ಮಾರ್ಚ್ ತಿಂಗಳಲ್ಲೇ ಕೊಪ್ಪಳದಲ್ಲಿ ನೀರಿಗಾಗಿ ಹಾಹಾಕಾರ, ಖಾಲಿ ಕೊಡ ಹಿಡಿದು ರಸ್ತೆಮೇಲೆ ಪ್ರತಿಭಟಿಸಿದ ಜನ
ಮೊನ್ನೆ ಸದನದಲ್ಲಿ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ತೊಂದರೆಯನ್ನು ಬಹಳ ಮಾರ್ಮಿಕವಾಗಿ ಪ್ರಸ್ತಾಪಿಸಿದರು. ಭಾಗದ ಜನಪ್ರತಿನಿಧಿಳು ಮಳೆಗಾಲದಲ್ಲೇ ಎಚ್ಚೆತ್ತಕೊಳ್ಳಬೇಕಿತ್ತು. ಇದಿನ್ನೂ ಮಾರ್ಚ್ ತಿಂಗಳು ಉತ್ತರಾರ್ಧ. ಜೂನ್ ಮಧ್ಯ ಭಾಗದವರಗೆ ಇಲ್ಲಿಯ ಜನ ಅಕ್ಷರಶಃ ಸುಡುವ ಬಿಸಿಲಿನಿಂದ ತತ್ತರಿಸುತ್ತಾರೆ, ಕುಡಿಯಲು ನೀರು ಕೂಡ ಅವರಿಗೆ ಸಿಗಲ್ಲ.
ಕೊಪ್ಪಳ, 25 ಮಾರ್ಚ್: ಇದು ಕೇವಲ ಕೊಪ್ಪಳ ನಗರದ ವಾರ್ಡ್ ನಂಬರ್ 4 ರಲ್ಲಿರುವ ಬೋವಿ ಕಾಲೋನಿಯ ಸಮಸ್ಯೆ ಮಾತ್ರ ಅಲ್ಲ, ಇಡೀ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆ. ಕಳೆದ ಮಾನ್ಸೂನ್ ಸೀಸನಲ್ಲಿ ರಾಜ್ಯದಾದ್ಯಂತ ಉತ್ತಮ ಮಳೆಯಾದರೂ ಭಾಗದಲ್ಲಿ ನೀರಿಗಾಗಿ ಹಾಹಾಕಾರ. ಬಾವಿಗಳು, ಕೊಳವೆ ಬಾವಿಗಳು ಬತ್ತಿ ಹೋಗಿವೆ ಮತ್ತು ಸ್ಥಳೀಯ ಆಡಳಿತಗಳು ನೀರಿಗಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಲ್ಲ. ಕಳೆದ 5 ದಿನಗಳಿಂದ ನೀರು ಬಿಟ್ಟಿಲ್ಲವೆಂದು ಬೋವಿ ಕಾಲೋನಿ ಜನ ಗವಿಮಠದ ರಸ್ತೆಯಲ್ಲಿ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು ಮತ್ತು ಸ್ಥಳಕ್ಕೆ ಆಗಮಿಸಿದ್ದ ನಗರಸಭಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೀದರ್ನಲ್ಲಿ ನೀರಿಗಾಗಿ ಹಾಹಾಕಾರ: ಪ್ರಾಣಿ-ಪಕ್ಷಿಗಳ ದಾಹ ಇಂಗಿಸುತ್ತಿರುವ ಯುವಕರು