ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
ನಟಿ ರಮ್ಯಾ ಅವರು ‘ಅಪ್ಪು’ ಸಿನಿಮಾ ನೋಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಪುನೀತ್ ರಾಜ್ಕುಮಾರ್ ಫ್ಯಾನ್ಸ್ ಬಗ್ಗೆ ಮಾತನಾಡಿದ್ದಾರೆ. ಪುನೀತ್ ಜೊತೆಗಿನ ತಮ್ಮ ಒಡನಾಟವನ್ನು ಕೂಡ ರಮ್ಯಾ ನೆನಪು ಮಾಡಿಕೊಂಡಿದ್ದಾರೆ. ‘ಅಪ್ಪು’ ರೀತಿಯೇ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಆಗಬೇಕು ಎಂದು ರಮ್ಯಾ ಹೇಳಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನರಾದ ನಂತರವೂ ಅವರ ಮೇಲೆ ಜನರು ಇಟ್ಟಿರುವ ಅಭಿಮಾನ ಕಡಿಮೆ ಆಗಿಲ್ಲ. ಆ ಬಗ್ಗೆ ರಮ್ಯಾ (Ramya Divya Spandana) ಅವರು ಮಾತನಾಡಿದ್ದಾರೆ. ‘ಈ ಥರ ಫ್ಯಾನ್ಸ್ ಕ್ರೇಜ್ ಪಡೆಯಲು ಏನೋ ಪುಣ್ಯ ಮಾಡಿರಬೇಕು. ಇಷ್ಟು ವರ್ಷ ಆದ್ಮೇಲೆ ಕೂಡ ಯಾರ್ಯಾರೋ ಹೊಸಬರು ಬರುತ್ತಾರೆ. ಆದರೂ ಫ್ಯಾನ್ಸ್ ಇಟ್ಟಿರುವ ನಿಯತ್ತು ಎಂದಿಗೂ ಹೀಗೆಯೇ ಇರುತ್ತದೆ. ಅಪ್ಪು ಅವರು ಹೋದಮೇಲೆ ಕೂಡ ಜನರು ಇಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂದರೆ ಅವರು ಎಷ್ಟು ಒಳ್ಳೆಯ ಕೆಲಸ ಮಾಡಿರಬಹುದು ಅಂತ ನೀವೇ ಯೋಚಿಸಿ ನೋಡಿ’ ಎಂದಿದ್ದಾರೆ ರಮ್ಯಾ ದಿವ್ಯ ಸ್ಪಂದನಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.