗಮ್ (Sonu Nigam) ಅವರು ಈಗ ಸುದ್ದಿಯಲ್ಲಿರೋದು ಗೊತ್ತೇ ಇದೆ. ‘ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯಿತು’ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನ ಕಾಲೇಜಿನಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅವರನ್ನು ಕೆಲವರು ವಿರೋಧಿಸಿದರೆ, ಇನ್ನೂ ಕೆಲವರು ಅವರ ಹಳೆಯ ಹೇಳಿಕೆಯನ್ನು ನೆನಪಿಸಿಕೊಂಡಿದ್ದಾರೆ. ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಹಿಂದಿಯಲ್ಲಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ಇದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ‘ಕಳೆದ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ’ ಎಂದಿದ್ದರು ಸೋನು ನಿಗಮ್.

ಸೋನು ನಿಗಮ್ ಅವರು ಆಲ್ಬಂ ಸಾಂಗ್​ಗಳನ್ನು ಹಾಡುತ್ತಿದ್ದರು. ಕನ್ನಡ ಚಿತ್ರರಂಗಕ್ಕೆ ಅವರು ಪರಿಚಿತರಾಗಿದ್ದು 90ರ ದಶಕದಲ್ಲಿ. ಕನ್ನಡದಲ್ಲಿ ಅವರು ಹಾಡಿದ ಮೊದಲ ಗೀತೆ ‘ಜೀವನದಿ’ ಸಿನಿಮಾದ ‘ಎಲ್ಲೋ ಯಾರೋ..’ ಹಾಡು. ನಂತರ 2000ನೇ ಇಸ್ವಿಯಲ್ಲಿ ಕನ್ನಡದಲ್ಲಿ ಭರ್ಜರಿ ಆಫರ್​ಗಳು ಬಂದವು. ‘ಒನ್ಸ್ ಅಪಾನ್ ಟೈಮ್​..’, ‘ಉಸಿರೇ.. ಉಸಿರೇ..’, ‘ಕನಸೋ ಇದು..’, ‘ಮುಂಗಾರು ಮಳೆಯೇ..’, ‘ಅನಿಸುತಿದೆ..’ ಹಾಡಿನಿಂದ ಹಿಡಿದು ಇತ್ತೀಚೆಗೆ ರಿಲೀಸ್ ಆದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ಹೇ ಗಗನ..’ ಹಾಡಿನವರೆಗೆ ಸೋನು ನಿಗಮ್ ಹಲವು ಹಾಡುಗಳನ್ನು ಹಾಡಿದ್ದಾರೆ. ಅವರು ಸಂಚಿತ್ ಹೆಗಡೆ ಜೊತೆ ಸೇರಿ ಮಾಡಿದ ‘ಮಾಯಾವಿ..’ ಸೂಪರ್ ಹಿಟ್ ಆಯಿತು.

ಇದನ್ನೂ ಓದಿ
Image
ಸೋನು ನಿಗಮ್ ಹೇಳಿಕೆಗೆ ಕನ್ನಡಿಗರ ತೀವ್ರ ವಿರೋಧ, ಯಾರು ಏನು ಹೇಳಿದರು?
Image
‘ಕನ್ನಡ.. ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯ್ತು’; ಸೋನು ನಿಗಮ್
Image
ಅಜಯ್ ದೇವಗನ್ ನಟನೆಯ ‘ರೇಡ್ 2’ ಒಟಿಟಿಗೆ ಯಾವಾಗ? ಮೊದಲ ದಿನದ ಗಳಿಕೆ ಎಷ್ಟು?
Image
ಖ್ಯಾತ ನಿರ್ದೇಶಕ ರಾಜಮೌಳಿಯ ನೆಚ್ಚಿನ ನಟಿ ಯಾರು ಗೊತ್ತಾ?

ಸೋನು ನಿಗಮ್ ವಿವಾದತ್ಮಕ ಹೇಳಿಕೆ

ಇಷ್ಟೆಲ್ಲ ಕನ್ನಡದ ಹಾಡು ಹೇಳಿರೋ ಸೋನು ನಿಗಮ್, ಈ ಮೊದಲು ಮಾತನಾಡಿದ್ದರು. ‘ಕಳೆದ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಎಂದು ನನಗೆ ಅನಿಸಿದ್ದು ಇದೆ. ಎಲ್ಲೇ ಹಾಡಲು ಹೋದರು ಕನ್ನಡ ಎಂಬುದನ್ನು ಕೇಳುತ್ತೇನೆ. ನಾನು ಸುಮಾರ 26-27 ಭಾಷೆಗಳಲ್ಲಿ ಹಾಡಿದ್ದಿರಬಹುದು ಎಂದು ನನಗೆ ಅನಿಸುತ್ತದೆ. ಹಿಂದಿಯಲ್ಲಿ ಸಾಕಷ್ಟು ಉತ್ತಮ ಹಾಡುಗಳನ್ನು ಹೇಳಿರಬಹುದು. ಅದಕ್ಕಿಂತ ಉತ್ತಮ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ‘ಕನ್ನಡ, ಕನ್ನಡ ಎಂದಿದ್ದಕ್ಕೆ ಪಹ್ಲಗಾಮ್ ದಾಳಿ ಆಯ್ತು’; ವಿವಾದದ ಕಿಡಿ ಹೊತ್ತಿಸಿದ ಸೋನು ನಿಗಮ್ 

ಕನ್ನಡದ ಬಗ್ಗೆ ಇಷ್ಟೆಲ್ಲ ಮನಸ್ಸು ಹೊಂದಿರೋ ಅವರು ಈ ರೀತಿ ಹೇಳಿಕೆ ನೀಡೋದು ಎಷ್ಟು ಸರಿ? ಅವರು ಈ ರೀತಿಯ ಹೇಳಿಕೆ ನೀಡಲು ಕಾರಣ ಏನು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತವೆ. ಇದಕ್ಕೆ ಅವರು ಸ್ಪಷ್ಟನೆ ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:52 am, Fri, 2 May 25