ನನಗೆ ತೀರಾ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತಂಡದ ಜೊತೆ ರಮ್ಯಾ ಕಿರಿಕ್ ಮಾಡಿಕೊಂಡಿದ್ದಾರೆ. ಇಂದು (ಮಾರ್ಚ್ 6) ಕೂಡ ಈ ಕೇಸ್ಗೆ ಸಂಬಂಧಿಸಿಂತೆ ರಮ್ಯಾ ಅವರು ಕೋರ್ಟ್ಗೆ ಬಂದಿದ್ದರು. ಬಳಿಕ ಅವರು ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಸಂವಾದದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಕೇಸ್ ಕುರಿತು ಅವರು ಮಾತನಾಡಿದ್ದಾರೆ.
ನಟಿ ರಮ್ಯಾ (Ramya Divya Spandana) ಅವರು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡದ ಜೊತೆಗಿನ ಕಿರಿಕ್ ಬಗ್ಗೆ ಮಾತನಾಡಿದ್ದಾರೆ. ‘ಒಪ್ಪಂದದ ಪ್ರಕಾರ ಅವರು ನಡೆದುಕೊಂಡಿಲ್ಲ. ಈ ರೀತಿ ಯಾರಿಗೂ ಆಗಬಾರದು. ನನಗೆ ನ್ಯಾಯ ಸಿಗತ್ತೆ ಎಂಬ ನಂಬಿಕೆ ಇದೆ. ಸ್ಟಾರ್ ಆಗಿ ನಾನು ಹೊಸಬರ ಜೊತೆ ಹಣ ತೆಗೆದುಕೊಳ್ಳದೇ ಸಿನಿಮಾ ಮಾಡಿದ್ದೇನೆ. ಆದರೆ ಅವರು ಹೇಳಿದ್ದೇ ಬೇರೆ, ಮಾಡಿದ್ದೇ ಬೇರೆ. ಅದರಿಂದ ನನಗೆ ತುಂಬಾ ನಿರಾಸೆ ಆಯಿತು. ಅತಿಥಿ ಪಾತ್ರ ಅಂತ ಹಾಕಿಲ್ಲ. ನಾನೇ ಹೀರೋಯಿನ್ ಎಂಬ ರೀತಿ ಪೋಸ್ಟರ್ ಹಾಕಿದರು. ಅದರಿಂದ ನನ್ನ ಕಮ್ಬ್ಯಾಕ್ ಸಿನಿಮಾಗೆ ತೊಂದರೆ ಆಗತ್ತೆ’ ಎಂದು ರಮ್ಯಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ

ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್ಗೆ ಸೇರ್ಪಡೆ

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್ಡಿಕೆಯನ್ನು ಭೇಟಿಯಾದ ಸತೀಶ್
