ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ಸಂಚಿನ ರಹಸ್ಯ ಬಿಚ್ಚಿಟ್ಟ ಸಚಿವ ರಾಜಣ್ಣ
ಹನಿಟ್ರ್ಯಾಪ್ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ದೂರು ಕೊಡುವುದಾಗಿ ಹೇಳಿರುವ ಸಹಕಾರ ಸಚಿವ ಕೆಎನ್ ರಾಜಣ್ಣ, ಕಾಮ ಖೆಡ್ಡಾ ವಿಚಾರವಾಗಿ ಮತ್ತಷ್ಟು ವಿಚಾರ ಬಹಿರಂಗಪಡಿಸಿದ್ದಾರೆ. ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹಾಕೊಂಡಿದ್ದ ಹುಡುಗಿ ಬಂದಿದ್ದಳು. ಆ ಹುಡುಗಿ ಹೇಳಿದ್ದೇನು? ರಾಜಣ್ಣ ಹೇಳಿದ್ದೇನು? ಇಲ್ಲಿದೆ ವಿವರ.
ಬೆಂಗಳೂರು, ಮಾರ್ಚ್ 25: ಹನಿಟ್ರ್ಯಾಪ್ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ವಿಚಾರಗಳನ್ನು ಸಚಿವ ಕೆಎನ್ ರಾಜಣ್ಣ ಬಹಿರಂಗಪಡಿಸಿದ್ದಾರೆ. ಎರಡು ಬಾರಿ ಒಬ್ಬ ಹುಡುಗ ಬಂದಿದ್ದ. ಬ್ಲೂ ಜೀನ್ಸ್ ಹಾಕಿಕೊಂಡಿದ್ದ ಒಬ್ಬಳು ಹುಡುಗಿ 2 ಸಲ ಬಂದಿದ್ದಳು. ಮೊದಲ ಬಾರಿ ಬಂದಾಗ ಯಾರು ಎಂದು ಹೇಳಿರಲಿಲ್ಲ. ‘ಸರ್, ನಿಮ್ಮತ್ರ ಬಹಳ ಪರ್ಸನಲ್ಲಾಗಿ ಗುಟ್ಟಾಗಿ ಮಾತನಾಡಬೇಕು’ ಎಂದಿದ್ದಳು. ಎರಡನೇ ಸಲ ಬಂದಾಗ, ‘ಹೈಕೋರ್ಟ್ ವಕೀಲೆ’ ಎಂದು ಹೇಳಿಕೊಂಡಿದ್ದಳು. ಸಚಿವ ರಾಜಣ್ಣ ಬಿಚ್ಚಿಟ್ಟ ಸ್ಫೋಟಕ ರಹಸ್ಯಗಳ ಬಗ್ಗೆ ತಿಳಿಯಲು ವಿಡಿಯೋ ನೋಡಿ.